More

    ರೇಪ್​ ಕೇಸ್​ನಲ್ಲಿ ಬೇಲ್​ ಬೇಕೆ? ರಾಖಿ ಕಟ್ಟಿಸಿಕೋ ಎಂದಿದ್ದ ಹೈಕೋರ್ಟ್! ಗರಂ ಆದ ‘ಸುಪ್ರೀಂ’​

    ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ, ಆರೋಪಿಗೆ ಜಾಮೀನು ನೀಡಬೇಕು ಎಂದರೆ ಆತ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್​ ಇತ್ತೀಚೆಗೆ ತೀರ್ಪು ನೀಡಿತ್ತು. ಹೀಗೆ ಮಾಡಿದರೆ ಮಾತ್ರ ಆತನಿಗೆ ಜಾಮೀನು ಮಂಜೂರು ಮಾಡುವುದಾಗಿ ಹೇಳಿತ್ತು.

    ಈ ತೀರ್ಪಿಗೆ ಸಂತ್ರಸ್ತೆಯ ಕುಟುಂಬ ಸೇರಿದಂತೆ ಹಲವರು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದರು. 2020ರ ಜುಲೈ ತಿಂಗಳಿನಲ್ಲಿ ನೀಡಿದದ್ ಈ ತೀರ್ಪಿನ ವಿರುದ್ಧ ವಕೀಲೆ ಅಪರ್ಣಾ ಭಟ್​ ಹಾಗೂ ಇತರ ಎಂಟು ಮಂದಿ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

    ಇಂಥ ತೀರ್ಪಿನಿಂದ ಇಡೀ ಮಹಿಳಾ ಸಮುದಾಯಕ್ಕೆ ಬೇಸರವಾಗಿದೆ. ಆದ್ದರಿಂದ ಈ ಆದೇಶಕ್ಕೆ ತಡೆ ನೀಡಬೇಕು ಎಂದು ಅವರು ಕೋರಿದ್ದರು. ಕೇವಲ ರಾಖಿ ಕಟ್ಟಿಸಿಕೊಳ್ಳಿ ಎನ್ನುವ ಮೂಲಕ ಅತ್ಯಾಚಾರದಂಥ ಘೋರ ಅಪರಾಧಗಳನ್ನು ನ್ಯಾಯಾಲಯಗಳು ಕ್ಲುಲ್ಲಕವಾಗಿಸುವುದು ಉಚಿತವಲ್ಲ. ಇದರಿಂದ ಮಹಿಳೆಯರಿಗೆ ಅನ್ಯಾಯವಾದಂತೆ ಎಂದು ಅವರು ವಾದಿಸಿದ್ದರು. ಹೈಕೋರ್ಟ್​ನ ಈ ಆದೇಶದ ಬಗ್ಗೆ ಸುಪ್ರೀಂಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

    ರಾಖಿ ಕಟ್ಟಿಸಿಕೊಳ್ಳುವ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್​ ಪೀಠ, ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನ ನಿರ್ವಹಿಸುವಾಗ ನ್ಯಾಯಾಲಯಗಳು ಏನೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವೀಲ್ಕರ್​ ಹಾಗೂ ಎಸ್​.ರವೀಂದ್ರ ಭಟ್​ ನೇತೃತ್ವದ ಪೀಠ ನಿರ್ದೇಶನ ನೀಡಿದೆ.

    ಈ ವಿಷಯ ಸುಪ್ರೀಂಕೋರ್ಟ್​ ಬಾಗಿಲಿಗೆ ಬಂದಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹೈಕೋರ್ಟ್​ ಆದೇಶದ ಕುರಿತು ಅಭಿಪ್ರಾಯ ಹಾಗೂ ಸಲಹೆ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರಿಗೆ ತಿಳಿಸಿತ್ತು. ಅದರಂತೆ ನ್ಯಾಯಾಧೀಶರ ಸಹಾನುಭೂತಿಯ ಧೋರಣೆಯನ್ನ ತಿದ್ದಲು ಪರಿಗಣಿಸಬಹುದಾದ ಕ್ರಮಗಳ ಬಗ್ಗೆ ಲಿಖಿತ ಅರ್ಜಿಗಳನ್ನು ಅವರು ಸಲ್ಲಿಸಿದ್ದರು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರನ್ನು ಆಕ್ಷೇಪಿಸುವಂತಹ ಆದೇಶಗಳನ್ನು ಪಿತೃಪ್ರಧಾನ ಸಮಾಜ ಮನಸ್ಥಿತಿಯುಳ್ಳ ನ್ಯಾಯಾಧೀಶರು ಹೊರಡಿಸುವುದು ಉಚಿತವಲ್ಲ ಎಂದು ಹೇಳಿದ್ದರು. ಅದರಂತೆ ಸುಪ್ರೀಂಕೋರ್ಟ್​ ಇದೀಗ ತನ್ನ ಎಲ್ಲಾ ಅಧೀನದ ಕೋರ್ಟ್​ಗಳಿಗೆ ನಿರ್ದೇಶನ ನೀಡಿದೆ.

    ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

    ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್​ ಬ್ಲಾಸ್ಟ್​; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ

    ಯುವತಿ ಮೆಸೇಜ್​ನಲ್ಲಿ ಸೆಕ್ಸ್​ಗೆ ಅನುಮತಿ ನೀಡಿದ ಮಾತ್ರಕ್ಕೆ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts