More

    ಕೆಸಿಆರ್​​ ಹಿಪ್ ರಿಪ್ಲೇಸ್ಮೆಂಟ್​​ ಶಸ್ತ್ರಚಿಕಿತ್ಸೆ ಯಶಸ್ವಿ: ಎರಡ್ಮೂರು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​

    ತೆಲಂಗಾಣ: ಭಾರತ್​ ರಾಷ್ಟ್ರ ಸಮಿತಿ (ಬಿಆರ್​ಎಸ್​) ಸಂಸ್ಥಾಪಕ ಹಾಗೂ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಹಿಪ್ ರಿಪ್ಲೇಸ್ಮೆಂಟ್​​ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ ಎಂದು ಬಿಆರ್​ಎಸ್ ನಾಯಕ ದಾಸೋಜು ಶ್ರವಣ್ ಇಂದು ತಿಳಿಸಿದ್ದಾರೆ.

    ಹಿಪ್ ರಿಪ್ಲೇಸ್ಮೆಂಟ್​​ ಯಶಸ್ವಿಯಾಗಿದೆ. ಸುಮಾರು ಒಂದೂವರೆ ಗಂಟೆಯಲ್ಲಿ ವೈದ್ಯರು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವೈದ್ಯರ ವರದಿಯಂತೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಶ್ರವಣ್ ಹೇಳಿದ್ದಾರೆ.

    ಸುಮಾರು 2 ರಿಂದ 3 ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ. ತೆಲಂಗಾಣದ 4 ಕೋಟಿ ಜನರ ಮತ್ತು ದೇವರ ಆಶೀರ್ವಾದದಿಂದಾಗಿ ಆಪರೇಷನ್​ ಯಶಸ್ವಿಯಾಗಿದೆ. ಸುಮಾರು 6 ರಿಂದ 8 ವಾರಗಳಲ್ಲಿ ಮತ್ತೆ ತೆಲಂಗಾಣ ಜನರ ಸೇವೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಶ್ರವಣ್​ ತಿಳಿಸಿದರು.

    ಚಂದ್ರಶೇಖರ ರಾವ್ ಗುರುವಾರ (ಡಿ.07) ತಮ್ಮ ಎರವಳ್ಳಿ ಎಸ್ಟೇಟ್​​ನ ಬಾತ್​ರೂಮ್​ನಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಲಾಗಿದ್ದು, ಆಪರೇಷನ್​ ಸಕ್ಸಸ್​ ಆಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ಖಚಿತಪಡಿಸಿದೆ.

    ತೆಲಂಗಾಣದಲ್ಲಿ ಇತ್ತೀಚೆಗೆ ಅಂತ್ಯಗೊಂಡ ವಿಧಾನಸಭಾ ಚುನಾವಣೆಯಲ್ಲಿ, ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಹ್ಯಾಟ್ರಿಕ್ ಸಾಧಿಸುವ ಭರವಸೆ ಹೊಂದಿತ್ತು, ಆದ್ರೆ, ಕಾಂಗ್ರೆಸ್‌ ಗೆಲುವಿನ ಮುಖೇನ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲಗೊಂಡಿತು. ಕಾಂಗ್ರೆಸ್ ಉಸ್ತುವಾರಿಯನ್ನು ಮುನ್ನಡೆಸಿದ್ದ ಕಸಭಾ ಸಂಸದ ರೇವಂತ್ ರೆಡ್ಡಿ, 119 ಸದಸ್ಯ ಬಲದ ಸದನದಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ತೆಲಂಗಾಣದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

    ರೇವಂತ್​ ರೆಡ್ಡಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು. (ಏಜೆನ್ಸೀಸ್)

    “ಏಲ್ಲರಿಗೂ ರಾಮ್-ರಾಮ್” ಶಿವರಾಜ್ ಚೌಹಾಣ್ ಪೋಸ್ಟ್ ವಿದಾಯದ ಸಂಕೇತವೇ?

    ಐಟಿ ಭರ್ಜರಿ ಬೇಟೆ, 3 ದಿನ ಕಳೆದ್ರೂ ಮುಗಿದಿಲ್ಲ ನೋಟು ಎಣಿಕೆ! 290 ಅಲ್ಲ 500 ಕೋಟಿ ರೂ. ದಾಟಲಿದೆಯಂತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts