More

    ಸುಪ್ರೀಂ ಕೋರ್ಟ್​ಗೆ ಇಬ್ಬರು ಹೊಸ ನ್ಯಾಯಾಧೀಶರ ನೇಮಕ

    ನವದೆಹಲಿ: ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕಲ್ಪತಿ ವೆಂಕಟರಮಣ ವಿಶ್ವನಾಥನ್ ಅವರು ಶುಕ್ರವಾರದಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಮೂಲಕ ಭಾರತದ ಸುಪ್ರೀಂ ಕೋರ್ಟ್ ಇಂದು ಇಬ್ಬರು ಹೊಸ ನ್ಯಾಯಾಧೀಶರನ್ನು ಪಡೆದುಕೊಂಡಿದೆ.

    ಮೂವರು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಕೆಎಂ ಜೋಸೆಫ್, ಜಸ್ಟಿಸ್ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರು ಬೇಸಿಗೆ ರಜೆಯಲ್ಲೇ ಪದತ್ಯಾಗ ಮಾಡುತ್ತಿರುವುದರಿಂದ ಸಿಜೆಐ ಸೇರಿದಂತೆ 34 ನ್ಯಾಯಾಧೀಶರ ಸಂಪೂರ್ಣ ಬಲವನ್ನು ಸುಪ್ರೀಂಕೋರ್ಟ್ ಅಲ್ಪಾವಧಿಗೆ ಮರಳಿ ಪಡೆದುಕೊಂಡಿದೆ.

    ಇದನ್ನೂ ಓದಿ: ಆ್ಯಂಟಿ-ಇಂಡಿಯಾ ಗ್ಯಾಂಗ್​ನ ಕೆಲ ನ್ಯಾಯಾಧೀಶರು ನ್ಯಾಯಾಂಗವನ್ನು ಸರ್ಕಾರದ ವಿರುದ್ಧ ಹೋಗುವಂತೆ ಮಾಡುತ್ತಿದ್ದಾರೆ: ಕೇಂದ್ರ ಸಚಿವ ಕಿರಣ್ ರಿಜಿಜು

    ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಂಆರ್ ಶಾ ಅವರ ನಿವೃತ್ತಿಯೊಂದಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ ನ್ಯಾಯಾಧೀಶರ ಬಲವು ಮಂಜೂರಾದ 34 ಕ್ಕೆ ಹೋಲಿಸಿದರೆ 32 ಕ್ಕೆ ಕುಸಿದಿದೆ.

    ನ್ಯಾಯಮೂರ್ತಿ ಮಿಶ್ರಾ ಮತ್ತು ವಿಶ್ವನಾಥನ್ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಆದೇಶವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಚೇರಿಯಿಂದ ಗುರುವಾರ ಹೊರಡಿಸಲಾಗಿದ್ದು ನೇಮಕಾತಿಗಳನ್ನು ಹೊಸ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

    ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ತಡೆ ಅರಿವು ಅತ್ಯಗತ್ಯ- ನ್ಯಾಯಾಧೀಶ ಪ್ರವೀಣ ನಾಯಕ ಹೇಳಿಕೆ 

    ಜಸ್ಟಿಸ್ ವಿಶ್ವನಾಥನ್ ಅವರು ಆಗಸ್ಟ್ 11, 2030 ರಂದು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ನಿವೃತ್ತರಾದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ ಮತ್ತು ಮೇ 25, 2031 ರವರೆಗೆ ಹುದ್ದೆಯಲ್ಲಿ ಇರುತ್ತಾರೆ.

    ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಮೇ 16 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ನೇಮಕಕ್ಕೆ ಶಿಫಾರಸು ಮಾಡಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts