More

    ಫೋಟೋಗಳಲ್ಲಿ ವಿವಸ್ತ್ರಗೊಳಿಸುವ ಅಪ್ಲಿಕೇಶನ್​ಗಳಿಗೆ ಡಿಮ್ಯಾಂಡು; ಒಂದೇ ತಿಂಗಳಲ್ಲಿ 2.4 ಕೋಟಿ ಜನರಿಂದ ಹುಡುಕಾಟ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೀಪ್​ಫೇಕ್​ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಯಾರದೋ ಒಬ್ಬರ ಚಿತ್ರ ಇಲ್ಲವೇ ವಿಡಿಯೋ ಅಥವಾ ಧ್ವನಿಗೆ ಇನ್ನೊಬ್ಬರದ್ದನ್ನು ಜೋಡಿಸಿ ನಕಲು ಸೃಷ್ಟಿಸುವ ಡೀಪ್​ಫೇಕ್​ಗಾಗಿ ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್​ ಇಂಟಲಿಜೆನ್ಸ್- ಎಐ) ತಂತ್ರಜ್ಞಾನದ ದುರ್ಬಳಕೆ ಮಾಡಲಾಗುತ್ತಿದೆ. ಈಗ ಇಂತಹ ತಂತ್ರಜ್ಞಾನವನ್ನು ಮತ್ತೊಂದು ಅಶ್ಲೀಲ ಕೃತ್ಯಕ್ಕೆ ದುರ್ಬಳಕೆ ಮಾಡುವುದು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

    ಫೋಟೋಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಜನಪ್ರಿಯತೆಯು ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳುತ್ತಾರೆ.
    ಕಳೆದ ಸೆಪ್ಟೆಂಬರ್‌ ತಿಂಗಳೊಂದರಲ್ಲಿಯೇ 2.4 ಕೋಟಿ ಜನರು ವಿವಸ್ತ್ರಗೊಳ್ಳುವ (ಅನ್​ಡ್ರೆಸ್ಸಿಂಗ್​) ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ್ದಾರೆ ಎಂದು ಸಾಮಾಜಿಕ ನೆಟ್‌ವರ್ಕ್ ವಿಶ್ಲೇಷಣೆ ಕಂಪನಿ ಗ್ರಾಫಿಕಾ ಕಂಡುಹಿಡಿದಿದೆ.

    ಗ್ರಾಫಿಕಾ ಪ್ರಕಾರ, ಈ ವಿವಸ್ತ್ರಗೊಳಿಸುವಿಕೆ ಅಥವಾ ನಗ್ನಗೊಳಿಸುವಿಕೆ ಸೇವೆಗಳಲ್ಲಿ ಹೆಚ್ಚಿನವು ಮಾರ್ಕೆಟಿಂಗ್‌ಗಾಗಿ ಜನಪ್ರಿಯ ಸಾಮಾಜಿಕ ನೆಟ್‌ವರ್ಕ್‌ಗಳನ್ನು ಬಳಸುತ್ತವೆ. ಉದಾಹರಣೆಗೆ, ಈ ವರ್ಷದ ಆರಂಭದಿಂದ, ಎಕ್ಸ್ ಮತ್ತು ರೆಡ್ಡಿಟ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿವಸ್ತ್ರಗೊಳಿಸುವ ಅಪ್ಲಿಕೇಶನ್‌ಗಳ ಜಾಹೀರಾತು ಲಿಂಕ್‌ಗಳ ಸಂಖ್ಯೆ 2,400% ಕ್ಕಿಂತ ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನು ಸರಳವಾಗಿ ಹೇಳುವುದಾದರೆ 24 ಪಟ್ಟು ಹೆಚ್ಚಾಗಿದೆ. ವ್ಯಕ್ತಿಯು ನಗ್ನವಾಗುವಂತೆ ಚಿತ್ರವನ್ನು ಮರುಸೃಷ್ಟಿಸಲು ಈ ಸೇವೆಗಳು AI ಬಳಸುತ್ತವೆ. ಅನೇಕ ಸೇವೆಗಳು ಮಹಿಳೆಯರ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತವೆ.

    ಈ ಅಪ್ಲಿಕೇಶನ್‌ಗಳು ಕೃತಕ ಬುದ್ಧಿಮತ್ತೆಯ ಪ್ರಗತಿಯ ಕಾರಣದಿಂದ ಸಮ್ಮತಿಯಿಲ್ಲದ ಅಶ್ಲೀಲತೆಯ ಅಭಿವೃದ್ಧಿ ಮತ್ತು ವಿತರಣೆಯ ಆತಂಕಕಾರಿ ಪ್ರವೃತ್ತಿಯಾಗಿ ಪರಿಣಮಿಸಿದೆ. ಇದರ ಪ್ರಸರಣವು ಗಂಭೀರ ಕಾನೂನು ಮತ್ತು ನೈತಿಕ ಅಡಚಣೆಗಳಿಗೆ ಕಾರಣವಾಗುತ್ತದೆ. ಏಕೆಂದರೆ, ಮಹಿಳೆಯರ ಚಿತ್ರಗಳನ್ನು ಅವರ ಒಪ್ಪಿಗೆ ಇಲ್ಲದೆಯೇ ಹಾಗೂ ಅವರಿಗೆ ಅರಿವಿಲ್ಲದೆಯೇ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗುತ್ತದೆ.

    ಎಕ್ಸ್​ ಜಾಹೀರಾತು ವಿಭಾಗದಲ್ಲಿ ಪೋಸ್ಟ್ ಮಾಡಲಾದ ಒಂದು ಚಿತ್ರವು, ಗ್ರಾಹಕರು ನಗ್ನ ಚಿತ್ರಗಳನ್ನು ರಚಿಸಬಹುದು ಮತ್ತು ನಂತರ ಅವುಗಳನ್ನು ಡಿಜಿಟಲ್ ಆಗಿ ವಿವಸ್ತ್ರಗೊಳಿಸಿದ ವ್ಯಕ್ತಿಗೆ ಕಿರುಕುಳ ನೀಡಲು ಬಳಸಬಹುದು ಎಂಬ ರೀತಿಯಲ್ಲಿ ವಿವಸ್ತ್ರಗೊಳ್ಳುವ ಅಪ್ಲಿಕೇಶನ್​ನಲ್ಲಿ ಬಳಸಿರುವ ಭಾಷೆಯನ್ನು ಸೂಚಿಸುತ್ತದೆ.

    ಏತನ್ಮಧ್ಯೆ, ಇಂತಹ ಅಪ್ಲಿಕೇಶನ್‌ಗಳಲ್ಲಿ ಒಂದು, ಗೂಗಲ್​ನ ಯೂಟ್ಯೂಬ್​ನಲ್ಲಿ ಪ್ರಾಯೋಜಿತ ವಿಷಯಕ್ಕಾಗಿ ಪಾವತಿಸಿದ್ದು, “nudify” ಎಂಬ ಪದದೊಂದಿಗೆ ಹುಡುಕುವಾಗ ಮೊದಲು ಕಾಣಿಸಿಕೊಳ್ಳುತ್ತದೆ. “ಲೈಂಗಿಕವಾಗಿ ಅಶ್ಲೀಲ ವಿಷಯವನ್ನು ಒಳಗೊಂಡಿರುವ” ಜಾಹೀರಾತುಗಳನ್ನು ಕಂಪನಿಯು ಅನುಮತಿಸುವುದಿಲ್ಲ ಎಂದು ಗೂಗಲ್​ ವಕ್ತಾರರು ಹೇಳಿದ್ದಾರೆ. “ನಾವು ಇಂತಹ ಆಕ್ಷೇಪಾರ್ಹ ಜಾಹೀರಾತುಗಳನ್ನು ಪರಿಶೀಲಿಸಿದ್ದೇವೆ ಮತ್ತು ನಮ್ಮ ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ತೆಗೆದುಹಾಕುತ್ತಿದ್ದೇವೆ” ಎಂದು ಕಂಪನಿ ಹೇಳಿದೆ.

    ಲೈಂಗಿಕವಾಗಿ ಅಶ್ಲೀಲ ವಸ್ತುಗಳ ಯಾವುದೇ ಒಪ್ಪಿಗೆಯಿಲ್ಲದ ಹಂಚಿಕೆ ಮಾಡುವುದನ್ನು ನಮ್ಮ ಸೈಟ್​ ನಿಷೇಧಿಸುತ್ತದೆ. ಅಲ್ಲದೆ, ಸಂಶೋಧನೆ ಕೈಗೊಂಡು ಹಲವಾರು ಡೊಮೇನ್‌ಗಳನ್ನು ನಿಷೇಧಿಸಲಾಗಿದೆ ಎಂದು ರೆಡ್ಡಿಟ್ ವಕ್ತಾರರು ಹೇಳಿದ್ದಾರೆ. undress (ವಿವಸ್ತ್ರಗೊಳ್ಳು) ಎಂಬ ಕೀವರ್ಡ್ ಅನ್ನು TikTok ನಿರ್ಬಂಧಿಸಿದೆ, ಇದು ಇಂತಹ ಸೇವೆಗಳಿಗೆ ಸಂಬಂಧಿಸಿದ ಜನಪ್ರಿಯ ಹುಡುಕಾಟ ಪದವಾಗಿದೆ.

    ಡೀಪ್‌ಫೇಕ್ ಅಶ್ಲೀಲತೆಯ ರಚನೆಯನ್ನು ನಿಷೇಧಿಸುವ ಯಾವುದೇ ಫೆಡರಲ್ ಕಾನೂನು ಪ್ರಸ್ತುತ ಇಲ್ಲ, ಆದರೂ ಅಮೆರಿಕ ಸರ್ಕಾರವು ಅಪ್ರಾಪ್ತ ವಯಸ್ಕರರ ಈ ರೀತಿಯ ಚಿತ್ರಗಳ ತಯಾರಿಕೆಯನ್ನು ಕಾನೂನುಬಾಹಿರ ಎಂದು ಪರಿಗಣಿಸುತ್ತದೆ. ನವೆಂಬರ್‌ ತಿಂಗಳಲ್ಲಿ ಉತ್ತರ ಕೆರೊಲಿನಾದ ಮಕ್ಕಳ ಮನೋವೈದ್ಯರು ತಮ್ಮ ರೋಗಿಗಳ ಫೋಟೋಗಳಲ್ಲಿ ವಿವಸ್ತ್ರಗೊಳ್ಳುವ ಅಪ್ಲಿಕೇಶನ್‌ಗಳನ್ನು ಬಳಸಿದ್ದಕ್ಕಾಗಿ 40 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ, ಇದು ಮಕ್ಕಳ ಲೈಂಗಿಕ ದೌರ್ಜನ್ಯ ಕುರಿತು ಡೀಪ್‌ಫೇಕ್ ತಯಾರಿಕೆ ನಿಷೇಧಿಸುವ ಕಾನೂನಿನ ಅಡಿಯಲ್ಲಿ ಈ ರೀತಿಯ ಮೊದಲ ಕಾನೂನು ಕ್ರಮವಾಗಿದೆ.

    ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ನಾಯಿ ಛೂ ಬಿಟ್ಟರು, ಬಂದೂಕು ಕೂಡ ತೋರಿಸಿದರು… ಇಷ್ಟೆಲ್ಲ ನಡೆದದ್ದು ಯಾಕೆ?

    ಅಳಿವಿನಂಚಿನಲ್ಲಿರುವ ಆಮೆಗಳ ಸಂರಕ್ಷಣೆಗಾಗಿ ಕ್ಷಿಪಣಿ ಪರೀಕ್ಷೆಯನ್ನೇ ಸ್ಥಗಿತಗೊಳಿಸಿದ ಡಿಆರ್​ಡಿಒ

    ವಿಶ್ವದ ಅತಿ ದೊಡ್ಡ ಪರಾಠಾ, 2 ತಿಂದರೆ ಲಕ್ಷ ರೂ ಬಹುಮಾನ: ಭೋಜನಪ್ರಿಯರಿಗೊಂದು ವಿಶಿಷ್ಟ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts