More

    ವಿಶ್ವದ ಅತಿ ದೊಡ್ಡ ಪರಾಠಾ, 2 ತಿಂದರೆ ಲಕ್ಷ ರೂ ಬಹುಮಾನ: ಭೋಜನಪ್ರಿಯರಿಗೊಂದು ವಿಶಿಷ್ಟ ಸವಾಲು

    ಜೈಪುರ: ಭಾರತದಲ್ಲಿ, ಅದರಲ್ಲೂ ಉತ್ತರ ಭಾರತದಲ್ಲಿ ಪರಾಠಾ ಜನಪ್ರಿಯ ಭಕ್ಷ್ಯ. ಕೆಲವರು ಇದನ್ನು ಉಪಾಹಾರವಾಗಿ ಸೇವಿಸಿದರೆ, ಇನ್ನು ಕೆಲವರು ಮಧ್ಯಾಹ್ನ ಹಾಗೂ ರಾತ್ರಿ ಊಟದ ಸಮಯದಲ್ಲಿ ತಿನ್ನಬಯಸುತ್ತಾರೆ.
    ಜೈಪುರದ ಒಂದು ಭೋಜನಾಲಯವೊಂದು ಪರಾಠಾ ಪ್ರೇಮಿಗಳಿಗೆ ಊಹೆಗೂ ನಿಲುಕದ ಸವಾಲೊಡ್ಡಿದೆ. ಇದಲ್ಲಿ ತಯಾರಾಗುವ ಪರಾಠಾದ ಗಾತ್ರ ಊಹೆಗೂ ನಿಲುಕದ್ದು. ಬರೋಬ್ಬರಿ 32 ಇಂಚಿನದ್ದು.
    ಒಂದು ಗಂಟೆಯ ಒಳಗಾಗಿ ಇಂತಹ ಎರಡು ಪರಾಠಾಗಳನ್ನು ತಿಂದರೆ ಬಹುಮಾನ ನೀಡುವುದಾಗಿ ಈ ಭೋಜನಾಲಯ ಸವಾಲು ಹಾಕಿದೆ. ಈ ಬಹುಮಾನದ ಮೊತ್ತ ಎಷ್ಟು ಗೊತ್ತೆ? ಬರೋಬ್ಬರಿ ಒಂದು ಲಕ್ಷ ರೂಪಾಯಿ.
    ಈ ಭೋಜನಾಲಯದ ಎರಡು ಪರಾಠಾ ತಿನ್ನುವಲ್ಲಿ ಯಶಸ್ವಿಯಾದರೆ 1 ಲಕ್ಷ ರೂಪಾಯಿ ಗೆಲ್ಲಬಹುದು. ಈ ಪರಾಠಾವನ್ನು ವಿಶ್ವದ ಅತಿ ದೊಡ್ಡ ಪರಾಠಾ ಎಂದೂ ಕರೆಯುತ್ತಾರೆ. ಈ ಸ್ಪರ್ಧೆಯಲ್ಲಿ ಗೆದ್ದವರು ನಗದು ಬಹುಮಾನದ ಜತೆಗೆ, ಜೈಪುರ ಪರಾಠಾ ಜಂಕ್ಷನ್‌ನಲ್ಲಿ ಜೀವಮಾನಪೂರ್ತಿ ಉಚಿತವಾಗಿ ಪರಾಠಾಗಳನ್ನು ಸೇವಿಸಬಹುದು.

    ಈ ಅಂಗಡಿಯನ್ನು ಜೈಪುರ ಪರಾಠಾ ಜಂಕ್ಷನ್ ಎಂದೂ ಹೆಸರಿಸಲಾಗಿದೆ. ಇದು ಜೈಪುರದ ಮಾನಸಸರೋವರದ ಹೊಸ ಸಂಗನೇರ್ ರಸ್ತೆಯ ವಿಜಯ್ ಪಥ್‌ನಲ್ಲಿದೆ. ಜನರು ಈ ಪರಾಠಾದ ಗಾತ್ರವನ್ನು ನೋಡಿ ಆಶ್ಚರ್ಯಪಡುತ್ತಾರೆ. 32 ಇಂಚಿನ ಹೊರತಾಗಿ 18 ಇಂಚಿನ ಪರಾಠಾಗಳೂ ಇಲ್ಲಿ ಲಭ್ಯ. ಜೈಪುರ ಪರಾಠಾ ಜಂಕ್ಷನ್‌ನಲ್ಲಿ ಒಟ್ಟು 74 ವಿಧದ ಪರಾಠಗಳನ್ನು ತಯಾರಿಸಲಾಗುತ್ತದೆ. ಸವಾಲು 32-ಇಂಚಿನ ಪರಾಠಾ ಮಾತ್ರ ಬಹು ಜನಪ್ರಿಯ.

    ಈ 32-ಇಂಚಿನ ಪರಾಠಾ ಜೈಪುರ ಪರಾಠಾ ಜಂಕ್ಷನ್‌ನಲ್ಲಿ ಅತಿ ದೊಡ್ಡದಾಗಿದ್ದು, ಇದನ್ನು ಬಾಹುಬಲಿ ಎಂದೂ ಕರೆಯಲಾಗುತ್ತದೆ; ಇದರೊಂದಿಗೆ ಮೂರು ಬಗೆಯ ಚಟ್ನಿ, ರೈತಾ, ಉಪ್ಪಿನಕಾಯಿ ಮತ್ತು ತರಕಾರಿಗಳನ್ನು ನೀಡಲಾಗುತ್ತದೆ. ಉಪಾಹಾರ ಗೃಹದ ಸಿಬ್ಬಂದಿ ಪ್ರಕಾರ, 8 ಜನರು ಈ ಪರಾಠವನ್ನು ಆರಾಮವಾಗಿ ತಿನ್ನಬಹುದು.

    ಈ ಸವಾಲು ಆಕರ್ಷಕವಾಗಿ ಮತ್ತು ಸುಲಭವಾಗಿ ತೋರುತ್ತದೆ, ಆದರೆ, ಅನೇಕ ಗ್ರಾಹಕರು ಮಧ್ಯದಲ್ಲಿಯೇ ಬಿಟ್ಟುಕೊಟ್ಟಿದ್ದಾರೆ; ವಿಫಲರಾಗಿದ್ದಾರೆ.

    32 ಇಂಚಿನ ಪರಾಠಾ ತಯಾರಿಕೆಗೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಈ ಪರಾಠಾವನ್ನು ತಯಾರಿಸಲು, 5 ಅಡಿಯ ತವಾ ಬಳಸಲಾಗುತ್ತದೆ, ಇದರ ತೂಕವು 50 ಕೆಜಿಗಿಂತ ಹೆಚ್ಚು. 40 ಇಂಚಿನ ದೊಡ್ಡ ರೋಲಿಂಗ್ ಪಿನ್ ಬೇಕು. ಈ ಪರಾಠಾವನ್ನು 20 ವಿಧದ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಇಬ್ಬರು ಬೇಕು. ಇದನ್ನು ಮೊದಲು ಪ್ಯಾನ್ ಮೇಲೆ ಹಾಕಲಾಗುತ್ತದೆ. ನಂತರ ಹೆಚ್ಚಿನ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಇದರ ನಂತರ, ಪರಾಠಾದ ಎರಡೂ ಬದಿಗಳಲ್ಲಿ ಬೆಣ್ಣೆಯನ್ನು ಲೇಪಿಸಲಾಗುತ್ತದೆ. ಪರಾಠಾ ಸಿದ್ಧವಾದ ನಂತರ, ಇದನ್ನು ದೊಡ್ಡ ತಟ್ಟೆಯಲ್ಲಿ ಕತ್ತರಿಸಿ ವಿವಿಧ ರೀತಿಯ ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ ಎಂದು ಈ ರೆಸ್ಟೋರೆಂಟ್‌ನ ಮುಖ್ಯ ಅಡುಗೆ ತಯಾರಕ ಸತೇಂದ್ರ ಸಿಂಗ್ ವಿವರಿಸುತ್ತಾರೆ.

    32-ಇಂಚಿನ ಪರಾಠದ ಬೆಲೆ ರೂ 800. ವಿವಿಧ ವಿಭಾಗಗಳನ್ನು ಹೊಂದಿದೆ. ಆಲೂಗೆಡ್ಡೆ, ಈರುಳ್ಳಿ, ಎಲೆಕೋಸು, ಪನೀರ್, ಚೀಸ್, ಮೆಂತ್ಯ ಮತ್ತು ಇತರ ಹಲವು ಬಗೆಯ ಪರಾಠಾಗಳನ್ನು ಈ ರೆಸ್ಟೋರೆಂಟ್‌ನಲ್ಲಿ ನೀಡಲಾಗುತ್ತದೆ.

    ಸೋನಿಯಾ ಗಾಂಧಿಗೆ 77: ರಾಜಕೀಯ ವೈರತ್ವ ಮೀರಿ ಮನಸಾರೆ ಶುಭ ಕೋರಿದ ವಿಶಿಷ್ಟ ವ್ಯಕ್ತಿ

    ದೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts