ಹಂಪಿಯಲ್ಲಿ ಕಳೆದುಕೊಂಡಿದ್ದ 2 ದುಬಾರಿ ಐಫೋನ್​ಗಳನ್ನು ಯುವತಿಯರಿಬ್ಬರಿಗೆ ಮರಳಿಸಿದ ಪ್ರವಾಸಿ ಮಿತ್ರರು

iPhone
Published on

ವಿಜಯನಗರ: ಹಂಪಿ ಭೂಮಿಮಟ್ಟದ ಶಿವಾಲಯ ದೇವಾಲಯದ ಹತ್ತಿರ ಪ್ರವಾಸಿಗರು ಕಳೆದುಕೊಂಡಿದ್ದ ಎರಡು ದುಬಾರಿ ಬೆಲೆಯ ಐಪೋನ್‌ಗಳನ್ನು ಪ್ರವಾಸಿ ಮಿತ್ರರು ಹುಡುಕಿ ಕಳೆದುಕೊಂಡಿದ್ದವರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇತ್ತೀಚಿಗೆ ಹಂಪಿಗೆ ಭೇಟಿ ನೀಡಿದ ಆಂಧ್ರ ಪ್ರದೇಶ ಮೂಲದ ಪ್ರವಾಸಿಗರು, ಭೂಮಿಮಟ್ಟದ ಶಿವಾಲಯದ ದೇವಾಲಯ ವೀಕ್ಷಣೆ ಬಳಿಕ ಅಲ್ಲಿಯೇ ಬೆಲೆಬಾಳುವ ಎರಡು ಐಪೋನ್‌ಗಳನ್ನು ಮರೆತು ಹೋಗಿದ್ದರು.

ಹಂಪಿಯ ಪ್ರವಾಸಿ ಮಿತ್ರರಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಯಕ್, ಜಯಪ್ರಕಾಶ್ ಹಾಗೂ ಓಬಳೇಶ್ ಅವರು ಪ್ರವಾಸಿಗರಿಗೆ ಮೊಬೈಲ್ ಪೋನ್‌ಗಳನ್ನು ಹುಡುಕಿ ಕೊಡುವ ಮೂಲಕ ಪ್ರಾಮಾಣಿಕತೆ ತೋರಿದ್ದಾರೆ. ಇವರ ಕಾರ್ಯಕ್ಕೆ ಸ್ಥಳೀಯರಿಂದ ತ್ರೀವ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net