More

    ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ನಾಯಿ ಛೂ ಬಿಟ್ಟರು, ಬಂದೂಕು ಕೂಡ ತೋರಿಸಿದರು… ಇಷ್ಟೆಲ್ಲ ನಡೆದದ್ದು ಯಾಕೆ?

    ಮೀರತ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಜರುಗಿದ ಘಟನೆ ಇದ. ಮನೆಗೆ ಬಂದ ಅಧಿಕಾರಿಗಳು ಹಾಗೂ ಅವರ ತಂಡದ ಮೇಲೆ ಈ ಕುಟುಂಬದವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಎರಡು ಸಾಕು ನಾಯಿಗಳನ್ನು ಛೂ ಬಿಟ್ಟಿದ್ದಾರೆ. ಇಷ್ಟೇ ಅಲ್ಲ, ಅಧಿಕಾರಿ-ಸಿಬ್ಬಂದಿಯನ್ನು ಓಡಿಸಲು ಬಂದೂಕನ್ನು ಕೂಡ ತೋರಿಸಿದ್ದಾರೆ…

    ಇಷ್ಟೆಲ್ಲ ರಾದ್ಧಾಂತ ಯಾಕೆ ಅಂತಿರಾ? ಈ ಅಧಿಕಾರಿಗಳ ತಂಡ ಇವರ ಮನೆಗೆ ಆಗಮಿಸಿದ್ದು ವಿದ್ಯುತ್ ಬಿಲ್​ ಬಾಕಿ ವಸೂಲಿಗಾಗಿ.

    ಮಿತಿಮೀರಿದ ವಿದ್ಯುತ್ ಬಿಲ್‌ಗಳನ್ನು ವಸೂಲಿ ಮಾಡಲು ವಿದ್ಯುತ್ ಇಲಾಖೆಯ ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಈ ಕುಟುಂಬದ ದಂಪತಿಗಳು ಮತ್ತು ಅವರ ಮಗ ತನ್ನ ಸ್ನೇಹಿತನೊಂದಿಗೆ ಸೇರಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತಮ್ಮ ಎರಡು ದೊಡ್ಡ ಸಾಕುನಾಯಿಗಳನ್ನು ಛೂ ಬಿಟ್ಟಿದ್ದಾರೆ. ಅಧಿಕಾರಿಗಳ ತಂಡವನ್ನು ಓಡಿಸಲು ಬಂದೂಕನ್ನು ಹೊರತೆಗೆದಿದ್ದಾರೆ.

    ಕಿರಿಯ ಇಂಜಿನಿಯರ್ ಜ್ಯೋತಿ ಭಾಸ್ಕರ್ ಸಿನ್ಹಾ, ಉಪವಿಭಾಗಾಧಿಕಾರಿ ರೀನಾ, ನೌಕರರಾದ ಸುಧೀರ್ ಕುಮಾರ್ ಮತ್ತು ಮೊಹಮ್ಮದ್ ಇಕ್ಬಾಲ್, ಚಾಲಕ ಮೊಹಮ್ಮದ್ ಇರ್ಷಾದ್ ಸೇರಿದಂತೆ ಪಶ್ಚಿಮಾಂಚಲ್ ವಿದ್ಯುತ್ ವಿತರಣ ನಿಗಮ್ ಲಿಮಿಟೆಡ್ (ಪಿವಿವಿಎನ್‌ಎಲ್) ತಂಡವು ನಗರದ ಜ್ಞಾನ್ ಲೋಕ ಕಾಲೋನಿಯಲ್ಲಿರುವ ರಾಜೇಂದ್ರ ಚೌಧರಿ ಅವರ ಮನೆಗೆ ಭೇಟಿ ನೀಡಿತ್ತು. 3.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಬಾಕಿ ಇರುವ ಬಿಲ್ ಅನ್ನು ಪಾವತಿ ಮಾಡಿಸಿಕೊಳ್ಳಲು ಬಂದಿತ್ತು.

    ರಾಜೇಂದ್ರ, ಅವರ ಪತ್ನಿ ಕವಿತಾ, ಮಗ ವಿಶಾಲ್ ಮತ್ತು ಅವರ ಸ್ನೇಹಿತನೊಬ್ಬ ಬಿಲ್ ಪಾವತಿಸಲು ನಿರಾಕರಿಸಿದ್ದು ಮಾತ್ರವಲ್ಲದೆ ದೊಣ್ಣೆಗಳಿಂದ ಹೊಡೆದು ತಮ್ಮ ನಾಯಿಗಳಾದ ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್ ಅನ್ನು ಪಿವಿವಿಎನ್‌ಎಲ್​ ಸಿಬ್ಬಂದಿ ಮೇಲೆ ಛೂ ಬಿಟ್ಟಿದ್ದಾರೆ. ಈ ಸಂದರ್ಭ ಸಿನ್ಹಾ ಹಾಗೂ ಅವರ ಸಹೋದ್ಯೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    “ನಾವು ಕುಟುಂಬಕ್ಕೆ 3.57 ಲಕ್ಷ ರೂಪಾಯಿಗಳ ಬಾಕಿ ಪಾವತಿಸುವಂತೆ ಕೇಳಿದ್ದೆವು, ಆದರೆ, ಅವರು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು ಮತ್ತು ನನ್ನ ತಂಡದೊಂದಿಗೆ ಜಗಳವಾಡಿದರು. ಆಗ ವಿಶಾಲ್ ಮತ್ತು ಆತನ ಸ್ನೇಹಿತ ತಮ್ಮ ಸಾಕುನಾಯಿಗಳನ್ನು ನಮ್ಮ ಮೇಲೆ ಛೂ ಬಿಟ್ಟರು. ಅವರು ನನಗೆ ಹೊಡೆದರು, ನನ್ನ ಕೈಯನ್ನು ಕಚ್ಚಿದರು. ನಾನು ಬೀಳುತ್ತಿದ್ದಂತೆ ಮನೆಯವರು ನನ್ನ ಮೇಲೆ ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದು, ಮೈಮೇಲೆ, ಮೂಗಿನಲ್ಲಿ ಗಾಯಗಳಾಗಿವೆ. ಕೈಯಲ್ಲಿ ಬಂದೂಕು ಹಿಡಿದು ನಮ್ಮನ್ನು ಬೆನ್ನಟ್ಟಿದರು” ಎಂದು ಸಿನ್ಹಾ ತಿಳಿಸಿದ್ದಾರೆ.

    ಹಲ್ಲೆ ನಡೆಸಿದ ಕುಟುಂಬ ಮತ್ತು ಸಹಚರನ ವಿರುದ್ಧ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ), 323 ಮತ್ತು 324 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 ಮತ್ತು 506 (ಅಪರಾಧ ಬೆದರಿಕೆ) ಸೆಕ್ಷನ್​ಗಳ ಅಡಿಯಲ್ಲಿ ಬುಲಂದ್‌ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಳಿವಿನಂಚಿನಲ್ಲಿರುವ ಆಮೆಗಳ ಸಂರಕ್ಷಣೆಗಾಗಿ ಕ್ಷಿಪಣಿ ಪರೀಕ್ಷೆಯನ್ನೇ ಸ್ಥಗಿತಗೊಳಿಸಿದ ಡಿಆರ್​ಡಿಒ

    ವಿಶ್ವದ ಅತಿ ದೊಡ್ಡ ಪರಾಠಾ, 2 ತಿಂದರೆ ಲಕ್ಷ ರೂ ಬಹುಮಾನ: ಭೋಜನಪ್ರಿಯರಿಗೊಂದು ವಿಶಿಷ್ಟ ಸವಾಲು

    ಸೋನಿಯಾ ಗಾಂಧಿಗೆ 77: ರಾಜಕೀಯ ವೈರತ್ವ ಮೀರಿ ಮನಸಾರೆ ಶುಭ ಕೋರಿದ ವಿಶಿಷ್ಟ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts