More

    ಸೋನಿಯಾ ಗಾಂಧಿಗೆ 77: ರಾಜಕೀಯ ವೈರತ್ವ ಮೀರಿ ಮನಸಾರೆ ಶುಭ ಕೋರಿದ ವಿಶಿಷ್ಟ ವ್ಯಕ್ತಿ

    ನವದೆಹಲಿ: “ಶ್ರೀಮತಿ ಸೋನಿಯಾ ಗಾಂಧಿ ಜಿ ಅವರಿಗೆ ಅವರ ಜನ್ಮದಿನದ ಶುಭಾಶಯಗಳು. ಅವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ…”

    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರಿಗೆ ಶನಿವಾರ 77 ನೇ ಜನ್ಮ ದಿನ. ಈ ಸಂದರ್ಭದಲ್ಲಿ ಅವರಿಗೆ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು, ಇತರ ಪಕ್ಷಗಳ ನಾಯಕರು, ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    ಈ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಅವರಿಗೆ ಮನಸಾರೆ ಹರಿಸಿದ್ದಾರೆ. ಸೋನಿಯಾ ಅವರ ಪ್ರಮುಖ ರಾಜಕೀಯ ವಿರೋಧಿಯಾಗಿದ್ದರೂ ಜನ್ಮ ದಿನದ ಶುಭಾಶಯ ಕೋರುವಲ್ಲಿ ಹಿಂಜರಿದಿಲ್ಲ. ಸೋನಿಯಾ ಅವರ ದೀರ್ಘ ಹಾಗೂ ಆರೋಗ್ಯಕ್ಕರ ಜೀವನಕ್ಕಾಗಿ ಕೋರಿದ್ದಾರೆ.

    ಅವರು ಬೇರಾರೂ ಅಲ್ಲ; ಪ್ರಧಾನಿ ನರೇಂದ್ರ ಮೋದಿ. ರಾಜಕೀಯ ಹೋರಾಟದಲ್ಲಿ ಕಾಂಗ್ರೆಸ್​ಗೆ ಪ್ರಮುಖ ವಿರೋಧಿಯಾಗಿರುವ ಬಿಜೆಪಿಯ ಅಧಿನಾಯಕ ಮೋದಿ. ಸೋನಿಯಾ ಗಾಂಧಿ ಅವರ ಜನ್ಮದಿನದಂದು ಪ್ರಧಾನಿ ಮೋದಿ ಅವರು ಶುಭಾಶಯ ಕೋರಿ ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

    ಸುದೀರ್ಘ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಆರೋಗ್ಯದ ಕಾರಣಗಳಿಗಾಗಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದಾರೆ, ಅವರ ಮಗ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೂ, ಕಾಂಗ್ರೆಸ್​ನ ಪ್ರಮುಖ ಸಭೆಗಳಲ್ಲಿ ಸೋನಿಯಾ ಪಾಲ್ಗೊಳ್ಳುತ್ತಾರೆ. ಪಕ್ಷದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

    ಪ್ರಧಾನಿಯಲ್ಲದೆ, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ಶಶಿ ತರೂರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಸೋನಿಯಾ ಅವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

    ಕೆಳಸ್ತರದಲ್ಲಿರುವವರ ಹಕ್ಕುಗಳ ನಿರಂತರ ಪ್ರತಿಪಾದಕರು ಸೋನಿಯಾ ಅವರನ್ನು ಶ್ಲಾಘಿಸಿರುವ ಖರ್ಗೆ, ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಬಯಸುತ್ತೇನೆ ಎಂದಿದ್ದಾರೆ.

    ಸಾರ್ವಜನಿಕ ಸೇವೆಗೆ ಬದ್ಧತೆ ಮತ್ತು ಸಮಾಜದ ಬಡ ವರ್ಗಗಳ ಉನ್ನತಿಗೆ ಶ್ರಮಿಸುವ ಮೂಲಕ ಗಾಂಧಿಯವರು ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ. “ಅವರ ಜೀವನ ಪಯಣ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರು ಕಾಂಗ್ರೆಸ್ ಅನ್ನು ಅತ್ಯಂತ ಸವಾಲಿನ ಅವಧಿಯಲ್ಲಿ ಮಹಾನ್ ಸಮಚಿತ್ತದಿಂದ ಮುನ್ನಡೆಸಿದರು. ಎಲ್ಲರಿಗೂ ಕಲ್ಯಾಣ ಮತ್ತು ದೇಶದ ಬೆಳವಣಿಗೆಯನ್ನು ಉನ್ನತ ಹಂತಕ್ಕೆ ತಲುಪಿಸಿದ ಯುಪಿಎ ಸರ್ಕಾರದ ವಾಸ್ತುಶಿಲ್ಪಿ” ಎಂದು ಅವರು ಹೇಳಿದ್ದಾರೆ.

    ಸೋನಿಯಾ ಅವರು ಕಾಂಗ್ರೆಸ್ ಅನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ತರೂರ್ ಅವರು ಶ್ಲಾಘಿಸಿದ್ದಾರೆ. “ಅವರು ದೀರ್ಘಕಾಲ ಆರೋಗ್ಯ ಮತ್ತು ಸಂತೋಷವನ್ನು ಅನುಭವಿಸಲಿ. ನಮ್ಮ ಪಕ್ಷಕ್ಕೆ ಮಾರ್ಗದರ್ಶನ ಮತ್ತು ನಮ್ಮ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲಿ” ಎಂದು ಆಶಿಸಿದ್ದಾರೆ.

    ಉತ್ತಮ ಆರೋಗ್ಯದಿಂದ ತುಂಬಿದ ದೀರ್ಘಾಯುಷ್ಯವನ್ನು ಸ್ಟಾಲಿನ್ ಅವರು ಸೋನಿಯಾ ಅವರಿಗೆ ಹಾರೈಸಿದ್ದಾರೆ. “ಭಾರತವನ್ನು ನಿರಂಕುಶ ಶಕ್ತಿಗಳಿಂದ ರಕ್ಷಿಸುವ ನಮ್ಮ ಐಕ್ಯ ಪ್ರಯತ್ನದಲ್ಲಿ ಅವರ ಆಳವಾದ ದೃಷ್ಟಿ ಮತ್ತು ಅನುಭವದ ಸಂಪತ್ತು ಮಾರ್ಗದರ್ಶಿ ಬೆಳಕಾಗಿ ಮುಂದುವರಿಯಲಿ.” ಎಂದು ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts