More

    ಜಪಾನ್​ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 92ಕ್ಕೆ ಏರಿಕೆ: 242ಕ್ಕೂ ಹೆಚ್ಚು ಮಂದಿ ನಾಪತ್ತೆ

    ಟೋಕಿಯೋ: ಹೊಸ ವರ್ಷದಂದೇ ಸೂರ್ಯೋದಯದ ನಾಡು ಜಪಾನ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಮೃತಪಟ್ಟವರ ಸಂಖ್ಯೆ 92ಕ್ಕೆ ಏರಿದೆ. ಅಲ್ಲದೆ, ಈ ಅವಘಡದಲ್ಲಿ 242 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

    ಇಡೀ ಜಗತ್ತೇ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಸಂಭ್ರಮದಲ್ಲಿ ಮುಳುಗಿದ್ದರೆ ಜಪಾನ್​ ಮಾತ್ರ 7.6 ತೀವ್ರತೆಯ ಭೂಕಂಪದಿಂದ ನಲುಗಿತು. ಒಂದಲ್ಲ ಎರಡಲ್ಲ ಸಾಲು ಸಾಲು ಕಂಪನಗಳಿಂದ ಜಪಾನ್​ ಮಂದಿ ಭಯದಲ್ಲಿ ಮುಳುಗಿದರು. ನಿರಂತರ ಭೂಕಂಪನದಿಂದ ಸುನಾಮಿ ಆತಂಕವೂ ಸಹ ಆವರಿಸಿತ್ತು.

    ಜಪಾನ್​ನ ಇಶಿಕವಾ ಪ್ರಾಂತ್ಯದ ನೋಟೋ ವಲಯದಲ್ಲಿ ಸ್ಥಳೀಯ ಕಾಲಮಾನ ಸಂಜೆ 4.10ರ ಸುಮಾರಿಗೆ ಜನವರಿ 1ರಂದೇ ಭೂಕಂಪನ ಸಂಭವಿಸಿತು. ಇದರಿಂದ ಜಪಾನ್​ನಲ್ಲಿ ಸಾಕಷ್ಟು ಹಾನಿ ಉಂಟಾಗಿದ್ದು, ಇಶಿಕವಾದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಯವರೆಗೆ 242 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಕ್ಯೋಡೋ ವರದಿ ಮಾಡಿದೆ.

    ಭೂಕಂಪಕ್ಕೆ ಅತಿ ಹೆಚ್ಚು ಹಾನಿಗೊಳಗಾದ ಜಪಾನ್​ನ ಕರಾವಳಿ ನಗರ ವಾಜಿಮಾದಲ್ಲಿ 40ಕ್ಕೂ ಹೆಚ್ಚು ಜನರು ಭೂಸಮಾಧಿಯಾಗಿದ್ದಾರೆ. 4600 ಸಿಬ್ಬಂದಿ ಒಳಗೊಂಡಿರುವ ಜಪಾನ್‌ನ ಸ್ವ-ರಕ್ಷಣಾ ಪಡೆಗಳು ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದು, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಸಹ ಸಾಥ್​ ನೀಡಿದೆ. ಸದ್ಯ ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಜಪಾನಿನ ಜಿಯೋಸ್ಪೇಷಿಯಲ್ ಇನ್ಫಾರ್ಮೇಶನ್ ಅಥಾರಿಟಿಯ ಇತ್ತೀಚಿನ ಅಂದಾಜಿನ ಪ್ರಕಾರ, ಭೂಕಂಪನದ ಪರಿಣಾಮ ವಾಜಿಮಾ ನಗರದ ಮಧ್ಯಭಾಗದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಬಳಿಕ 4.5 ಫುಟ್ಬಾಲ್ ಮೈದಾನಗಳ ಗಾತ್ರಕ್ಕೆ ಸಮನಾದ ಸುಮಾರು 48,000 ಚದರ ಮೀಟರ್ ವಿಸ್ತೀರ್ಣದ ಪ್ರದೇಶವು ನಾಶವಾಗಿದೆ ಎಂದು ಕ್ಯೋಡೋ ವರದಿ ಮಾಡಿದೆ.

    ಭೂಕಂಪನದಿಂದ ಸಂಭವಿಸಿರುವ ಭೂಕುಸಿತದಿಂದಾಗಿ 10ಕ್ಕೂ ಹೆಚ್ಚು ಸ್ಥಳಗಳ ರಸ್ತೆಗಳು ಸಂಪೂರ್ಣ ಮುಚ್ಚಿ ಹೋಗಿರುವುದರಿಂದ ಅಗತ್ಯ ಸಾಮಗ್ರಿಗಳ ವಿತರಣೆ ಜಪಾನ್​ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ 700ಕ್ಕೂ ಹೆಚ್ಚು ಜನರು ಇನ್ನೂ ಭೂಕಂಪನ ವಲಯದಲ್ಲೇ ಸಿಲುಕಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸುಮಾರು 30,000 ಕುಟುಂಬಗಳು ವಿದ್ಯುತ್ ಕಡಿತ ಪರಿಣಾಮ ಎದುರಿಸುತ್ತಿವೆ ಮತ್ತು 13 ನಗರಗಳು ಹಾಗೂ ಪಟ್ಟಣಗಳಲ್ಲಿ 80,000 ಕುಟುಂಬಗಳಿಗೆ ನೀರು ಸರಬರಾಜಿನಲ್ಲಿ ಅಡೆತಡೆ ಉಂಟಾಗಿದೆ. (ಏಜೆನ್ಸೀಸ್​)

    ತೆಲಂಗಾಣ ಮಾಜಿ ಸಿಎಂ KCR ಭೇಟಿಯಾಗಿ ಆರೋಗ್ಯ ವಿಚಾರಿಸಿದ ಆಂಧ್ರ ಸಿಎಂ ಜಗನ್​

    Israel-Hamas War: ಅಲ್-ಖೈದಾ ಮುಂದಿನ ಟಾರ್ಗೆಟ್ ಈ ದಿಗ್ಗಜ ಉದ್ಯಮಿಗಳು; ಲೋನ್ ವುಲ್ಫ್ ನಂತೆ ಕೆಲಸ ಮಾಡಲು ಕರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts