ಕಾಂಗ್ರೆಸ್​ನ ನಿಜ ಮುಖ ಬಯಲಾಗಿದೆ: ಬಿ.ವೈ. ವಿಜಯೇಂದ್ರ ವಾಗ್ದಾಳಿ

B Y Vijayendra
Published on

ಬೆಂಗಳೂರು: ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್​ನ ನಿಜವಾದ ಮುಖ ಬಯಲಾಗಿದೆ ಎಂದು ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.

ಮೌನವಾಗಿದ್ದಾರೆ

ಟ್ವೀಟ್​ ಮೂಲಕ ಕಾಂಗ್ರೆಸ್​ ವಿರುದ್ಧ ವಿಜಯೇಂದ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಅಧಿಕಾರದ ಲಾಭಕ್ಕಾಗಿ ಲಿಂಗಾಯತ ಹೆಸರನ್ನು ಪಾದಪೀಠವಾಗಿಸಿಕೊಂಡ ಕಾಂಗ್ರೆಸ್​ನ ಧೀಮಂತ ನಾಯಕರು ಲಿಂಗಾಯತರಿಗೆ ಸಿಎಂ ಅಥವಾ ಡಿಸಿಎಂ ನೀಡಿ ಎಂಬ ಮಾತು ಕೇಳಿಬಂದಾಗ ಮೌನವಾಗಿದ್ದಾರೆ.

ಇದೇ ಮೊದಲೇನಲ್ಲ

39 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದರು ಯಾವೊಬ್ಬ ಲಿಂಗಾಯತ ನಾಯಕನೂ ಕೂಡ ಸರಿಯಾದ ಸ್ಥಾನಕ್ಕಾಗಿ ತಮ್ಮ ಧ್ವನಿ ಎತ್ತದಿರುವುದು ವಿಪರ್ಯಾವಾಗಿದೆ. ಕಾಂಗ್ರೆಸ್​ನ ಅಸಲಿ ಮುಖ ಬಯಲಾಗಿದೆ. ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್​ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನಿಂದಲೂ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್​ ನ್ಯಾಯ ಒದಿಗಿಸಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ.

ಅಣ್ಣ ಬಸವಣ್ಣ ಮತ್ತು ಅವರ ಬೋಧನೆಗಳನ್ನು ನಿಜವಾಗಿಯೂ ಪ್ರತಿನಿಧಿಸುವುದು ಬಿಜೆಪಿ ಮಾತ್ರ. ಬಸವಣ್ಣನವರ ತತ್ವವನ್ನು ಅನುಸರಿಸುವ ಮೂಲಕ ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net