More

    ಲಕ್ಷದ್ವೀಪದ ಪ್ರವಾಸದ ವಿಡಿಯೋ ಹಂಚಿಕೊಂಡ ಪ್ರಧಾನಿ: ಗಮನ ಸೆಳೆದ ನಮೋ ಸ್ನಾರ್ಕೆಲಿಂಗ್ ಸಾಹಸ

    ಕವರತ್ತಿ: ಪ್ರವಾಸಿಗರ ಸ್ವರ್ಗ ಲಕ್ಷದ್ವೀಪಕ್ಕೆ ಭೇಟಿ ನೀಡಿ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಕಳೆದಂತಹ ಕ್ಷಣಗಳು ವಿಡಿಯೋ ಝಲಕ್​ ಅನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಲಕ್ಷದ್ವೀಪದ ಪ್ರಕೃತಿಯ ಸೌಂದರ್ಯಕ್ಕೆ ಮಾರುಹೋಗಿರುವ ಪ್ರಧಾನಿ ಮೋದಿ, ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಕೆಲ ಸಮಯವನ್ನು ಕಳೆದಿದ್ದಾರೆ. ಇದೊಂದು ಸುಂದರ ಅನುಭವ ಎಂದು ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಲಕ್ಷದ್ವೀಪದ ಮಹಿಳೆಯರು ಸಾಂಪ್ರದಾಯಿಕ ನೃತ್ಯದ ಮೂಲಕ ಪ್ರಧಾನಿ ಮೋದಿ ಅವರಿಗೆ ಅದ್ಭುತ ಸ್ವಾಗತ ಕೋರುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ನೃತ್ಯವನ್ನು ನೋಡಿ ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ನಂತರದ ದೃಶ್ಯದಲ್ಲಿ ಅಲ್ಲಿನ ಜನರ ಸಂಭ್ರಮ ಮತ್ತು ಭಿತ್ತಿಫಲಕಗಳನ್ನು ಹಿಡಿದಿರುವ ಮಕ್ಕಳನ್ನು ತೋರಿಸಲಾಗುತ್ತದೆ. ತೆರೆದ ಜೀಪಿನಲ್ಲಿ ಪ್ರಧಾನಿ ಮೋದಿ ವೇದಿಕೆಗೆ ಆಗಮನ, ಅವರಿಗೆ ಉಡುಗೊರೆ ನೀಡುವುದು, ಮಹಿಳೆಯರೊಂದಿಗೆ ಮಾತನಾಡುತ್ತಿರುವುದು, ಮಹಿಳೆಯರಿಗೆ ಸೈಕಲ್​ ವಿತರಣೆ ಹಾಗೂ ಅಲ್ಲಿನ ಕೆಲ ವಿಶೇಷ ಜನರೊಂದಿಗೆ ಸಂವಾದ ನಡೆಸುತ್ತಿರುವ ದೃಶ್ಯಗಳು ಇವೆ. ಇದಾದ ಬಳಿಕ ವಿಡಿಯೋ ಲಕ್ಷದ್ವೀಪದ ಸೌಂದರ್ಯದ ಕಡೆಗೆ ಸರಿಯುತ್ತದೆ. ಲಕ್ಷದ ದ್ವೀಪದ ಕಡಲ ಕಿನಾರೆಯನ್ನು ತೋರಿಸಲಾಗುತ್ತದೆ. ಪ್ರಧಾನಿ ಮೋದೆ ಮುಂಜಾನೆ ವಾಯು ವಿಹಾರ ನಡೆಸುತ್ತಿರುವುದು, ಕಡಲ ಕಿನಾರೆ ಮುಂದೆ ಪಾನೀಯ ಸವಿಯುತ್ತಿರುವುದು ಮತ್ತು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿರುವ ದೃಶ್ಯವಿದೆ. ಇದಾದ ಬಳಿಕ ದೃಶ್ಯವು ಪ್ರಧಾನಿ ಮೋದಿ ಅವರ ಸ್ನಾರ್ಕೆಲಿಂಗ್​ ಸಾಹಸವನ್ನು ತೋರಿಸುತ್ತದೆ. ಲೈಫ್​ ಜಾಕೆಟ್​ ಧರಿಸಿ, ಇಬ್ಬರು ಕಡಲ ತಜ್ಞರ ನೆರವಿನಿಂದ ಪ್ರಧಾನಿ ಮೋದಿ ಕಡಲಲ್ಲಿ ಒಡಲಲ್ಲಿ ಈಜಾಡಿ, ನೀರಿನ ಒಳಗಿನ ಸೌಂದರ್ಯವನ್ನು ಸವಿಯುತ್ತಾರೆ. ಜಲಚರ ಪ್ರಾಣಿಗಳ ಝಲಕ್​ ಕೂಡ ವಿಡಿಯೋದಲ್ಲಿದೆ ಮತ್ತು ಪ್ರಧಾನಿ ಮೋದಿ ಕಡಲಿನಿಂದ ಹೊರಗೆ ನರುತ್ತಿರುವ ದೃಶ್ಯದೊಂದಿಗೆ ವಿಡಿಯೋ ಕೊನೆಯಾಗುತ್ತದೆ.

    ಲಕ್ಷದ್ವೀಪದ ಭೇಟಿಯ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಇತ್ತೀಚೆಗಷ್ಟೇ ಲಕ್ಷದ್ವೀಪದ ಜನರ ಮಧ್ಯೆ ಇರುವ ಅವಕಾಶ ಸಿಕ್ಕಿತು. ಅದರ ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಅಲ್ಲಿನ ಜನರ ಆತ್ಮೀಯತೆಗೆ ನಾನಿನ್ನೂ ವಿಸ್ಮಯಗೊಂಡಿದ್ದೇನೆ. ಅಗತ್ತಿ, ಬಂಗಾರಂ ಮತ್ತು ಕವರಟ್ಟಿಯಲ್ಲಿ ಜನರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿತು. ಅವರ ಆತಿಥ್ಯಕ್ಕಾಗಿ ನಾನು ದ್ವೀಪಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಲಕ್ಷದ್ವೀಪದ ವೈಮಾನಿಕ ನೋಟಗಳು ಸೇರಿದಂತೆ ಕೆಲವು ಫೋಟೋಗಳು ಇಲ್ಲಿವೆ ಎಂದು ಎಕ್ಸ್​ ಖಾತೆಯಲ್ಲಿ ನಿನ್ನೆ (ಜ.04) ಪೋಸ್ಟ್​ ಮಾಡಿದ್ದರು.

    ಅಂದಹಾಗೆ ಪ್ರಧಾನಿ ಮೋದಿ ಅವರು 1150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದ್ದಾರೆ. ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಬಳಿಕ ದ್ವೀಪಸಮೂಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಕ್ಷದ್ವೀಪದ ಪ್ರಶಾಂತತೆಯು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಇನ್ನಷ್ಟು ಶ್ರಮಿಸುವುದು ಹೇಗೆ ಎಂದು ಪ್ರತಿಬಿಂಬಿಸಲು ಅವಕಾಶವನ್ನು ನೀಡಿತು ಎಂದಿದ್ದಾರೆ.

    ಲಕ್ಷದ್ವೀಪದ ಅಭಿವೃದ್ಧಿ ಮೂಲಕ ಜನರ ಜೀವನವನ್ನು ಸುಧಾರಿಸುವುದು, ಉತ್ತಮ ಆರೋಗ್ಯ ಸೇವೆ, ವೇಗದ ಇಂಟರ್ನೆಟ್ ಮತ್ತು ಕುಡಿಯುವ ನೀರಿನ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಸ್ಥಳೀಯ ಸಂಸ್ಕೃತಿಯನ್ನು ರಕ್ಷಿಸುವುದು ಮತ್ತು ಆಚರಿಸುವುದು ಕೇಂದ್ರ ಸರ್ಕಾರದ ಮುಖ್ಯ ಗಮನವಾಗಿದೆ ಮತ್ತು ಲಕ್ಷದ್ವೀಪದಲ್ಲಿ ಈಗ ಉದ್ಘಾಟಿಸಿದ ಯೋಜನೆಗಳು ನಮ್ಮ ಈ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು. (ಏಜೆನ್ಸೀಸ್​)

    ಅಯೋಧ್ಯೆ ರಾಮಮಂದಿರದ ಹೈಟೆಕ್​ ಸೆಕ್ಯುರಿಟಿಗೆ ಖರ್ಚಾಗಿರುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಇಂದು ಭಾರತ- ಆಸೀಸ್ ಮಹಿಳೆಯರ ಮೊದಲ ಟಿ20: ಪಂದ್ಯದ ಆರಂಭ, ನೇರಪ್ರಸಾರ ಮಾಹಿತಿ ಇಲ್ಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts