More

    ತೆಲಂಗಾಣ ಮಾಜಿ ಸಿಎಂ KCR ಭೇಟಿಯಾಗಿ ಆರೋಗ್ಯ ವಿಚಾರಿಸಿದ ಆಂಧ್ರ ಸಿಎಂ ಜಗನ್​

    ಹೈದರಾಬಾದ್​: ಹಿಪ್ ರಿಪ್ಲೇಸ್ಮೆಂಟ್​​ ಶಸ್ತ್ರಚಿಕಿತ್ಸೆ ಒಳಗಾಗಿ ಚೇತರಿಸಿಕೊಂಡ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

    ಗುರುವಾರ ವಿಶೇಷ ವಿಮಾನದಲ್ಲಿ ವಿಜಯವಾಡ ನಗರದಿಂದ ಬೇಗುಂಪೇಟೆಗೆ ಬಂದಿಳಿದ ಸಿಎಂ ಜಗನ್ ಅವರನ್ನು ಬಿಆರ್​ಎಸ್​ ಶಾಸಕರಾದ ವೇಮುಲಾ ಪ್ರಶಾಂತ್​ ರೆಡ್ಡಿ ಮತ್ತು ಪಲ್ಲ ರಾಜೇಶ್ವರ್​​ ರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಿಎಂ ಜಗನ್​ ಅವರು ಹೈದರಾಬಾದ್​ನ ನಂದಿನಗರದಲ್ಲಿರುವ ಕೆಸಿಆರ್​ ನಿವಾಸದ ಭೇಟಿ ನೀಡಿದರು.

    ಕೆಸಿಆರ್ ನಿವಾಸದಲ್ಲಿ ವೈಎಸ್ ಜಗನ್ ಅವರನ್ನು ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ಕೆಸಿಆರ್​ ಪುತ್ರ ಕೆ.ಟಿ. ರಾಮರಾವ್ ಮತ್ತು ಇತರ ಹಿರಿಯ ಬಿಆರ್‌ಎಸ್ ಮುಖಂಡರಾದ ತಲಸಾನಿ ಶ್ರೀನಿವಾಸ ಯಾದವ್, ಮಹಮೂದ್ ಅಲಿ, ಜೋಗಿನಪಲ್ಲಿ ಸಂತೋಷ್ ಕುಮಾರ್, ಪಿ ಕೌಶಿಕ್ ರೆಡ್ಡಿ, ಎ ಜೀವನ್ ರೆಡ್ಡಿ ಮತ್ತು ಸಿ.ಎಚ್ ಲಿಂಗಯ್ಯ ಅವರು ಸ್ವಾಗತಿಸಿದರು.

    Jagan 1

    ಮೂಲಗಳ ಪ್ರಕಾರ ಜಗನ್​ ರೆಡ್ಡಿ ಅವರು ಕೆಸಿಆರ್​ ನಿವಾಸದಲ್ಲಿ ಸುಮಾರು ಒಂದು ಗಂಟೆ ಸಮಯ ಕಳೆದರು ಮತ್ತು ಕೆಸಿಆರ್​ ಆರೋಗ್ಯವನ್ನು ವಿಚಾರಿಸಿದರು. ಚಂದ್ರಶೇಖರ ರಾವ್ ಅವರು ಡಿ.07ರಂದು ತಮ್ಮ ಎರವಳ್ಳಿ ಎಸ್ಟೇಟ್​​ನ ಬಾತ್​ರೂಮ್​ನಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಲಾಗಿತ್ತು.

    ಹಿಪ್ ರಿಪ್ಲೇಸ್ಮೆಂಟ್​​ ಆಪರೇಷನ್​ ಯಶಸ್ವಿಯಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲಂಗಾಣದ ನೂತನ ಸಿಎಂ ರೇವಂತ್​ ರೆಡ್ಡಿ ಸಹ ಕೆಸಿಆರ್​ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

    ತೆಲಂಗಾಣದಲ್ಲಿ ಇತ್ತೀಚೆಗೆ ಅಂತ್ಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹ್ಯಾಟ್ರಿಕ್ ಸಾಧಿಸುವ ಭರವಸೆ ಹೊಂದಿತ್ತು, ಆದ್ರೆ, ಕಾಂಗ್ರೆಸ್‌ ಗೆಲುವಿನ ಮುಖೇನ ಅಧಿಕಾರದ ಚುಕ್ಕಾಣಿ ಹಿಡಿದಿದ್ದರಿಂದ ಬಿಆರ್​ಎಸ್​ ಹ್ಯಾಟ್ರಿಕ್​ ಕನಸು ವಿಫಲಗೊಂಡಿತು. ಕಾಂಗ್ರೆಸ್ ಉಸ್ತುವಾರಿಯನ್ನು ಮುನ್ನಡೆಸಿದ್ದ ಕಸಭಾ ಸಂಸದ ರೇವಂತ್ ರೆಡ್ಡಿ, 119 ಸದಸ್ಯ ಬಲದ ಸದನದಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ತೆಲಂಗಾಣದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. (ಏಜೆನ್ಸೀಸ್​)

    ಕೆಸಿಆರ್​​ ಹಿಪ್ ರಿಪ್ಲೇಸ್ಮೆಂಟ್​​ ಶಸ್ತ್ರಚಿಕಿತ್ಸೆ ಯಶಸ್ವಿ: ಎರಡ್ಮೂರು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​

    ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತ್ತೆ ಎದುರಾದ ಕಂಟಕ

    ಲಕ್ಷದ್ವೀಪದ ಪ್ರವಾಸದ ವಿಡಿಯೋ ಹಂಚಿಕೊಂಡ ಪ್ರಧಾನಿ: ಗಮನ ಸೆಳೆದ ನಮೋ ಸ್ನಾರ್ಕೆಲಿಂಗ್ ಸಾಹಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts