More

    ಭಾರತ ಬಡ ದೇಶ ಎಂಬುದನ್ನು ಮರೆಯಬಾರದು: ವಾರಕ್ಕೆ 70 ಗಂಟೆಗಳ ಕೆಲಸ ಸಮರ್ಥಿಸಿಕೊಂಡ ನಾರಾಯಣ ಮೂರ್ತಿ

    ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತದಲ್ಲಿ ‘ವಾರಕ್ಕೆ 70 ಗಂಟೆಗಳ ಕೆಲಸದ ಅವಧಿ ಇರಬೇಕು” ಎಂದು ಹೇಳಿಕೆ ನೀಡಿರುವುದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಹೇಳಿಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ಮೂರ್ತಿ ಅವರು ಒಂದು ವಾರದಲ್ಲಿ 70 ಗಂಟೆ ಕೆಲಸದ ಅವಧಿ ಇರಬೇಕೆಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    “ಇನ್ಫೋಸಿಸ್‌ನಲ್ಲಿ ಸಕ್ರಿಯವಾಗಿದ್ದಾಗ ಬೆಳಗ್ಗೆ 6:20 ಕ್ಕೆ ಕಚೇರಿಯಲ್ಲಿರುತ್ತಿದ್ದು, ರಾತ್ರಿ 8:30ಕ್ಕೆ ಕಚೇರಿಯಿಂದ ಹೊರಡುತ್ತಿದ್ದೆ” ಎಂದು 77 ವರ್ಷ ವಯಸ್ಸಿನ ಉದ್ಯಮಿ ಮೂರ್ತಿ ಹೇಳಿದ್ದಾರೆ. ಈ ವೇಳಾಪಟ್ಟಿಯ ಪ್ರಕಾರ ಮೂರ್ತಿ ಅವರು ದಿನದ 14 ಗಂಟೆಗಳನ್ನು ಕಚೇರಿಯಲ್ಲೇ ಕಳೆಯುತ್ತಿದ್ದರು.

    “ನನ್ನ ಸಂಪೂರ್ಣ 40 ವರ್ಷಗಳ ವೃತ್ತಿಪರ ಜೀವನದಲ್ಲಿ ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ನಮಗೆ ಆರು ದಿನಗಳ ಕೆಲಸದ ವಾರ ಇದ್ದಾಗ, 1994 ರವರೆಗೆ ನಾನು ವಾರಕ್ಕೆ ಕನಿಷ್ಠ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಅದು ವ್ಯರ್ಥವಾಗಲಿಲ್ಲ” ಎಂದೂ ಅವರು ಹೇಳಿದ್ದಾರೆ.

    “ಬಡತನದಿಂದ ಪಾರಾಗಲು ನಾವು ಆಶಿಸಬಹುದಾದ ಏಕೈಕ ಮಾರ್ಗವೆಂದರೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಎಂದು ನನ್ನ ಪೋಷಕರು ನನಗೆ ಜೀವನದಲ್ಲಿ ಬಹಳ ಬೇಗನೆ ಕಲಿಸಿದರು” ಎಂದು ಅವರು ಹೇಳಿದರು.

    ಮೂರ್ತಿ ಅವರು 1946ರ ಆಗಸ್ಟ್​ನಲ್ಲಿ ಮೈಸೂರಿನಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅವರು ಎಂಟು ಮಕ್ಕಳಲ್ಲಿ ಐದನೆಯವರು. ಅವರ ತಂದೆ ಮೈಸೂರಿನಲ್ಲಿ ಶಾಲಾ ಶಿಕ್ಷಕರಾಗಿದ್ದರು. ಮೂರ್ತಿ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

    ಪತ್ರಿಕೆಯೊಂದಿಗೆ ಸಂದರ್ಶನ ನೀಡಿದ ಅವರು, ಭಾರತವು ಮಧ್ಯಮ-ಆದಾಯದ ದೇಶವಾಗುವ ಮೊದಲು ಬಹಳ ದೂರ ಸಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.

    “2,300 ಡಾಲರ್​ (1,91,890 ರೂಪಾಯಿ. ಇದು ಒಂದು ವರ್ಷಕ್ಕೆ ಒಬ್ಬ ಭಾರತೀಯನ ಆದಾಯ) ತಲಾ ಆದಾಯ ಇರುವ ಭಾರತವು ಬಡ ದೇಶವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಮಧ್ಯಮ ಆದಾಯದ ದೇಶವಾಗಲು (ತಲಾವಾರು 8,000-10,000 ಡಾಲರ್. ಅಂದರೆ, 6,67,000ರಿಂದ 8,34,000 ರೂಪಾಯಿ) ವಾರ್ಷಿಕ ಬೆಳವಣಿಗೆ ದರ ಶೇಕಡಾ 8ರೊಂದಿಗೆ 16 ರಿಂದ 18 ವರ್ಷಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದರು.

    ಸಮಾಜಕ್ಕೆ ಕೊಡುಗೆ ನೀಡುವ ಮಹತ್ವವನ್ನು ಪ್ರತಿಪಾದಿಸಿದರು ಅವರು, “ಕಡಿಮೆ ಮತ್ತು ಮಧ್ಯಮಾವಧಿಯಲ್ಲಿ ಒಬ್ಬರ ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ನೀಡುವುದರ ಬದಲಾಗಿ ಸಮುದಾಯದ ಹಿತಾಸಕ್ತಿಗಳಿಗೆ ಒತ್ತು ನೀಡುವುದು ವೈಯಕ್ತಿಕ ಸುಧಾರಣೆಗೆ ಕಾರಣವಾಗುತ್ತದೆ. ಸಮೃದ್ಧವಾಗಿರುವ ಪ್ರತಿಯೊಂದು ರಾಷ್ಟ್ರವೂ ಕಠಿಣ ಪರಿಶ್ರಮದ ಮೂಲಕ ಇದನ್ನು ಮಾಡಿದೆ ಎಂದು ನನಗೆ ತಿಳಿದಿದೆ” ಎಂದು ಅವರು ಹೇಳಿದರು.

    ಕಳೆದ ಅಕ್ಟೋಬರ್‌ನಲ್ಲಿ ಮೂರ್ತಿ ಅವರು ಪಾಡ್‌ಕಾಸ್ಟ್ ಇನ್ಫೋಸಿಸ್ ಮಾಜಿ ಸಿಎಫ್​ಒ ಮೋಹನ್‌ದಾಸ್ ಪೈ ಅವರೊಂದಿಗೆ ಕಾಣಿಸಿಕೊಂಡಿದ್ದರು.

    “ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು; ನಾವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡದ ಹೊರತು; ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಮ್ಮ ಅಧಿಕಾರಶಾಹಿಯ ವಿಳಂಬ ಕಡಿಮೆ ಮಾಡದ ಹೊರತು ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಾವುದಿಲ್ಲ” ಎಂದು ಪಾಡ್​ಕಾಸ್ಟ್​ನಲ್ಲಿ ಹೇಳಿದ್ದರು.

    “ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ. ಈ ಹೇಳಿಕೆಯು ಕೆಲಸ-ಜೀವನದ ಸಮತೋಲನ ಮತ್ತು ಕೆಲಸದ ಸ್ಥಳದಲ್ಲಿ ಉತ್ಪಾದಕತೆಯ ಬಗ್ಗೆ ಚರ್ಚೆಯನ್ನು ಪ್ರೇರೇಪಿಸಿದೆ.”
    -ನಾರಾಯಣ ಮೂರ್ತಿ

    ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಥಳಿಸ್ಪಲ್ಪಟ್ಟ ಮುಸ್ಲಿಂ ಮಹಿಳೆ: ಭದ್ರತೆಯ ಭರವಸೆ ನೀಡಿದ ಸಿಎಂ ಚವ್ಹಾಣ್​

    ಕಾರ್ಗಿಲ್ ಯುದ್ಧ ವಿರೋಧಿಸಿದ್ದಕ್ಕಾಗಿ ಪದಚ್ಯುತಿ: ಜನರಲ್​ ಮುಷರಫ್​ ದುಷ್ಕೃತ್ಯ ಬಿಚ್ಚಿಟ್ಟ ನವಾಜ್ ಷರೀಫ್

    https://www.vijayavani.net/rip-ajmal-man-posts-own-obituary-on-instagram-before-suicide

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts