More

    ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಥಳಿಸ್ಪಲ್ಪಟ್ಟ ಮುಸ್ಲಿಂ ಮಹಿಳೆ: ಭದ್ರತೆಯ ಭರವಸೆ ನೀಡಿದ ಸಿಎಂ ಚವ್ಹಾಣ್​

    ಭೋಪಾಲ್: ಈಗಷ್ಟೇ ಜರುಗಿದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಜಯ ಗಳಿಸಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದಿದೆ. ಮಧ್ಯಪ್ರದೇಶದಲ್ಲಂತೂ 230 ಸ್ಥಾನಗಳ ಪೈಕಿ 163ರಲ್ಲಿ ಜಯ ಗಳಿಸುವ ಮೂಲಕ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ಬಿಜೆಪಿಯು ಹಿಂದೂ ವೋಟ್​ ಬ್ಯಾಂಕ್​ ನೆಚ್ಚಿಕೊಂಡಿರುವ ಪಕ್ಷ ಎಂಬ ಭಾವನೆ ನೆಲೆಯೂರಿದೆ. ಈ ಪಕ್ಷಕ್ಕೆ ಅಲ್ಪಸಂಖ್ಯಾತರ ಬೆಂಬಲ ಅಷ್ಟಕ್ಕಷ್ಟೇ. ಹಾಗಂತ, ಅವರಾರೂ ಬಿಜೆಪಿಗೆ ಮತ ಹಾಕುವುದೇ ಇಲ್ಲ ಅಂತೇನಲ್ಲ. ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿರುವುದು ಇದಕ್ಕೊಂದು ತಾಜಾ ಉದಾಹರಣೆ. ಆದರೆ, ಇದಕ್ಕಾಗಿ ಅವಳಿಗೆ ಸಿಕ್ಕ ಬಹುಮಾನ ಏನು?

    ಮುಸ್ಲಿಂ ಮಹಿಳೆಯೊಬ್ಬರು ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಕುಟುಂಬಸ್ಥರಿಂದ ಥಳಿಸಲ್ಪಟ್ಟಿದ್ದಾರೆ. ಈ ಮಹಿಳೆಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಶನಿವಾರ ಭೇಟಿಯಾದರು.

    ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಆಕೆಯ ಕುಟುಂಬದವರು ಥಳಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೌಹಾಣ್ ಅವರು ಈ ಮಹಿಳೆಯನ್ನು ಭೇಟಿಯಾಗಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.

    ಬಿಜೆಪಿಗೆ ಮತ ಹಾಕಿದ ಸಮೀನಾ ಬಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ (ಮಗ ಮತ್ತು ಮಗಳು) ಶ್ರೀ ಚೌಹಾಣ್ ಅವರ ಮನೆಗೆ ಬಂದು ಭೇಟಿಯಾದರು. ತಮ್ಮ ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿಗಳು ಸಮೀನಾ ಬಿ ಅವರಿಗೆ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದರು. ತಮ್ಮ ಮಕ್ಕಳ ಬಗ್ಗೆ ಚವ್ಹಾಣ್​ ತೋರಿದ ಕಾಳಜಿ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವುದಾಗಿ ಸಮೀನಾ ಬಿ ಮುಖ್ಯಮಂತ್ರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

    “ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ತಿಳಿದ ನನ್ನ ಸೋದರ ಮಾವ ಜಾವೇದ್ ನನ್ನ ಮೇಲೆ ಹಲ್ಲೆ ನಡೆಸಿದರು. ಸಹೋದರ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪಕ್ಷಕ್ಕೆ ನಾನು ಏಕೆ ಮತ ಹಾಕಿದ್ದೇನೆ ಎಂದು ಕೇಳಿದರು” ಎಂದು ಸಮಿನಾ ಬಿ ತಿಳಿಸಿದ್ದಾರೆ.

    “ಮುಖ್ಯಮಂತ್ರಿಯೊಂದಿಗಿನ ಸಭೆ ಉತ್ತಮವಾಗಿ ನಡೆಯಿತು. ನಾನು ಮತ್ತು ನನ್ನ ಮಕ್ಕಳು ಸುರಕ್ಷಿತವಾಗಿರುವುದನ್ನು ಭಯ್ಯಾ (ಚೌಹಾಣ್) ಅವರು ನೋಡಿಕೊಳ್ಳುತ್ತಾರೆ, ನಾನು ನನ್ನ ಮತದಾನದ ಹಕ್ಕನ್ನು ನಾನು ಬಯಸಿದ ರೀತಿಯಲ್ಲಿ ಚಲಾಯಿಸಿದ್ದೇನೆ. ಸಂವಿಧಾನವು ನಮ್ಮ ಆಯ್ಕೆಯ ಯಾರಿಗಾದರೂ ಮತ ಚಲಾಯಿಸುವ ಹಕ್ಕನ್ನು ನೀಡುತ್ತದೆ” ಎಂದೂ ಸಮೀನಾ ಬಿ ಹೇಳಿದ್ದಾರೆ. ಚೌಹಾಣ್ ಯಾವತ್ತೂ ಯಾವುದೇ ತಪ್ಪು ಮಾಡಿಲ್ಲ, ಅದಕ್ಕಾಗಿಯೇ ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ಅವರು ಹೇಳಿದರು.

    ಚೌಹಾಣ್ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. “ಲಾಡ್ಲಿ ಬೆಹೆನಾ” ದಂತಹ ಯೋಜನೆಗಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಅವರು ತಮ್ಮ ಪಕ್ಷವನ್ನು ಐತಿಹಾಸಿಕ ವಿಜಯದತ್ತ ಮುನ್ನಡೆಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೂ ಪಕ್ಷವು ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರಿಸುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಕಾರ್ಗಿಲ್ ಯುದ್ಧ ವಿರೋಧಿಸಿದ್ದಕ್ಕಾಗಿ ಪದಚ್ಯುತಿ: ಜನರಲ್​ ಮುಷರಫ್​ ದುಷ್ಕೃತ್ಯ ಬಿಚ್ಚಿಟ್ಟ ನವಾಜ್ ಷರೀಫ್

    ‘RIP ಅಜ್ಮಲ್ ಷರೀಫ್ 1995-2003’: ತನ್ನದೇ ಶ್ರದ್ಧಾಂಜಲಿ ಪೋಸ್ಟ್​ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ

    ಫೋಟೋಗಳಲ್ಲಿ ವಿವಸ್ತ್ರಗೊಳಿಸುವ ಅಪ್ಲಿಕೇಶನ್​ಗಳಿಗೆ ಡಿಮ್ಯಾಂಡು; ಒಂದೇ ತಿಂಗಳಲ್ಲಿ 2.4 ಕೋಟಿ ಜನರಿಂದ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts