More

    ಸಾರ್ವಜನಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರಷ್ಟೇ ಹೋಟೆಲ್​ಗೆ ಪ್ರವೇಶ!; ಕ್ರಿಸ್​ಮಸ್​​-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊಸ ಆದೇಶ

    ಬೆಂಗಳೂರು: ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಣೆ ಆಗುವಂತೆ ನಿಗಾ ವಹಿಸಲು ಮುಂದಾಗಿರುವ ಸರ್ಕಾರ ಹಬ್ಬದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

    ವಿಶೇಷವಾಗಿ ಕ್ರಿಸ್​ಮಸ್​ ಹಾಗೂ ಹೊಸವರ್ಷವನ್ನು ಸದ್ದುಗದ್ದಲ ಇಲ್ಲದೆ ನಡೆಯುವಂತೆ ಮಾಡುವ ಸಲುವಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅದರಲ್ಲೂ ಕ್ಲಬ್​, ಪಬ್​, ರೆಸ್ಟೋರೆಂಟ್​, ಹೋಟೆಲ್​, ಉದ್ಯಾನ ಅಥವಾ ಖಾಸಗಿ ಸ್ಥಳದಲ್ಲಿ ಆಚರಣೆಗೆ ಅವಕಾಶ ನೀಡಿದ್ದರೂ ಡಿಜೆ, ಆರ್ಕೆಸ್ಟ್ರಾ ಮತ್ತು ಸಮೂಹನೃತ್ಯಕ್ಕೆ ಅವಕಾಶ ಕೊಟ್ಟಿಲ್ಲ.

    ಇದನ್ನೂ ಓದಿ: ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಅಲ್ಲದೆ ರೆಸ್ಟೋರೆಂಟ್​, ಹೋಟೆಲ್​, ಕ್ಲಬ್​, ಪಬ್​ಗಳು ಎಂದಿನಂತೆ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸಬೇಕು. ಜತೆಗೆ ಸಿಬ್ಬಂದಿ ಆರ್​ಟಿಪಿಸಿಆರ್​ ನೆಗೆಟಿವ್​ ಮತ್ತು 2 ಡೋಸ್​ ಕೋವಿಡ್​ ಲಸಿಕೆ ಕಡ್ಡಾಯವಾಗಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಅಷ್ಟು ಮಾತ್ರವಲ್ಲದೆ, ಸಾರ್ವಜನಿಕರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರುವುದನ್ನು ಪ್ರದರ್ಶಿಸಿದ ನಂತರವೇ ಅವರಿಗೆ ರೆಸ್ಟೋರೆಂಟ್​, ಹೋಟೆಲ್​, ಕ್ಲಬ್​, ಪಬ್​ಗಳ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.

    ಡಿ. 30ರಿಂದ ಜ. 2ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತವೆ. ಮತ್ತಷ್ಟು ನಿಯಮಗಳು ಈ ಕೆಳಗಿನಂತಿವೆ.

    ಸಾರ್ವಜನಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರಷ್ಟೇ ಹೋಟೆಲ್​ಗೆ ಪ್ರವೇಶ!; ಕ್ರಿಸ್​ಮಸ್​​-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊಸ ಆದೇಶ ಸಾರ್ವಜನಿಕರು ಎರಡೂ ಡೋಸ್ ಲಸಿಕೆ ಪಡೆದಿದ್ದರಷ್ಟೇ ಹೋಟೆಲ್​ಗೆ ಪ್ರವೇಶ!; ಕ್ರಿಸ್​ಮಸ್​​-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊಸ ಆದೇಶ

    ಒಮಿಕ್ರಾನ್​ ಸೋಂಕು ಹರಡುವಿಕೆ ಡೆಲ್ಟಾಗಿಂತ 3 ಪಟ್ಟು ಅಧಿಕ; ಜಿಲ್ಲಾಮಟ್ಟದಲ್ಲೇ ಜಾಗ್ರತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    ‘ಆರ್​ಆರ್​ಆರ್​’ ನಡುವೆ ತೂರಲೆತ್ನಿಸಿದ ‘ನಟ ಭಯಂಕರ’; ಕೊನೆಗೂ ಬೇಡ ಎಂದು ಸುಮ್ಮನಾದ್ನಂತೆ ‘ಒಳ್ಳೇ ಹುಡುಗ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts