'ದಿ ಕೇರಳ ಸ್ಟೋರಿ' ಸಿನಿಮಾದ ಅದೊಂದು ದೃಶ್ಯದ ಬಗ್ಗೆ ಅಜ್ಜಿಯ ಪ್ರತಿಕ್ರಿಯೆಗೆ ಹೆದರುತ್ತಿದ್ದೆ: ಅದಾ ಶರ್ಮಾ

Adah Sharma
Published on

ನವದೆಹಲಿ: 'ದಿ ಕೇರಳ ಸ್ಟೋರಿ' ಸಿನಿಮಾ ಸಾಕಷ್ಟು ವಿವಾದಗಳ ಹೊರತಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದರೂ ಸಿನಿಮಾದ ಬೇಡಿಕೆ ಕಡಿಯಾಗಿಲ್ಲ. ಚಿತ್ರ ನೋಡಿದ ಮಂದಿ ನಟಿ ಅದಾ ಶರ್ಮಾ ನಟನೆಯ ಬಗ್ಗೆ ಮೆಚ್ಚಗೆಯ ಮಾತುಗಳನ್ನಾಡುತ್ತಿದ್ದಾರೆ. ಸಾವಾಲಿನ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ನಟಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರತಿಕ್ರಿಯೆ ಬಗ್ಗೆ ಹೆದರಿದ್ದೆ!

'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಕೆಲವೊಂದು ಗಂಭೀರ ಎನಿಸುವಂತಹ ದೃಶ್ಯಗಳನ್ನು ತೋರಿಸಲಾಗಿದೆ. ಈ ದೃಶ್ಯಗಳಲ್ಲಿ ನಟಿ ಅದಾ ಶರ್ಮ ಸಮರ್ಥವಾಗಿಯೇ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಅದಾ ಶರ್ಮ ಮಾತನಾಡುತ್ತಾ, "ನನ್ನ ತಾಯಿ ಮತ್ತು ಅಜ್ಜಿಗೆ ಸಿನಿಮಾದ ಕಥೆ ತಿಳಿದಿತ್ತು. ಆದರೆ ಸಿನಿಮಾ ವೀಕ್ಷಿಸಿದ ಬಳಿಕ ಅಜ್ಜಿಯ ಪ್ರತಿಕ್ರಿಯೆ ಬಗ್ಗೆ ಬಗ್ಗೆ ಹೆದರಿದ್ದೆ. ಅದರಲ್ಲೂ ವಿಶೇಷವಾಗಿ ಅತ್ಯಾಚಾರದ ದೃಶ್ಯದ ಬಗ್ಗೆ ಅಜ್ಜಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ" ಎಂಬ ಬಗ್ಗೆ ಚಿಂತಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ತಿಳುವಳಿಕೆ ನೀಡುವ ಸಿನಿಮಾ

"ನನ್ನ 90 ವರ್ಷದ ಅಜ್ಜಿ ಸಿನಿಮಾ ನೋಡಿ ಒಪ್ಪಿಕೊಂಡಿದ್ದಾರೆ. ಇದು ಶೈಕ್ಷಣಿಕ ತಿಳಿವಳಿಕೆಯ ಅನುಭವ ನೀಡುವ ಸಿನಿಮಾವಾಗಿದ್ದು, ವಿದ್ಯಾರ್ಥಿಗಳು ವೀಕ್ಷಿಸಬೇಕೆಂದು ಬಯಸಿದರು. ಇದು ವಯಸ್ಕರು ಮಾತ್ರ ನೋಡುವ ಸಿನಿಮಾ ಎಂದು ಹೇಳಿದೆ. ಈ ವೇಳೆ ಇದು ಯು/ಎ ಸಿನಿಮಾವಾಗಲಿ. ತಿಳುವಳಿಕೆ ಮತ್ತು ಜಾಗೃತರಾಗಲು ಸಹಾಯವಾಗುವುದರಿಂದ ಚಿಕ್ಕ ಹುಡುಗಿಯೂ ಈ ಸಿನಿಮಾ ನೋಡುವಂತಾಗಲಿ" ಎಂದು ಅಜ್ಜಿ ಬಯಸಿದರು ಎಂದು ಅದಾ ಶರ್ಮಾ ಹೇಳಿಕೊಂಡಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಈವರೆಗೆ 171 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿದೆ. ಈಗಾಗಲೇ 150 ಕೋಟಿ ರೂ. ಕ್ಲಬ್ ಸೇರಿದ್ದು, ಮುಂದಿನ ವಾರದ ವೇಳೆಗೆ 200 ಕೋಟಿ ರೂ. ಗಳಿಕೆ ತಲುಪುವುದು ಬಹುತೇಕ ಖಚಿತ ಎಂದು ಬಾಕ್ಸ್ ಆಫೀಸ್ ಲೆಕ್ಕಾಚಾರವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net