More

    ಕಾರ್ಗಿಲ್ ಯುದ್ಧ ವಿರೋಧಿಸಿದ್ದಕ್ಕಾಗಿ ಪದಚ್ಯುತಿ: ಜನರಲ್​ ಮುಷರಫ್​ ದುಷ್ಕೃತ್ಯ ಬಿಚ್ಚಿಟ್ಟ ನವಾಜ್ ಷರೀಫ್

    ಲಾಹೋರ್: ಕಾರ್ಗಿಲ್ ದುಸ್ಸಾಹಸವನ್ನು ವಿರೋಧಿಸಿದ್ದಕ್ಕಾಗಿ (ದಿವಂಗತ) ಹಾಗೂ ಭಾರತ ಮತ್ತು ಇತರ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಮಹತ್ವವನ್ನು ಒತ್ತಿಹೇಳಿದ್ದಕ್ಕಾಗಿ ಜನರಲ್ ಪರ್ವೇಜ್ ಮುಷರಫ್ ಅವರು 1999 ರಲ್ಲಿ ನನ್ನ ಸರ್ಕಾರವನ್ನು ತೆಗೆದುಹಾಕಿ, ನನ್ನನ್ನು ಹೊರಹಾಕಿದರು…

    ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಶನಿವಾರ ಇಂತಹ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. 1999ರ ಮೇ ಮತ್ತು ಜುಲೈ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್​ ಯುದ್ಧದಲ್ಲಿ ಪಾಕ್​ ಸೋಲನುಭವಿಸಿದ್ದನ್ನು ಸ್ಮರಿಸಬಹುದು.

    ಮುಂಬರುವ ಚುನಾವಣೆಗೆ ತಮ್ಮ ಪಕ್ಷದ ಟಿಕೆಟ್‌ಗಳ ಆಕಾಂಕ್ಷಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಷರೀಫ್​ ಅವರು ಮೂರು ಬಾರಿ ಪ್ರಧಾನಿಯಾಗಿದ್ದ ತಮ್ಮನ್ನು ಅವಧಿಗೂ ಮುನ್ನವೇ ಪ್ರಧಾನಿ ಹುದ್ದೆಯಿಂದ ಹೊರಹಾಕಿದ್ದು ಏಕೆ ಎಂಬುದನ್ನು ವಿವರಿಸಿದರು. ಮುಂದಿನ ವರ್ಷ ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಟಿಕೆಟ್ ನೀಡಲು ಷರೀಫ್ ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದಾರೆ.

    “1993 ಮತ್ತು 1999 ರಲ್ಲಿ ನನ್ನನ್ನು ಏಕೆ ಪದಚ್ಯುತಗೊಳಿಸಲಾಯಿತು ಎಂದು ನನಗೆ ಹೇಳಬೇಕು. ನಾನು ಕಾರ್ಗಿಲ್ ಯೋಜನೆಯನ್ನು ವಿರೋಧಿಸಿದಾಗ, ಅದು ಆಗಬಾರದು ಎಂದು ಹೇಳಿದಾಗ… ನನ್ನನ್ನು ಹೊರಹಾಕಲಾಯಿತು (ಜನರಲ್ ಪರ್ವೇಜ್ ಮುಷರಫ್ ಅವರು). ನಂತರ ನಾನು ಹೇಳಿದ್ದು ಸರಿ ಎಂದು ಸಾಬೀತಾಯಿತು,” ಎಂದು ಷರೀಫ್ ಹೇಳಿದರು.

    ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸರ್ವೋಚ್ಚ ನಾಯಕರಾಗಿರುವ ಷರೀಫ್​, ತಾವು ಪ್ರಧಾನಿಯಾಗಿ ಎಲ್ಲ ಮೂರು ಅವಧಿಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರೂ ತಮ್ಮನ್ನು ಹೊರಹಾಕಲಾಯಿತು ಎಂದು ಹೇಳಿದರು.

    ಭಾರತ ಮತ್ತು ಇತರ ನೆರೆಯ ದೇಶಗಳೊಂದಿಗೆ ಸುಧಾರಿತ ಸಂಬಂಧವನ್ನು ಹೊಂದಿದ್ದನ್ನು ಒತ್ತಿ ಹೇಳಿದ ಅವರು, ತಾವು ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಇಬ್ಬರು ಭಾರತೀಯ ಪ್ರಧಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡಿದರು. “ನಾನು ಪ್ರಧಾನಿಯಾಗಿದ್ದಾಗ ಪ್ರತಿ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ನಾನು ಪ್ರಧಾನಿಯಾಗಿದ್ದಾಗ, ಇಬ್ಬರು ಭಾರತೀಯ ಪ್ರಧಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮೋದಿ ಸಾಹಬ್ ಮತ್ತು ವಾಜಪೇಯಿ ಸಾಹಬ್ ಲಾಹೋರ್‌ಗೆ ಬಂದಿದ್ದರು” ಎಂದು ಷರೀಫ್​ ಹೇಳಿದರು.

    “ನಾವು ಭಾರತ, ಅಫ್ಘಾನಿಸ್ತಾನ ಮತ್ತು ಇರಾನ್‌ನೊಂದಿಗೆ ನಮ್ಮ ಸಂಬಂಧವನ್ನು ಸುಧಾರಿಸಬೇಕಾಗಿದೆ. ನಾವು ಚೀನಾದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಬೇಕಾಗಿದೆ” ಎಂದೂ ಷರೀಫ್ ಹೇಳಿದರು. ಆರ್ಥಿಕ ಬೆಳವಣಿಗೆಯಲ್ಲಿ ಪಾಕಿಸ್ತಾನವು ತನ್ನ ನೆರೆಹೊರೆಯವರಿಗಿಂತ ಹಿಂದುಳಿದಿದೆ ಎಂದು ಅವರು ವಿಷಾದಿಸಿದರು.

    ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಜೈಲಿನಲ್ಲಿರುವ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಷರೀಫ್, ಅನನುಭವಿ ವ್ಯಕ್ತಿಗೆ ದೇಶದ ಆಡಳಿತವನ್ನು ಏಕೆ ನೀಡಲಾಯಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದರು.

    “ಇಮ್ರಾನ್ ಖಾನ್ ಅವರ ಸರ್ಕಾರದ ಅವಧಿಯಲ್ಲಿ (2018-2202) ಆರ್ಥಿಕತೆಯು ಕುಸಿತಕ್ಕೆ ಸಾಕ್ಷಿಯಾಯಿತು. ನಂತರ ಶೆಹಬಾಜ್ ಷರೀಫ್ ಸರ್ಕಾರವು ಏಪ್ರಿಲ್ 2022 ರಲ್ಲಿ ಅಧಿಕಾರ ವಹಿಸಿಕೊಂಡು, ದೇಶವನ್ನು ಆರ್ಥಿಕವಾಗಿ ರಕ್ಷಿಸಿತು” ಎಂದರು. 2017 ರಲ್ಲಿ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸುವ ಮೂಲಕ ದೇಶವನ್ನು ಹಾಳು ಮಾಡಿದ ಹೊಣೆಗಾರಿಕೆಯನ್ನು ಮಾಜಿ ಮಿಲಿಟರಿ ಜನರಲ್‌ಗಳು ಮತ್ತು ನ್ಯಾಯಮೂರ್ತಿಗಳು ಹೊರಬೇಕು ಎಂಬ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.

    “ನಾವು ಐಷಾರಾಮಿ ಕಾರುಗಳಲ್ಲಿ ತಿರುಗಾಡಲು ಅಧಿಕಾರಕ್ಕೆ ಬರಲು ಬಯಸುವುದಿಲ್ಲ. ಆದರೆ, ಈ ದೇಶವನ್ನು ಹಾಳು ಮಾಡಿದ ಮತ್ತು ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಿದವರ ಮೇಲೆ ಹೊಣೆಗಾರಿಕೆಯನ್ನು ನಾವು ಬಯಸುತ್ತೇವೆ” ಎಂದರು.

    ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ, ಮಾಜಿ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್, ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಸಾಕಿಬ್ ನಿಸಾರ್ ಮತ್ತು ಆಸಿಫ್ ಸಯೀದ್ ಖೋಸಾ ಅವರ ವಿರುದ್ಧ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಿದ ಮತ್ತು ದೇಶಕ್ಕೆ ಆರ್ಥಿಕ ಸಂಕಷ್ಟ ತಂದ ಅಪರಾಧಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ಷರೀಫ್​ ಅವರು ಬ್ರಿಟನ್‌ನಲ್ಲಿ ನಾಲ್ಕು ವರ್ಷಗಳ ಸ್ವಯಂ ಗಡೀಪಾರಿನ ನಂತರ ಪಾಕಿಸ್ತಾನಕ್ಕೆ ಹಿಂದಿರುಗುವ ಒಂದು ತಿಂಗಳ ಮೊದಲು ಹೇಳಿದ್ದರು.

    ‘RIP ಅಜ್ಮಲ್ ಷರೀಫ್ 1995-2003’: ತನ್ನದೇ ಶ್ರದ್ಧಾಂಜಲಿ ಪೋಸ್ಟ್​ ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ

    ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ನಾಯಿ ಛೂ ಬಿಟ್ಟರು, ಬಂದೂಕು ಕೂಡ ತೋರಿಸಿದರು… ಇಷ್ಟೆಲ್ಲ ನಡೆದದ್ದು ಯಾಕೆ?

    ಅಳಿವಿನಂಚಿನಲ್ಲಿರುವ ಆಮೆಗಳ ಸಂರಕ್ಷಣೆಗಾಗಿ ಕ್ಷಿಪಣಿ ಪರೀಕ್ಷೆಯನ್ನೇ ಸ್ಥಗಿತಗೊಳಿಸಿದ ಡಿಆರ್​ಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts