ಸಿನಿಮಾ

ಕಡಿಮೆ ಬೆಲೆಗೆ ಸಿಕ್ತು ಅಂತ ಮೊಬೈಲ್​ ಖರೀದಿಸಿದ್ರೆ ಸಂಕಟ ಗ್ಯಾರಂಟಿ! ಮಂಡ್ಯ ಪೊಲೀಸರಿಂದ ಎಚ್ಚರಿಕೆ

ಮಂಡ್ಯ: ಯಾರೇ ಆಗಲಿ ಯಾವುದನ್ನಾದರೂ ಖರೀದಿಸುವಾಗ ಆದಷ್ಟು ಕಡಿಮೆ ಬೆಲೆಗೆ ಸಿಗಲಿ ಎಂದು ಆಸೆ ಪಡುತ್ತಾರೆ. ಈ ರೀತಿ ಆಸೆ ಪಡುವುದು ತಪ್ಪಲ್ಲ. ಆದರೆ, ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಅಂತ ಯಾಮಾರಿದರೆ ಮುಂದೆ ಪಶ್ಚತಾಪ ಪಡುವುದು ಕೂಡ ಕಂಡಿತ. ಇದಕ್ಕೆ ತಾಜಾ ನಿದರ್ಶನವೊಂದು ಸಕ್ಕರೆ ನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಅತ್ತ ದುಡ್ಡು ಇಲ್ಲ, ಇತ್ತ ಮೊಬೈಲ್​ ಕೂಡ ಇಲ್ಲ

ಗ್ರಾಹಕರೆ ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಮುನ್ನ ತುಂಬಾ ಎಚ್ಚರಿಕೆ ವಹಿಸಿ. ಬಿಲ್ ಇಲ್ಲದೆ ಕಡಿಮೆ ಬೆಲೆಗೆ ಸಿಕ್ತು ಅಂತ ಫೋನ್ ಖರೀದಿ ಮಾಡಿದರೆ ಇಕ್ಕಟ್ಟಿ ಸಿಲುಕಬೇಕಾಗುತ್ತದೆ. ಒಂದು ಕ್ಷಣ ಯಾಮಾರಿದರೆ, ಅತ್ತ ದುಡ್ಡು ಇಲ್ಲ, ಇತ್ತ ಮೊಬೈಲ್ ಕೂಡ ಸಿಗದ ಪರಿಸ್ಥಿತಿ ಬರಬಹುದು ಎಚ್ಚರ!

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಆಕ್ರೋಶ; ರಾತ್ರಿಯಿಂದ ಕಾದರೂ 150 ಟಿಕೆಟ್ ಮಾರಿದ ಆರೋಪ…

Mandya Police

23 ಲಕ್ಷ ರೂ. ಮೌಲ್ಯದ 130 ಮೊಬೈಲ್​ಗಳು

ಕಳವು ಮಾಡಿದ ಮೊಬೈಲ್ ಮಾರಾಟ ಮಾಡಿ ಯಾಮಾರಿಸುವವರಿದ್ದಾರೆ ಹುಷಾರ್! ಇದೇ ರೀತಿ ಕಳ್ಳತನ ಮಾಡಿ ಮಾರಿದ್ದ ಬರೋಬರಿ 130 ಮೊಬೈಲ್​ಗಳನ್ನು ಮಂಡ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 23 ಲಕ್ಷ ರೂ. ಮೌಲ್ಯದ 130 ಮೊಬೈಲ್​ಗಳನ್ನು ವಶಕ್ಕೆ ಪಡೆದು ವಾರಸುದಾರಿಗೆ ಪೊಲೀಸರು ವಾಪಸ್​ ನೀಡಿದ್ದಾರೆ.

CEIR ತಂತ್ರಾಂಶ

ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಮೊಬೈಲ್​ಗಳು ಇವಾಗಿವೆ. ಮೊಬೈಲ್​ ಕಳೆದುಕೊಂಡಿದ್ದವರು CEN ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ CEIR (ಸೆಂಟ್ರಲ್ ಎಕ್ಯೂಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ತಂತ್ರಾಂಶದ ಮೂಲಕ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳುವಾಗಿದ್ದ ಫೋನ್​ಗಳನ್ನು ಪ್ರಸ್ತುತ ಬಳಸುತ್ತಿದ್ದವರನ್ನು ಸಂಪರ್ಕಿಸಿ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

CEN ಪೊಲೀಸ್ ಠಾಣೆ ಆರಕ್ಷಕ ಜಯಕುಮಾರ್ ನೇತೃತ್ವದ ವಿಶೇಷ ತಂಡದಿಂದ ಮೊಬೈಲ್​ಗಳನ್ನು ಸೀಜ್​ ಮಾಡಲಾಗಿದೆ. ಅವುಗಳನ್ನು ಮಂಡ್ಯ ಎಸ್​ಪಿ ಎನ್​. ಯತೀಶ್​ ನೇತೃತ್ವದಲ್ಲಿ ಕಳೆದುಕೊಂಡಿದ್ದವರಿಗೆ ಹಿಂದಿರುಗಿಸಲಾಗಿದೆ. ಕಡಿಮೆ ಬೆಲೆ ಮೊಬೈಲ್​ ಸಿಕ್ತು ಅಂತ ಖರೀದಿ ಮಾಡಿದವರು ಹಣ ಮತ್ತು ಮೊಬೈಲ್​ ಎರಡನ್ನು ಕಳೆದುಕೊಂಡು ರೋಧಿಸುತ್ತಿದ್ದಾರೆ.

ಇದನ್ನೂ ಓದಿ: ಲಾಲ್​ ಸಲಾಂ ಚಿತ್ರದಲ್ಲಿ ಕಪಿಲ್​ ದೇವ್​: ಕ್ರಿಕೆಟ್​ ಲೆಜೆಂಡ್​ ಜತೆ ನಟಿಸುವುದು ನನ್ನ ಸೌಭಾಗ್ಯ ಎಂದ ರಜನಿಕಾಂತ್​

Mandya Police

CEIR ಪೋರ್ಟಲ್ ಉಪಯೋಗಿಸಿಕೊಳ್ಳಿ

ಐಪೋನ್ ಸೇರಿ ವಿವಿಧ ಕಂಪೆನಿಗಳ ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ್ದ ಮೊಬೈಲ್​​ಗಳನ್ನು ಖದೀಮರು ಬೇರೆ ಬೇರೆ ರಾಜ್ಯಕ್ಕೂ ಮಾರಾಟ ಮಾಡಿದ್ದರು. ಎಲ್ಲವನ್ನೂ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಸಾರ್ವಜನಿಕರು CEIR ಪೋರ್ಟಲ್ ಉಪಯೋಗಿಸಿಕೊಳ್ಳಬೇಕು. ದೂರು ನೀಡಿದ್ರೆ ಕಳುವಾದ ನಿಮ್ಮ ಫೋಮ್​ಗಳ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಯತೀಶ್ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ಅಶ್ಲೀಲ ವಿಡಿಯೋ ಅಪ್​ಲೋಡ್​! ನಟಿಯ ವಿರುದ್ಧವೇ ಗಂಭೀರ ಆರೋಪ ಮಾಡಿದ ಪ್ರಿಯಕರ

ಪಿಯು ಮರು ಮೌಲ್ಯಮಾಪನ: ತಬಸುಮ್​ ಹಿಂದಿಕ್ಕಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಶು ನಾಯ್ಕ್!

ಸುಪ್ರೀಂ ಕೋರ್ಟ್​ಗೆ ಇಬ್ಬರು ಹೊಸ ನ್ಯಾಯಾಧೀಶರ ನೇಮಕ

Latest Posts

ಲೈಫ್‌ಸ್ಟೈಲ್