ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಅವರ 'ಬಾಳೇ ಬಂಗಾರ'ಕ್ಕೆ ಏಷ್ಯಾ, ಇಂಡಿಯಾ ಮತ್ತು ಕಲಾಂ ಬುಕ್​ ಆಫ್​ ರೆಕಾರ್ಡ್ಸ್​

Bharathi Vishnuvardhan
Published on

ಬೆಂಗಳೂರು: ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನಾಧಾರಿತ ಸಾಕ್ಷ್ಯಚಿತ್ರ 'ಬಾಳೇ ಬಂಗಾರ'ಕ್ಕೆ ಇದೀಗ ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಲಭಿಸಿದೆ. ಮಾತ್ರವಲ್ಲ, ಇದು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಕಲಾಂ ಬುಕ್ ಆಫ್​ ರೆಕಾರ್ಡ್ಸ್​ಗೂ ಪಾತ್ರವಾಗಿದೆ.

ಈ ಸಾಕ್ಷ್ಯಚಿತ್ರ ದಾಖಲೆಗೆ ಭಾಜನವಾದ ವಿಷಯವನ್ನು ಅವರ ಅಳಿಯ, ನಟ ಅನಿರುದ್ಧ ಅವರು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಅನಿರುದ್ಧ ನಿರ್ದೇಶನ ಹಾಗೂ ಅವರ ಪತ್ನಿ ಕೀರ್ತಿ ವಿಷ್ಣುವರ್ಧನ್​ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಇದು ಅತ್ಯಂತ ಬದುಕಿರುವ ಮೇರುನಟಿಯೊಬ್ಬರ ಕುರಿತ ದೀರ್ಘಾವಧಿಯ ಸಾಕ್ಷ್ಯಚಿತ್ರ ಎಂಬ ಹಿನ್ನೆಲೆಯಲ್ಲಿ ಹೀಗೆ ಮೂರು ದಾಖಲೆಗಳಿಗೆ ಪಾತ್ರವಾಗಿದೆ.

ಕೀರ್ತಿ ಇನ್ನೋವೇಷನ್ಸ್ ನಿರ್ಮಾಣದ ಈ ಸಾಕ್ಷ್ಯಚಿತ್ರದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನ ಎಲ್ಲವೂ ಅನಿರುದ್ಧ ಅವರದ್ದಾಗಿತ್ತು, ಈ ಮೂಲಕ ಅವರು ದಾಖಲೆ ಸ್ಥಾಪಿಸಿದ್ದಾರೆ. ಸಿನಿಮಾ ರೀತಿಯಲ್ಲೇ ಮೂಡಿಬಂದಿರುವ ಈ ಸಾಕ್ಷ್ಯಚಿತ್ರ 'ಬಾಳೇ ಬಂಗಾರ' ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದಿರುವ ಅನಿರುದ್ಧ, ಈ ವರೆಗೆ ತಾವು ಇಂಥ 20 ದಾಖಲೆಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net