More

    1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ

    ಬೆಂಗಳೂರು: ಕ್ರಿಕೆಟ್​ ಎಂದರೆ ಸಖತ್​ ಕ್ರೇಜ್​​. ಯುವಕ, ಯುವತಿ, ವೃದ್ಧರಿದಂದ ಹಿಡಿದು ಚಿಕ್ಕ ಮಕ್ಕಳು ಕೂಡಾ ಕ್ರಿಕೆಟ್​​​ ಇಷ್ಟ ಪಡುತ್ತಾರೆ. ಐಪಿಎಲ್ ಹವಾ ಕಳೆದ ಕೆಲವು ವಾರಗಳಿಂದ ಶುರುವಾಗಿದೆ. ಆದರೆ ಒಂದು ವಿಚಾರವಾಗಿ ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯದ ಭಾರೀ ಚರ್ಚೆಯಲ್ಲಿದೆ.

    2023 ಮೇ 21 ರಂದು ಆರ್​ಸಿಬಿ ಮತ್ತು ಗುಜರಾತ್​ ಟೈಟನ್ಸ್​ ನಡುವೆ ಐಪಿಎಲ್​ ಪಂದ್ಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿಯೇ ಮ್ಯಾಚ್​ ನಡೆಯುತ್ತಿರುವುದರಿಂದ ಅಭಿಮಾನಿಗಳು ಮ್ಯಾಚ್​ ವೀಕ್ಷಿಸಲು ಕಾತುರರಾಗಿದ್ದಾರೆ. ಆದರೆ ಆರ್​ಸಿಬಿ ಪಂದ್ಯವನ್ನು ನೋಡಲು ಟಿಕೆಟ್​ ಸಿಗುತ್ತಿಲ್ಲ ಎಂದು ಅಭಿಮಾನಿಗಳು ಮ್ಯಾನೆಜ್​ಮೆಂಟ್ ವಿರುದ್ಧವಾಗಿ ಹಿಡಿ ಶಾಪ ಹಾಕುತ್ತಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್​ ಟೈಟನ್ಸ್​ ತಂಡಗಳು ಸೆಣಸಾಡುತ್ತಿದೆ. ಹುಬ್ಬಳ್ಳಿ, ಧಾರವಾಡ, ರಾಯಚೂರು ಸೇರಿದಂತೆ ಅನೇಕ ಭಾಗಗಳಿಂದ ಅಭಿಮಾನಿಗಳು ಬಂದಿದ್ದಾರೆ. ಆದರೆ ಇವರಿಗೆ ಮ್ಯಾಚ್​​ ವೀಕ್ಷಣೆಗೆ ಟಿಕೆಟ್​ ಸಿಗುತ್ತಿಲ್ಲ. ಈ ಕುರಿತಾಗಿ ಸಾಕಷ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಭಿಮಾನಿಗಳು ಹೇಳಿದ್ದೇನು?: 9 ಸಾವಿರ ಟಿಕೆಟ್​ಗಳಿವೆ. ಆದರೆ ನೂರು ಟಿಕೆಟ್​ಗಳ ಹಂಚಿಕೆ ಕೂಡಾ ಆಗಿಲ್ಲ. ಬೆಳಿಗ್ಗೆ 5 ಗಂಟೆಯಿಂದ ನಾವು ಟಿಕೆಟ್​ಗಾಗಿ ಕಾಯುತ್ತಿದ್ದೇವೆ. 1200 ರೂಪಾಯಿ ಬೆಲೆಯ ಟಿಕೆಟ್​ನ್ನು 8 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪೊಲೀಸರೇ ಈ ಟಿಕೆಟ್​ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮ್ಯಾನೆಜ್​ಮೆಂಟ್​​ ಬಳಿ ಈ ಕುರಿತಾಗಿ ಕೇಳಿದರೆ, ಪೊಲೀಸರ ಬಳಿ ದೂರು ನೀಡಿ, ಫ್ರಿಡಂ ಪಾರ್ಕ್​​ನಲ್ಲಿ ಕುಳಿತು ಪೈಟ್​ ಮಾಡಿ ಎಂದು ಹೇಳುತ್ತಿದ್ದಾರೆ. ಹುಬ್ಬಳ್ಳಿ, ಕೋಲಾರ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಯಿಂದ ಸರಿಸುಮಾರು 5 ಸಾವಿರ ಜನರು ಬಂದು ಟಿಕೆಟ್​ಗಾಗಿ ಕಾಯುತ್ತಿದ್ದೇವೆ. ಕ್ರೀಡಾಂಗಣದಲ್ಲಿ 40 ಸಾವಿರ ಆಸನಗಳು ಇವೆ. ಕೇವಲ 150 ಟಿಕೆಟ್​ ಮಾತ್ರ ಕೊಟ್ಟಿದ್ದಾರೆ. ಉಳಿದ ಟಿಕೆಟ್​ಗಳು ಯಾಕೆ ಕೊಡುತ್ತಿಲ್ಲ. ಈ ಕುರಿತಾಗಿ ಪ್ರಶ್ನೆ ಮಾಡಿದೆ ಸರಿಯಾದ ಮಾಹಿತಿಯನ್ನು ಯಾರು ನೀಡುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.

    ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts