More

    ‘RIP ಅಜ್ಮಲ್ ಷರೀಫ್ 1995-2003’: ತನ್ನದೇ ಶ್ರದ್ಧಾಂಜಲಿ ಪೋಸ್ಟ್​ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ

    ಕೊಚ್ಚಿ: ಯಾರಾದರೂ ಸಾವನ್ನಪ್ಪಿದ್ದಾಗ ಸಂತಾಪ ಸೂಚಿಸಲು RIP ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹಾಕುವುದು ವಾಡಿಕೆಯಾಗಿದೆ. ರೆಸ್ಟ್​ ಇನ್​ ಪೀಸ್​ ಎಂಬುದರ ಸಂಕ್ಷಿಪ್ತ​ ರೂಪವೇ ಆರ್​ಐಪಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಸದ್ಗತಿ ದೊರೆಯಲಿ ಎಂದು ಅಚ್ಚ ಕನ್ನಡದಲ್ಲೂ ಸಂದೇಶಗಳನ್ನು ಹಾಕಲಾಗುತ್ತದೆ.

    ಆದರೆ, ಇಲ್ಲೊಬ್ಬ ತನ್ನ ಸಾವಿಗೆ ತಾನೇ RIP ಹಾಕಿಕೊಂಡಿದ್ದಾನೆ. ಸಂತಾಪ ಸೂಚಕ ಸಂದೇಶ ಹಾಕಿಕೊಂಡ ನಂತರ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾನೆ.

    ಇಂತಹ ಘಟನೆ ನಡೆದದ್ದು ಕೇರಳದ ಕೊಚ್ಚಿಗೆ ಸಮೀಪದ ಅಲುವಾದಲ್ಲಿ. ಇಲ್ಲಿನ 28 ವರ್ಷದ ವ್ಯಕ್ತಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ತಮ್ಮದೇ ಶ್ರದ್ಧಾಂಜಲಿ ಪೋಸ್ಟ್ ಹಾಕಿಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆಯತ್ತ ಹೆಜ್ಜೆ ಇಡುವ ಮೊದಲು, ಅಜ್ಮಲ್ ತಮ್ಮ ಫೋಟೋ ಮತ್ತು ‘RIP ಅಜ್ಮಲ್ ಷರೀಫ್ 1995-2003’ ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶುಕ್ರವಾರ ಸಂಜೆ 6.30ರ ಸುಮಾರಿಗೆ ಅಜ್ಮಲ್ ಶರೀಫ್ ಎಂಬುವರು ತಮ್ಮ ಮನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ‘‘ಉತ್ತಮ ಕೆಲಸ ಸಿಗದ ಕಾರಣ ಅಜ್ಮಲ್​ ಕೊಂಚ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹೇಳಿದ್ದಾರೆ’’ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅಜ್ಮಲ್ ಅವರ ಇನ್‌ಸ್ಟಾಗ್ರಾಮ್ ಪುಟವು 14 ಸಾವಿರಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿದೆ.

    ಫೋಟೋಗಳಲ್ಲಿ ವಿವಸ್ತ್ರಗೊಳಿಸುವ ಅಪ್ಲಿಕೇಶನ್​ಗಳಿಗೆ ಡಿಮ್ಯಾಂಡು; ಒಂದೇ ತಿಂಗಳಲ್ಲಿ 2.4 ಕೋಟಿ ಜನರಿಂದ ಹುಡುಕಾಟ

    ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ನಾಯಿ ಛೂ ಬಿಟ್ಟರು, ಬಂದೂಕು ಕೂಡ ತೋರಿಸಿದರು… ಇಷ್ಟೆಲ್ಲ ನಡೆದದ್ದು ಯಾಕೆ?

    ಅಳಿವಿನಂಚಿನಲ್ಲಿರುವ ಆಮೆಗಳ ಸಂರಕ್ಷಣೆಗಾಗಿ ಕ್ಷಿಪಣಿ ಪರೀಕ್ಷೆಯನ್ನೇ ಸ್ಥಗಿತಗೊಳಿಸಿದ ಡಿಆರ್​ಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts