ಬೆಂಗಳೂರಲ್ಲಿ ಸಚಿವರ ಮನೆ ಮುಂದೆ ಸಿಬ್ಬಂದಿ ಮಾರಾಮಾರಿ! ವಿಡಿಯೋ ವೈರಲ್​

Hassle
Published on

ಬೆಂಗಳೂರು: ಸದಾಶಿವನಗರದಲ್ಲಿ ಸಚಿವರೊಬ್ಬರ ಮನೆ ಮುಂದೆ ಇಂದು ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್​ರ ನಿವಾಸದ ಬಳಿ ಶುಕ್ರವಾರ ಬೆಳಗ್ಗೆ ಸಿಬ್ಬಂದಿಗಳ ನಡುವೆ ಗಲಾಟೆ ಆಗಿದೆ. ಸಚಿವರ ಗನ್​ಮಾನ್ ತಿಮ್ಮಯ್ಯರಿಂದ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ಸೋಮಶೇಖರ್​ ಸಚಿವರ ಮನೆಯ ಖಾಸಗಿ ಡ್ರೈವರ್​. ಇವರಿಬ್ಬರು ಮನೆ ಮುಂದೆ ಉರುಳಾಡಿಕೊಂಡು, ಅಂಗಿ ಕಿತ್ತು ಬರುವಂತೆ ಕಿತ್ತಾಡಿಕೊಂಡಿದ್ದಾರೆ.

ನಿನ್ನೆ ಚಹಾ ಮಾರುತ್ತಿದ್ದ ಅಂಗವಿಕಲನಿಗೆ ತಿಮ್ಮಯ್ಯ ಹೊಡೆದಿದ್ದರು. ಇದನ್ನು ಸೋಮಶೇಖರ್ ವಿರೋಧಿಸಿದ್ದರು. ಇದೇ ವಿಚಾರವಾಗಿ ಇಂದು ಗಲಾಟೆ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಗರಂ ಆದ ಸಚಿವರು ಗನ್​ಮ್ಯಾನ್ ತಿಮ್ಮಯ್ಯನನ್ನು ತಮ್ಮ ಬಳಿ ಕೆಲಸಕ್ಕೆ ಬಾರದಂತೆ ಸೂಚಿಸಿದ್ದಾರೆ. (ಸಚಿವರ ಮನೆ ಮುಂದೆ ಸಿಬ್ಬಂದಿ ಗಲಾಟೆಯ ವಿಡಿಯೋಗೆ ಕೆಳಗೆ ಕೊಟ್ಟಿರುವ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಕ್ಲಿಕ್​ ಮಾಡಿ. ಹೆಗಲಲ್ಲಿ ಬ್ಯಾಗ್​ ಹಾಕಿರುವ ವ್ಯಕ್ತಿ ಸೋಮಶೇಖರ್, ಮತ್ತೊಬ್ಬ ಗನ್​ಮ್ಯಾನ್ ತಿಮ್ಮಯ್ಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net