More

    ನಿಧನದ ನಂತರ ಡಾಲಿ ಸೋಹಿ ಕೊನೆಯ ಪೋಸ್ಟ್ ವೈರಲ್…ಭಾವುಕರಾದ ಅಭಿಮಾನಿಗಳು

    ನವದೆಹಲಿ: ಇಂದು ಬೆಳಗ್ಗೆ ಕಿರುತೆರೆ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ನಟಿ ಡಾಲಿ ಸೋಹಿ ಹಾಗೂ ಆಕೆಯ ಸಹೋದರಿ ಅಮನದೀಪ್ ಸೋಹಿ ನಿಧನರಾಗಿದ್ದಾರೆ. ಅಮನದೀಪ್ ನಿಧನರಾದ ಕೆಲವೇ ಗಂಟೆಗಳಲ್ಲಿ ಡಾಲಿ ಸೋಹಿ ಕೂಡ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಜಾಂಡೀಸ್ ನಿಂದ ಬಳಲುತ್ತಿದ್ದ ಅಮನದೀಪ್ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಡಾಲಿ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

    6 ತಿಂಗಳ ಹಿಂದೆಯಷ್ಟೇ ಡಾಲಿ ಸೋಹಿಗೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅಂದಿನಿಂದ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹೋದರಿಯರ ಅಕಾಲಿಕ ಮರಣದ ಸುದ್ದಿ ಬಂದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ಡಾಲಿ ಕೊನೆಯ ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ, ನಟಿ ಎಲ್ಲರೂ ಪ್ರಾರ್ಥಿಸುವಂತೆ ವಿನಂತಿಸಿದ್ದರು.

    ಡಾಲಿ ಸೋಹಿ ತಮ್ಮ ಕೊನೆಯ ಪೋಸ್ಟ್ ಅನ್ನು ಫೆಬ್ರವರಿ 20 ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ, ನಟಿ “ಪ್ರಾರ್ಥನೆ…ವಿಶ್ವದ ಅತಿದೊಡ್ಡ ವೈರ್‌ಲೆಸ್ ಸಂಪರ್ಕ … ಪವಾಡದಂತೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ದಯವಿಟ್ಟು ನನಗೆ ನಿಮ್ಮ ಆಶೀರ್ವಾದ ಬೇಕು” ಎಂದು ಕೋರಿದ್ದರು.

    View this post on Instagram

    A post shared by Dolly Sohi (@dolly_sohi)

    ಮತ್ತೊಂದೆಡೆ, ಅಮನ್‌ದೀಪ್ ಅವರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್ ಫೆಬ್ರವರಿ 22 ರಂದು ಹಂಚಿಕೊಳ್ಳಲಾಗಿದೆ. ಅದರಲ್ಲಿ ಆಸ್ಪತ್ರೆಗೆ ದಾಖಲಾಗಿರುವುದನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಆಕೆ ದುರ್ಬಲವಾಗಿ ಕಾಣುತ್ತಿರುವುದನ್ನು ನೋಡಬಹುದು.

    ಅಮನದೀಪ್ ಮತ್ತು ಡಾಲಿ ಇಬ್ಬರನ್ನೂ ಮುಂಬೈನ ಒಂದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಲ್ಲಿ ಅಮನದೀಪ್ ಅವರು ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಡಾಲಿ ತನ್ನ ಕೀಮೋಥೆರಪಿ ಸೆಷನ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ನಟಿಗೆ ಕೆಲ ಸಮಯದ ಹಿಂದೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

    View this post on Instagram

    A post shared by Aman Sohi (@amani.sohi)

    ಅಮೃತಸರದಲ್ಲಿ ಜನಿಸಿದ ಮತ್ತು ಸಿಖ್ ಕುಟುಂಬಕ್ಕೆ ಸೇರಿದ ಡಾಲಿ, ‘ಮೇರಿ ಆಶಿಕಿ ತುಮ್ ಸೆ ಹಿ’ ಮತ್ತು ‘ಖೂಬ್ ಲಾಡಿ ಮರ್ದಾನಿ… ಝಾನ್ಸಿ ಕಿ ರಾಣಿ’ ಮುಂತಾದ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಕೊನೆಯದಾಗಿ ‘ಝನಕ್’ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಕ್ಯಾನ್ಸರ್ ಪತ್ತೆಯಾದ ನಂತರ ಡಾಲಿ ಧಾರಾವಾಹಿ ತೊರೆದರು. ನಟಿ ತಮ್ಮ ಮಗಳನ್ನು ಅಗಲಿದ್ದಾರೆ.

    ಶುಕ್ರವಾರ ಮಧ್ಯಾಹ್ನ ಮುಂಬೈನಲ್ಲಿ ಡಾಲಿ ಮತ್ತು ಅವರ ಸಹೋದರಿ ಅಮನದೀಪ್ ಅವರ ಅಂತ್ಯಕ್ರಿಯೆ ನಡೆಯಲಿದೆ.

    ‘ಕುಂಕುಮ್ ಭಾಗ್ಯ’ ಖ್ಯಾತಿಯ ನಟಿ ಡಾಲಿ ಸೋಹಿ ನಿಧನ; ಒಂದು ದಿನದ ಹಿಂದೆಯಷ್ಟೇ ಸಾವನ್ನಪ್ಪಿದ್ದ ಸಹೋದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts