More

    ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ಮೇ 7 ರಂದು: ಸುಪ್ರೀಂ ಕೋರ್ಟ್ ತೀರ್ಮಾನ

    ನವದೆಹಲಿ: ದಿಲ್ಲಿ ಲಿಕ್ಕರ್​ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕ್ರೇಜಿವಾಲ್​ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ತೀರ್ಮಾನ ಮಾಡಿದೆ.

    ಇದನ್ನೂ ಓದಿ: ವಿಂಡೀಸ್‌ ಕ್ರಿಕೆಟಿಗ ಡೆವೊನ್ ಥಾಮಸ್​ಗೆ ವಿರುದ್ಧ 5 ವರ್ಷಗಳ ನಿಷೇಧ ಹೇರಿದ ಐಸಿಸಿ!

    2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲು ಅನುಕೂಲ ಆಗಬೇಕೆಂಬ ದೃಷ್ಟಿಯಿಂದ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಜಸ್ಟೀಸ್ ದೀಪಂಕರ್ ದತ್ತಾ ಅವರಿದ್ದ ಪೀಠವು ಮೇ 7 ಮಂಗಳವಾರ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ತೀರ್ಮಾನ ಮಾಡಿದೆ. ಹಾಗೂ ಕೇಜ್ರಿವಾಲ್ ಪರ ವಕೀಲರು ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರಿಗೆ ಸೂಕ್ತ ಸಿದ್ಧತೆ ಮಾಡಿಕೊಂಡು ಬರುವಂತೆ ಕೋರ್ಟ್​ ಹೇಳಿದೆ.

    ಕೇಜ್ರಿವಾಲ್ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯಲ್ಲಿ ನೀಡಿರುವ ಒಂದು ಕಾರಣಗಳಲ್ಲಿ ಚುನಾವಣೆಯೂ ಒಂದು ಎಂದು ಕೋರ್ಟ್ ತಿಳಿಸಿದೆ. ಆದರೆ ಮಧ್ಯಂತರ ಜಾಮೀನು ನೀಡುವ ಸಂಬಂಧ ದೆಹಲಿ ಸಿಎಂ ಕ್ರೇಜಿವಾಲ್ ಹೇಳಿಕೆಗಳನ್ನು ಕೇಳಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಿಳಿಸಿದ್ದಾರೆ.

    ಏಪ್ರಿಲ್ 23 ರಂದು ದೆಹಲಿ ನ್ಯಾಯಾಲಯವು ಮೇ 7 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ ನಂತರ ಶ್ರೀ ಕೇಜ್ರಿವಾಲ್ ಪ್ರಸ್ತುತ ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿದ್ದಾರೆ.

    ದೆಹಲಿ ಸಿಎಂ ಕೇಜ್ರಿವಾಲ್​ರನ್ನು ಏಕೆ ಬಂಧಿಸಲಾಗಿದೆ?: ಕೇಜ್ರಿವಾಲ್ ಬಂಧನದ ಸಮಯವನ್ನು ಉಲ್ಲೇಖಿಸಿ, ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ. ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿದ ನಂತರ ದೆಹಲಿಯ ತಿಹಾರ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಜೈಲಿನಿಂದಲೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರು ನಿರ್ಧರಿಸಿದ್ದಾರೆ. ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ಇಡಿಗೆ ನೋಟಿಸ್ ಜಾರಿ ಮಾಡಿತ್ತು. ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಸವಾಲಿಗೆ ಪ್ರತಿಕ್ರಿಯೆ ಕೇಳಿತ್ತು.

    ಕಿಂಗ್ ನಾಗಾರ್ಜುನ ಕುಬೇರ’ ಫಸ್ಟ್‌ ಲುಕ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts