More

  ವಿವಾದಕ್ಕೆ ಅವಕಾಶ ಕೊಡದ ರಶ್ಮಿಕಾ; ಐಶ್ವರ್ಯ ಹೇಳಿಕೆಗೆ ನಟಿ ನೀಡಿದ ಪ್ರತಿಕ್ರಿಯೆ ಹೀಗಿದೆ..!

  ಹೈದರಾಬಾದ್​: ಇತ್ತೀಚಿಗೆ ನಡೆದ ಫರ್ಹಾನಾ ಸಿನಿಮಾ ಪ್ರಚಾರ ಕಾರ್ಯದ ವೇಳೆ ಕಾಲಿವುಡ್​ ನಟಿ ಐಶ್ವರ್ಯ ರಾಜೇಶ್​ ರಶ್ಮಿಕಾ ಮಂದಣ್ಣ ಕುರಿತು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದರು.

  ಸುಕುಮಾರ್​ ನಿರ್ದೇಶನದ ಪುಷ್ಪ ಚಿತ್ರದ ಶ್ರೀವಲ್ಲಿ ಪಾತ್ರ ಅವರಿಗಿಂತ ನನಗೆ ಚೆನ್ನಾಗಿ ಹೊಂದುತ್ತದೆ ಎಂದು ಹೇಳಿದ್ದು ಉಭಯ ನಟಿಯರ ಅಭಿಮಾನಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

  ಇದನ್ನೂ ಓದಿ: ಆ ಒಂದು ಪಾತ್ರ ರಶ್ಮಿಕಾಗಿಂತ ನನಗೆ ಚೆನ್ನಾಗಿ ಹೊಂದುತ್ತೆ: ನಟಿ ಐಶ್ವರ್ಯಾ ರಾಜೇಶ್​ ಹೇಳಿಕೆ

  ಪ್ರೀತಿ, ಗೌರವ ಹಾಗೂ ಕಾಳಜಿ

  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನೀವು ಏನು ಹೇಳಿದ್ದೀರ ನನಗೆ ಅರ್ಥವಾಗಿದೆ. ಈ ಕುರಿತು ವಿವರಿಸಲು ಯಾವುದೇ ಕಾರಣಗಳಿಲ್ಲ ಎಂದು ನಾನು ಬಯಸುತ್ತೇನೆ.

  ನಿಮಗೆ ತಿಳಿದಿರುವ ಹಾಗೆ ನಾನು ಮಾತ್ರ ನಿಮ್ಮ ಬಗ್ಗೆ ಪ್ರೀತಿ, ಗೌರವ ಹಾಗೂ ಕಾಳಜಿಯನ್ನು ಹೊಂದಿದ್ದೇನೆ. ನಿಮ್ಮ ನಟನೆಯ ಫರ್ಹಾನಾ ಚಿತ್ರಕ್ಕೆ ಶುಭಹಾರೈಕೆಗಳು ಎಂದು ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ಧಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts