More

    “ಏಲ್ಲರಿಗೂ ರಾಮ್-ರಾಮ್” ಶಿವರಾಜ್ ಚೌಹಾಣ್ ಪೋಸ್ಟ್ ವಿದಾಯದ ಸಂಕೇತವೇ?

    ಭೋಪಾಲ್: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯಾಗಿ ಬಿಜೆಪಿ ಶಾಸಕರ ನಿರ್ಣಾಯಕ ಸಭೆ ಸೋಮವಾರ ನಡೆಯಬಹುದಾಗಿದೆ. ಈಗಾಗಲೇ 4 ಬಾರಿ ಸಿಎಂ ಆಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಸಿಎಂ ಸ್ಥಾನದ ರೇಸ್​ನಲ್ಲಿದ್ದಾರೆ. ಆದರೆ, ಈಗ ಅವರು ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್​ ಒಂದು ಸಾಕಷ್ಟು ಊಹಾಪೋಹಕ್ಕೆ ಕಾರಣವಾಗಿದೆ.

    ಚೌಹಾಣ್ ಅವರು ಶನಿವಾರ ಎಕ್ಸ್‌ನಲ್ಲಿ “ಸಭಿ ಕೋ ರಾಮ್-ರಾಮ್ (` ಎಲ್ಲರಿಗೂ ರಾಮ್ ರಾಮ್’)” ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
    ನಮಸ್ಕಾರ ಎಂಬರ್ಥದಲ್ಲಿ ರಾಮ್​ ರಾಮ್​ ಎಂಬುದನ್ನು ಬಳಸಲಾಗುತ್ತದೆ. ಇದಲ್ಲದೆ, ವಿದಾಯದ ಸಂದೇಶವಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಚೌಹಾಣ್​ ಅವರು ಈ ಪೋಸ್ಟ್​ ಹಾಕುವ ಮೂಲಕ ವಿದಾಯ ಸಂದೇಶ ಹೇಳಿದ್ದಾರೆ ಎಂಬ ಲೆಕ್ಕಾಚಾರಗಳು ಈಗ ಶುರುವಾಗಿವೆ.

    ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ನಂತರ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಶಾಸಕರು ಮತ್ತು ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಹೇಳಿದ್ದಾರೆ.

    “ಮೂವರು (ಕೇಂದ್ರ) ವೀಕ್ಷಕರು ಸೋಮವಾರ ಬೆಳಗ್ಗೆ ಭೋಪಾಲ್‌ಗೆ ಆಗಮಿಸುತ್ತಾರೆ. ಸಂಜೆ 4 ಗಂಟೆಗೆ ಶಾಸಕರು ಸಭೆ ಸೇರಿ ತಮ್ಮ ನಾಯಕರನ್ನು ಆಯ್ಕೆ ಮಾಡಲಿದ್ದಾರೆ. ಶಾಸಕರಿಗೆ ಆಹ್ವಾನ ಕಳುಹಿಸಲಾಗಿದೆ. ಪಕ್ಷದ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಮತ್ತು ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

    ಚೌಹಾಣ್ ಅವರ ಟ್ವೀಟ್ ಕುರಿತು ಕೇಳಲಾದ ಪ್ರಶ್ನೆಗೆ, “ಇದು (ಭಗವಂತ) ರಾಮನ ದೇಶ. ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನ ಭವ್ಯವಾದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ನಾವು ಬೆಳಗ್ಗೆ ಒಬ್ಬರಿಗೊಬ್ಬರು ರಾಮ್ ರಾಮ್​ ಎಂದು ಹೇಳುವ ಮೂಲಕ ಶುಭಾಶಯ ಕೋರುತ್ತೇವೆ. ರಾಮನ ಹೆಸರಿನೊಂದಿಗೆ ದಿನವನ್ನು ಪ್ರಾರಂಭಿಸುವುದು ನಮ್ಮ ಸಂಸ್ಕೃತಿ. ಬಿಜೆಪಿಯು ಕೇಡರ್ ಆಧಾರಿತ ಸಂಘಟನೆಯಾಗಿದ್ದು, ನಾಯಕತ್ವದ ಯಾವುದೇ ನಿರ್ಧಾರವನ್ನು ಪಕ್ಷದ ಕಾರ್ಯಕರ್ತರು ಸ್ವೀಕರಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಅವರು ಹೇಳಿದರು.

    “ನಮ್ಮ ನಾಯಕತ್ವ… ಗೌರವಾನ್ವಿತ ಪ್ರಧಾನಿ, ಗೌರವಾನ್ವಿತ ಅಮಿತ್ ಶಾ ಜಿ, ಗೌರವಾನ್ವಿತ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ನಾಯಕತ್ವವು ಕರೆ ತೆಗೆದುಕೊಳ್ಳುತ್ತದೆ. ನಿರ್ಧಾರವನ್ನು ಕಾರ್ಯಕರ್ತರು ಗೌರವಿಸುತ್ತಾರೆ … ನಮ್ಮ ನಾಯಕತ್ವ ನಿರ್ಧರಿಸುತ್ತದೆ,” ಎಂದು ಶರ್ಮಾ ಹೇಳಿದರು.

    ಇನ್ನೊಂದು ಪ್ರಶ್ನೆಗೆ, ಶಾಸಕರು ತಮ್ಮ ನಾಯಕನನ್ನು ನಿರ್ಧರಿಸುತ್ತಾರೆ ಎಂದರು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಪಕ್ಷದ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನು ಮಧ್ಯಪ್ರದೇಶದಲ್ಲಿ ತನ್ನ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ವೀಕ್ಷಕರನ್ನಾಗಿ ಬಿಜೆಪಿ ಶುಕ್ರವಾರ ನೇಮಿಸಿದೆ.

    ರಾಮ ಮಂದಿರ ಗರ್ಭಗುಡಿ ಬಹುತೇಕ ಪೂರ್ಣ: ಡಿ. 15ರಂದು ಮೂರ್ತಿಯ ಆಯ್ಕೆ

    ಭಾರತ ಬಡ ದೇಶ ಎಂಬುದನ್ನು ಮರೆಯಬಾರದು: ವಾರಕ್ಕೆ 70 ಗಂಟೆಗಳ ಕೆಲಸ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ

    ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಥಳಿಸ್ಪಲ್ಪಟ್ಟ ಮುಸ್ಲಿಂ ಮಹಿಳೆ: ಭದ್ರತೆಯ ಭರವಸೆ ನೀಡಿದ ಸಿಎಂ ಚವ್ಹಾಣ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts