More

    ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆ ಆಗಿಲ್ಲ: ಅದಾನಿ ಗ್ರೂಪ್​ಗೆ ಕ್ಲೀನ್​ಚಿಟ್​ ಕೊಟ್ಟ ಸುಪ್ರೀಂಕೋರ್ಟ್​ ಸಮಿತಿ

    ನವದೆಹಲಿ: ಮೇಲ್ನೋಟಕ್ಕೆ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂಬ ವರದಿ ನೀಡುವ ಮೂಲಕ ಹಿಂಡನ್​ಬರ್ಗ್​ ವರದಿ ಪ್ರಕರಣದಲ್ಲಿ ಅದಾನಿ ಗ್ರೂಪ್​ಗೆ ಸುಪ್ರೀಂಕೋರ್ಟ್​ ಸಮಿತಿ ಕ್ಲೀನ್​ಚಿಟ್​ ನೀಡಿದೆ.

    ಸೆಬಿ (SEBI) ಮಾರುಕಟ್ಟೆ ನಿಯಂತ್ರಕ ವ್ಯವಸ್ಥೆಯ ಭಾಗವಾಗಿ ಯಾವುದೇ ನಿಯಮಗಳನ್ನು ಅನುಸರಿಸುವಲ್ಲಿ ಅದಾನಿ ಗ್ರೂಪ್​ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ನೇಮಿಸಿರುವ ತಜ್ಞರ ಸಮಿತಿ ವರದಿ ನೀಡಿದ್ದು, ಅದಾನಿ ಗ್ರೂಪ್​ಗೆ ಕ್ಲೀನ್​ಚಿಟ್​ ನೀಡಿದೆ.

    ಅದಾನಿ ಗ್ರೂಪ್​ ಕಡೆಯಿಂದ ಬೆಲೆಯಲ್ಲೂ ಯಾವುದೇ ವಂಚನೆ ನಡೆದಿಲ್ಲ. ತನ್ನ ಚಿಲ್ಲರೆ ಹೂಡಿಕೆದಾರರ ಸುರಕ್ಷತೆಗಾಗಿ ಅಗತ್ಯವಾದ ಕ್ರಮವನ್ನು ತೆಗೆದುಕೊಂಡಿದೆ. ಅಲ್ಲದೆ, ಆರ್ಥಿಕ ಅಪಾಯವನ್ನು ತಗ್ಗಿಸಲು ಅದಾನಿ ಗ್ರೂಪ್​ ತೆಗೆದುಕೊಂಡ ಕ್ರಮಗಳು ಸ್ಟಾಕ್​ ಮೇಲಿನ ನಂಬಿಕೆಯನ್ನು ಗಳಿಸಲು ನೆರವಾಗಿದೆ. ಅದಾನಿ ಗ್ರೂಪ್​ ಸ್ಟಾಕ್​ಗಳು ಇದೀಗ ಸ್ಥಿರವಾಗಿವೆ ಎಂದು ಸಮಿತಿ ತಿಳಿಸಿದೆ.

    ಇದನ್ನೂ ಓದಿ: 1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ

    ಸುಪ್ರೀಂಕೋರ್ಟ್​ಗೆ ಸಮಿತಿ ಸಲ್ಲಿಸಿರುವ ವರದಿಯ ಪ್ರಮುಖಾಂಶಗಳು

    * ಒಂದೇ ಪಾರ್ಟಿಗಳ ನಡುವೆ ಅನೇಕ ಬಾರಿ ಕೃತಕ ವ್ಯಾಪಾರ ಅಥವಾ ಯಾವುದೇ ವಾಶ್​ ಟ್ರೇಡಿಂಗ್​ ಮಾದರಿ ಕಂಡುಬಂದಿಲ್ಲ.
    * ಅಬ್ಯುಸಿವ್​ ಟ್ರೇಡಿಂಗ್ (ನೋಂದಾಯಿತ ತೆರೆದ ಷೇರುಗಳ ಖರೀದಿ ಅಥವಾ ಮಾರಾಟದ ಮೇಲೆ ಪರಿಣಾಮ ಬೀರುವುದು)​ ನಲ್ಲಿ ಯಾವುದೇ ಸುಸಂಬದ್ಧ ಮಾದರಿ ಬೆಳಕಿಗೆ ಬಂದಿಲ್ಲ.
    * ಕನಿಷ್ಠ ಸಾರ್ವಜನಿಕ ಷೇರುದಾರರು, ಹೂಡಿಕೆಗಳ ಮೇಲೆ ಸಂಬಂಧಿತ ಪಕ್ಷಗಳಿಂದ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ.
    * ಕನಿಷ್ಠ ಸಾರ್ವಜನಿಕ ಷೇರುಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಂತ್ರಕ ವೈಫಲ್ಯ ಕಂಡುಬಂದಿಲ್ಲ.

    ಗೌತಮ್​ ಅದಾನಿ ಒಡೆತನದ ಅದಾನಿ ಸಮೂಹದ ಷೇರುಪೇಟೆ ಅಕ್ರಮ ಮತ್ತು ತೆರಿಗೆ ವಂಚನೆ ಕುರಿತು ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ರ್ಬಗ್​ ವರದಿ ಮಾಡಿದ ಬಳಿಕ ಅದಾನಿ ಗ್ರೂಪ್​ ವಿವಾದದ ಸುಳಿಗೆ ಸಿಲುಕಿಕೊಂಡಿತು. (ಏಜೆನ್ಸೀಸ್​)

    ಕಾಂಗ್ರೆಸ್​ನ ನಿಜ ಮುಖ ಬಯಲಾಗಿದೆ: ಬಿ.ವೈ. ವಿಜಯೇಂದ್ರ ವಾಗ್ದಾಳಿ

    ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವನ ದೇವಾಲಯ; ASIನಿಂದ ಎಚ್ಚರಿಕೆ

    ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts