More

    ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ; ಸಂಚಾರ ಮಾರ್ಗ ಮಾರ್ಪಾಡು

    ಬೆಂಗಳೂರು: ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿ ಸೇರಿದಂತೆ ಕೆಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ ಪ್ರದೇಶದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್​ ಏರ್ಪಾಟ್ಟು ಮಾಡಿದ್ದಾರೆ.

    ಹೀಗಾಗಿ ಸಂಚಾರ ದಟ್ಟಣೆ ತಪ್ಪಿಸಲು ಕಂಠೀರವ ಕ್ರೀಡಾಂಗಣಕ್ಕೆ ಸಂಪರ್ಕಿಸುವ ರಸ್ತೆ ಮಾರ್ಗಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದು ಬೆಳಗ್ಗೆ 9:30ರಿಂದ ಮಧ್ಯಾಹ್ನ 2:30ರವೆರೆಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

    ಯಾವ್ಯಾವ ಮಾರ್ಗದಲ್ಲಿ ಸಂಚಾರಕ್ಕೆ ಬ್ರೇಕ್?

    1) ಕ್ವೀನ್ಸ್ ವೃತ್ತದ ಕಡೆಯಿಂದ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಎಲ್ಲಾ ಮಾದರಿಯ ವಾಹನಗಳನ್ನು ನಿರ್ಭಂಧ.

    ಕ್ವೀನ್ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಲ್ಯಾವಲ್ಲಿ ರಸ್ತೆ ಅಥವಾ ಕ್ವಿನ್ಸ್ ರಸ್ತೆಯ ಮೂಲಕ ಸಂಚಾರಕ್ಕೆ ಸೂಚನೆ.

    2) ಬಾಳೇಕುಂದ್ರಿ ವೃತ್ತದಿಂದ ಕ್ವೀನ್ ವೃತ್ತದ ಕಡೆಗೆ ತೆರಳುವ ವಾಹನಗಳು- ಪಟ್ಟಾ ಜಂಕ್ಷನ್ ನಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ದೈವರ್ಷನ್ ಮಾಡುವುದರಿಂದ ಬಿಎಂಟಿಸಿ ಹಾಗು ಇತರೆ ವಾಹನಗಳು ಪೊಲೀಸ್‌ ತಿಮ್ಮಯ್ಯ ವೃತ್ತದಲ್ಲಿ ತಿರುವು ಪಡೆದು ಸಂಚಾರಕ್ಕೆ ಸೂಚನೆ.

    Traffic (1)

    3) ಸಿಟಿಓ ವೃತ್ತದಿಂದ ಕ್ವೀನ್ ವೃತ್ತದ ಕಡೆಗೆ ವಾಹನಗಳ ಸಂಚಾರ ನಿರ್ಭಂಧ. ಕಬ್ಬನ್ ರಸ್ತೆಯ ಮುಖೇನ ಅನಿಲ್ ಕುಂಬ್ಳೆ ವೃತ್ತದ ಕಥೆಗೆ ಅಥವಾ ಮಣಿಪಾಲ್‌ ಸೆಂಟರ್ ಕಡೆಗೆ ಸಂಚಾರಕ್ಕೆ ಅನುಕೂಲ.

    4)ಹಲಸೂರು ಗೇಟ್ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ.

    ಇದನ್ನೂ ಓದಿ: ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆ ಆಗಿಲ್ಲ: ಅದಾನಿ ಗ್ರೂಪ್​ಗೆ ಕ್ಲೀನ್​ಚಿಟ್​ ಕೊಟ್ಟ ಸುಪ್ರೀಂಕೋರ್ಟ್​ ಸಮಿತಿ

    ಪಾರ್ಕಿಂಗ್ ವ್ಯವಸ್ಥೆ

    ಇನ್ನು ಕಾರ್ಯಕ್ರಮಕ್ಕೆ ಬರುವ ವಿಐಪಿ, ವಿವಿಐಪಿ, ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಾಹನಗಳಿಗೆ ಸೆಂಟ್ ಜೋಸೆಫ್‌ ಕಾಲೇಜ್‌ ಮೈದಾನ, ಬಿಬಿಎಂಪಿ ಮುಖ್ಯ ಕಛೇರಿ ಆವರಣ, ಬಾದಾಮಿ ಹೌಸ್, ಕೆ.ಜಿ. ರಸ್ತೆಯ ಎಡ ಬದಿಯಲ್ಲಿ ಹಾಗೂ ಯುನೈಟೆಡ್ ಮಿಷನ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

    ಆರ್.ಆರ್.ಎಂ.ಆರ್, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಾರ್ವಜನಿಕರ ಎಂಟ್ರಿ, ಪಾರ್ಕಿಂಗ್ ವ್ಯವಸ್ಥೆ ಹೇಗೆ?

    ಕೆಜಿ ರಸ್ತೆಯ ಎಸ್.ಬಿ.ಎಂ ಜಂಕ್ಷನ್, ರಿಚ್ ಮಂಡ್ ಸರ್ಕಲ್/ಕ್ವೀನ್ಸ್​ ಸರ್ಕಲ್ ಬಳಿ ಅವಕಾಶ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಅರಮನೆ ಮೈದಾನದಲ್ಲಿ ವಾಹನ ಪಾರ್ಕಿಂಗ್​ಗೆ ಅವಕಾಶ ಮಾಡಿಕೊಡಲಾಗಿದೆ.

    ಕಾರ್ಯಕ್ರಮಕ್ಕೆ ಬರುವವರು ಯಾವುದೇ ರೀತಿಯ ಸ್ಫೋಟಕ, ಚೂಪಾದ ವಸ್ತು, ಬೆಂಕಿಪಟ್ಟಣ, ಲೈಟರ್ ಗಳು ತರದಂತೆ ಸೂಚಿಸಲಾಗಿದೆ.

    ಕಂಠೀರವ ಸ್ಟೇಡಿಯಂ ಸಮೀಪವಿರುವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಬೆಳಿಗ್ಗೆ 8.30ರ ಒಳಗಾಗಿ ತಲುಪುವಂತೆ ಪೊಲೀಸ್​ ಅಧಿಕಾರಿಗಳು ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts