More

    ಅಶ್ಲೀಲ ವಿಡಿಯೋ ಅಪ್​ಲೋಡ್​! ನಟಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಿಯಕರ

    ಚೆನ್ನೈ: ಈ ಹಿಂದೆ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಐಟಿ ಉದ್ಯೋಗಿ, ಇದೀಗ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ತಮಿಳು ನಟಿ ಲುಬ್ನಾ ಆಮೀರ್​ ಇತ್ತಿಚೆಗಷ್ಟೇ ದೂರು ನೀಡಿದ್ದರು. ಇದೀಗ ಆಕೆಯ ವಿರುದ್ಧವೇ ಐಟಿ ಉದ್ಯೋಗಿ ಗಂಭೀರ ಆರೋಪ ಮಾಡಿ ಸರಣಿ ದೂರುಗಳನ್ನ ದಾಖಲಿಸಿದ್ದಾನೆ.

    ಲುಬ್ನಾ ಆಮೀರ್​ ತಮಿಳಿನ ಕೆಕ್ಕರಾನ್​ ಮೀಕ್ಕರಾನ್​ ಸಿನಿಮಾದಲ್ಲಿ ತನ್ನ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ, ಅನೇಕ ವೆಬ್​ ಸರಣಿಗಳಲ್ಲಿ ನಟಿಸಿದ್ದಾರೆ. ಲುಬ್ನಾ ಅವರು ಈ ಹಿಂದೆ ನೀಡಿದ ದೂರಿನ ಪ್ರಕಾರ, ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ ಲುಬ್ನಾಗೆ ಚೆನ್ನೈನ ವ್ಯಾಸರ್ಪದಿ ಮೂಲದ ಇಂಜಿನಿಯರ್​ ಪದವೀಧರ ಮತ್ತು ಐಟಿ ಉದ್ಯೋಗಿ ಮಸಿಉಲ್ಲ ಖಾನ್​ ಹೆಸರಿನ ವ್ಯಕ್ತಿಯ ಪರಿಚಯವಾಗಿತ್ತು.

    ಇದನ್ನೂ ಓದಿ: ಕ್ಯಾಂಪಸ್​ನಲ್ಲಿ ಸ್ನೇಹಿತೆಗೆ ಗುಂಡು ಹಾರಿಸಿ, ಬಳಿಕ ಹಾಸ್ಟೆಲ್​ನಲ್ಲಿ ತಾನೂ ಗುಂಡು ಹಾರಿಸಿಕೊಂಡ ಸ್ನೇಹಿತ

    ಇಂಟಿಮೇಟ್​ ಫೋಟೋ ತೋರಿಸಿ ಬೆದರಿಕೆ

    ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ಇಬ್ಬರು ಡೇಟಿಂಗ್​ ಆರಂಭಿಸಿದರು. ಮಸಿಉಲ್ಲಗೆ ಈಗಾಗಲೇ ಮದುವೆ ಆಗಿರುವ ಸಂಗತಿ ಲುಬ್ನಾಗೆ ತಿಳಿದಾಗ ಸಂಬಂಧಕ್ಕೆ ಕೊನೆಯಾಡಿದ್ದಳು. ಇದಾದ ಬಳಿಕ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದ ಲುಬ್ನಾ, ಜತೆಗಿದ್ದ ಸಮಯದಲ್ಲಿ ಸೆರೆಹಿಡಿದಿರುವ ಇಂಟಿಮೇಟ್​ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮುಸಿಉಲ್ಲ ವಿರುದ್ಧ ತಿರುವಲ್ಲಿಕ್ಕೇನಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಮಸಿಉಲ್ಲ ಖಾನ್​ನನ್ನು ದೂರಿನ ಆಧಾರದ ಮೇಲೆ ಬಂಧಿಸಲಾಗಿತ್ತು. ಇದಾದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    ಲುಬ್ನಾ ವಿರುದ್ಧ ಸರಣಿ ದೂರು

    ಇದೀಗ ಮತ್ತೊಂದು ದೂರು ದಾಖಲಿಸಿರುವ ಲುಬ್ನಾ, ದೂರು ಹಿಂಪಡೆಯುವಂತೆ ಮಸಿಉಲ್ಲನ ಪತ್ನಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಚೆನ್ನೈ ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾಳೆ. ಇನ್ನೊಂದೆಡೆ ಮುಸಿಉಲ್ಲ ಕೂಡ ಪೆರವಳ್ಳೂರು, ವೆಲ್ಲೂರು ಮತ್ತು ವಿನಿಯಂಪಾಡಿ ಪೊಲೀಸ್​ ಠಾಣೆಗಳಲ್ಲಿ ಲುಬ್ನಾ ವಿರುದ್ಧ ಸರಣಿ ದೂರುಗಳನ್ನು ದಾಖಲಿಸಿದ್ದಾನೆ.

    ಅಶ್ಲೀಲ ವಿಡಿಯೋ ಪೋಸ್ಟ್​

    ಮಸಿಉಲ್ಲನ ಪ್ರಕಾರ 2020ರಲ್ಲಿ ಆತ ತನ್ನ ಮೊದಲ ಪತ್ನಿಯಿಂದ ದೂರವಾಗಿದ್ದಾನೆ. ಇಬ್ಬರ ನಡುವೆ ಡಿವೋರ್ಸ್​ ಪ್ರಕರಣ ನಡೆಯುತ್ತಿದೆ. ಇದರ ನಡುವೆ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ ಮೂಲಕ ಲುಬ್ನಾಳ ಪರಿಚಯ ಆಯಿತು ಮತ್ತು ಆಕೆಯನ್ನು ಮದುವೆ ಆಗಲು ಉದ್ದೇಶಿಸಿದ್ದೆ. ಆದಾಗ್ಯೂ, ಆಕೆ ಭಾರತದಲ್ಲಿ ನಿಷೇಧಗೊಂಡಿರುವ ಆನ್​ಲೈನ್​ ವೇದಿಕೆಗಳಲ್ಲಿ ತನ್ನ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್​ ಮಾಡಿ ಹಣ ಸಂಪಾದಿಸುತ್ತಿರುವುದು ಗೊತ್ತಾಯಿತು. ಇದರಿಂದ ನಾನು ಆಕೆಯಿಂದ ಪ್ರತ್ಯೇಕವಾದೆ. ಇಬ್ಬರು ಸಂಬಂಧದ್ದಲ್ಲಿದ್ದ ಸಮಯದಲ್ಲಿ ನನ್ನ ಸಾಕಷ್ಟು ಹಣವನ್ನು ಆಕೆ ವ್ಯಯಿಸಿದ್ದಾಳೆ ಎಂದು ಮಸಿಉಲ್ಲ ಆರೋಪ ಮಾಡಿದ್ದಾನೆ.

    ಇದನ್ನೂ ಓದಿ: VIDEO |ಅಯ್ಯಯ್ಯೋ ಸೆಖೆ ಸೆಖೆ.. ಟ್ರಾಫಿಕ್ ಸಿಗ್ನಲ್​​ನಲ್ಲೇ ಸ್ನಾನ ಮಾಡಿದ ಯುವಕ, ಯುವತಿ

    ಎರಡು ಕಡೆಯ ಸ್ಟೋರಿಯನ್ನು ಕೇಳಿ ಇಬ್ಬರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸತ್ಯಾಸತ್ಯತೆ ಏನೆಂದು ತಿಳಿಯಲು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಜರ್ಸಿ ನಂ. 18, ಮೇ 18 ಮತ್ತು ಶತಕ: 18ನೇ ಸಂಖ್ಯೆ ಹಿಂದಿನ ರಹಸ್ಯ ಬಿಚ್ಚಿಟ್ಟ ಕಿಂಗ್​ ಕೊಹ್ಲಿ!

    ನಿಮ್ಮ ಹಳೆಯ ಚಿನ್ನಕ್ಕೆ ಕುತ್ತು? ಕೇಂದ್ರದಿಂದ ಹೊಸ ನಿಯಮ, ಕೂಡಲೇ ಈ ಕೆಲಸ ಮಾಡಿ…

    ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಮುಂದಾಗುತ್ತಾ ಕೇಂದ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts