More

  ಮಾನವೀಯತೆ ಮೆರೆದ ಪ್ರವಾಸಿ ಮಾರ್ಗದರ್ಶಿ

  ಹೊಸಪೇಟೆ: ಹಂಪಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಬ್ಯಾಗ್ ಕಳೆದುಕೊಂಡಿದ್ದ ಮುಂಬೈ ಮೂಲದ ಯುವತಿ ಶೃತಿ ಶಾ ಎಂಬುವರಿಗೆ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ ಹುಡುಕಿ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ.

  ಇನ್ನೂ ಓದಿ : ಹಂಪಿಯಲ್ಲಿ ಕಳೆದುಕೊಂಡಿದ್ದ 2 ದುಬಾರಿ ಐಫೋನ್​ಗಳನ್ನು ಯುವತಿಯರಿಬ್ಬರಿಗೆ ಮರಳಿಸಿದ ಪ್ರವಾಸಿ ಮಿತ್ರರು

  ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಆವರಣವನ್ನು ಸ್ವಚ್ಛತೆ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿದ್ದ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿಗೆ ಮೊಬೈಲ್, ಎಟಿಎಂ, ನಗದು ಸೇರಿ ದಾಖಲಾತಿವೊಳ್ಳ ಬ್ಯಾಗ್ ಸಿಕ್ಕಿದೆ. ಕೂಡಲೇ ಸಾಮಾಜಿಕ ಜಾಲತಾಣ ಹಾಗೂ ದೇವಸ್ಥಾನದ ಸಿಬ್ಬಂದಿ, ಸುತ್ತಮುತ್ತಲಿನ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ಹಂಚಿಕೊAಡಿದ್ದಾರೆ.

  ಯಾರಾದರೂ ಬ್ಯಾಗ್ ಕಳೆದುಕೊಂಡಿದ್ದೀರಾ? ಯಾರಾದೂ ಕಳೆದುಕೊಂಡರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪ್ರವಾಸಿಗರನ್ನೂ ಸೇರಿ ಸ್ಥಳೀಯರಿಗೂ ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆ ನಂತರ ಬಂದ ಬ್ಯಾಗ್ ಕಳೆದು ಕೊಂಡ ಯುವತಿಗೆ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ ಬ್ಯಾಗ್ ನೀಡಿ ಮಾನವೀಯತೆ ಮೆರೆದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts