

ಮೆಕ್ಸಿಕೋ: ಮಾಕದ ದ್ರವ್ಯ ಮಾಫಿಯಾದ ಕುರಿತು ತನಿಖೆ ನಡೆಸಲು ಹೋಗಿದ್ದ ಪೊಲೀಸ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆದಿರುವ ಭಯಾನಕ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಘಟನೆಯಲ್ಲಿ ಎಂಟು ಮಂದಿ ಪೊಲೀಸರು ಮತ್ತು ಮೂವರು ಪ್ರಾಸಿಕ್ಯೂಷನ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇಲ್ಲಿಗೆ ಸಮೀಪದ ಮೈಕೋವಕಾನ್ನಲ್ಲಿ 2019ರಲ್ಲಿ ಬಂದೂಕುಧಾರಿಗಳು ಹೊಂಚು ಹಾಕಿ 14 ಪೊಲೀಸರನ್ನು ಕೊಂದಿದ್ದರು. ಅದಾದ ಮೇಲೆ ನಡೆದಿರುವ ಅತಿ ದೊಡ್ಡ ಹತ್ಯಾಕಾಂಡ ಇದಾಗಿದೆ.
ಈ ಭಾಗದಲ್ಲಿ ಮಾದಕ ವ್ಯಸನ ಜಾಲ ಹೆಚ್ಚಾಗಿದೆ. ಅದನ್ನು ಬೆನ್ನಟ್ಟಿ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಿಗಾಗಿ ಶೋಧನಾಕಾರ್ಯ ನಡೆದಿದೆ.
ಸೈನಿಕರು, ನೌಕಾಪಡೆಯವರು ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳ ನೇತರತ್ವದಲವಲಿ ಹತ್ಯಾಕಾಂಡ ನಡೆಸಿರುವವರಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ರಾಜ್ಯ ಸಾರ್ವಜನಿಕ ಸುರಕ್ಷತಾ ವಿಭಾಗದ ಮುಖ್ಯಸ್ಥ ರೊಡ್ರಿಗೋ ಮಾರ್ಟಿನೆಜ್ ಸೇಲಿಸ್ ಹೇಳಿದ್ದಾರೆ.
ಡ್ರಗ್ ಮಾಫಿಯಾ ಬಹು ಜೋರಾಗಿದ್ದು, ಅವರ ತನಿಖೆಗೆಂದು ಈ ತಂಡ ಹೋಗಿತ್ತು. ಈ ಸಂದರ್ಭದಲ್ಲಿ ಬಂದೂಕುಧಾರಿಗಳಿಂದ ದಾಳಿ ನಡೆದಿದೆ ಎಂದು ಅವರು ಹೇಳಿದರು. ಈ ಆಕ್ರಮಣವು ಮೆಕ್ಸಿಕನ್ ಸರ್ಕಾರದ ಮೇಲಿನ ಆಕ್ರಮಣವಾಗಿದೆ. ನಮ್ಮೆಲ್ಲ ಶಕ್ತಿ ಒಟ್ಟುಗೂಡಿಸಿ ಮರು ದಾಳಿ ನಡೆಸುವುದಾಗಿ ಅವರು ತಿಳಿಸಿದ್ದಾರೆ.