ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್ಕೇರಿಸಲು 'ಓಲ್ಡ್​ ಮಾಂಕ್' ಕೊಡಲು ಸಜ್ಜಾದ ಶ್ರೀನಿ!

Old Monk
Published on

ಬೆಂಗಳೂರು: ನಟ-ನಿರ್ದೇಶಕ ಶ್ರೀನಿ ಪ್ರೇಮಿಗಳಿಗೆ 'ಓಲ್ಡ್​ ಮಾಂಕ್​' ಕೊಡಲು ಸಜ್ಜಾಗಿದ್ದಾರೆ. ಆ ಮೂಲಕ ಪ್ರೇಮಿಗಳ ದಿನದ ಜೋಶ್​ನಲ್ಲಿರುವವರ ಕಿಕ್​ ಏರಿಸಲಿದ್ದಾರೆ. ಹಾಗಂತ 'ಓಲ್ಡ್​ ಮಾಂಕ್' ಎಂದ ಕೂಡಲೇ ಬೇರೇನೋ ಎಂದು ಭಾವಿಸಬೇಕಾಗಿಲ್ಲ. ಏಕೆಂದರೆ ಅಷ್ಟಕ್ಕೂ ಶ್ರೀನಿ ಪ್ರೇಮಿಗಳ ದಿನದ ಸಂದರ್ಭದಲ್ಲಿ ನೀಡಲು ಹೊರಟಿರುವ ಓಲ್ಡ್​ಮಾಂಕ್​ ಅದಲ್ಲ.

ಈ ಓಲ್ಡ್​ ಮಾಂಕ್ ಶ್ರೀನಿ ನಿರ್ದೇಶನದ ನೂತನ ಚಿತ್ರ. ಈಗಾಗಲೇ ಸಿನಿಮಾ ನಿರ್ಮಾಣ ಪೂರ್ಣಗೊಳಿಸಿರುವ ಅವರು ಅದರ ಬಿಡುಗಡೆಗೆ ಸಜ್ಜಾಗಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಮೂರು ದಿನ ಮೊದಲೇ ಈ ಚಿತ್ರವನ್ನು ತೆರೆಗೆ ತರಲಿದ್ದಾರೆ. ಅಂದರೆ ಫೆ. 11ರಂದು ಓಲ್ಡ್​ ಮಾಂಕ್ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಈ ಚಿತ್ರದಲ್ಲಿ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿಯೂ ಶ್ರೀನಿ ಅಭಿನಯಿಸಿದ್ದು, ಇವರಿಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ನಟಿಸಿದ್ದಾರೆ. 'ಇದು ಹಾಸ್ಯಮಯ ಪ್ರೇಮಕಥಾನಕದ ಚಿತ್ರವಾಗಿದ್ದು, ಇಲ್ಲಿ ಅದಿತಿ ಪಕ್ಕಾ ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ, ಚಿತ್ರದ ಟೈಟಲ್​ಗೆ ತಕ್ಕಂತೆ ಈ ಸಿನಿಮಾದಲ್ಲಿ 18 ವೃದ್ಧ ಜೋಡಿಗಳಿರುವುದು ಮತ್ತೊಂದು ವಿಶೇಷ' ಎನ್ನುತ್ತಾರೆ ಶ್ರೀನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net