More

    ಸಿಇಟಿ ಪರೀಕ್ಷೆ ದಿನವೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ; ರೂಟ್​ ಮ್ಯಾಪ್ ಕೇಳಿರುವ ಕೆಇಎ

    ಬೆಂಗಳೂರು: ಸಿಇಟಿ ವಿದ್ಯಾರ್ಥಿಗಳಿಗೆ ಇದೀಗ ಪರೀಕ್ಷೆ ದಿನವೇ ಸಿಎಂ ಪ್ರಮಾಣವಚನ ಕಾರ್ಯಕ್ರಮ ಇರುವುದರಿಂದ ಗೊಂದಲ ಶುರುವಾಗಿದೆ. ಇದರಿಂದಾಗಿ ಕೆಇಎ ಬೋರ್ಡ್ ಹಾಗೂ ಸಿಇಟಿ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.

    ಸಿಇಟಿ ಪರೀಕ್ಷೆ ದಿನವೇ ಸಿಎಂ ಪ್ರಮಾಣ ವಚನ ಹಿನ್ನಲೆ ಕೆಇಎ ಮಂಡಳಿ ಬೆಂಗಳೂರು ನಗರ ಸಂಚಾರಿ ಪೊಲೀಸ್ ಆಯುಕ್ತರ ಮೊರೆ ಹೋಗಿದೆ. ಬೆಂಗಳೂರಿನ ಹೃದಯ ಭಾಗದಲ್ಲಿಯೇ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಪ್ರಮಾಣ ವಚನದ ರೂಟ್ ಮ್ಯಾಪ್ ನೀಡುವಂತೆ ಕೆಇಎ ಮಂಡಳಿ ಮನವಿ ಮಾಡಿದೆ.

    ಇದನ್ನೂ ಓದಿ: ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ | ವೃತ್ತಿಪರ ಕೋರ್ಸುಗಳಿಗೆ ಎಂದಿನಂತೆ ಭಾರಿ ಸ್ಪರ್ಧೆ

    ನಾಳೆ ಕಂಠಿರವ ಸ್ಟೇಡಿಯಂನಲ್ಲಿ 12:30ಕ್ಕೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ಸ್ಟೇಡಿಯಂ ಸುತ್ತಮುತ್ತ ಸಿಇಟಿ ಪರೀಕ್ಷಾ ಕೇಂದ್ರಗಳಿವೆ. ಡಿಕನ್ಸನ್ ರೋಡ್, ವಿಟ್ಠಲ್ ಮಲ್ಯ ರೋಡ್, ಸೇಂಟ್ ಜೋಸೆಫ್ ಕಾಲೇಜ್​ಗಳಲ್ಲಿ ನಾಳೆ ಸಿಇಟಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲು ನಾಳೆ ಸಾವಿರಾರು ವಿದ್ಯಾರ್ಥಿಗಳು ಬರಲಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕೆಇಎ ಮಂಡಳಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅವಕಾಶ ಮಾಡಿ ಕೊಡಲು ಮನವಿ ಮಾಡಿದೆ.

    ಇದನ್ನೂ ಓದಿ: ಕರ್ನಾಟಕ ಸಿಇಟಿ ಪರೀಕ್ಷೆ 2023: ಪ್ರವೇಶ ಪತ್ರ ಬಿಡುಗಡೆ

    ರೂಟ್​ ಮ್ಯಾಪ್​ ಕೇಳಿರುವ ಕೆಇಎ, ಯಾವ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಇರಲಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳ ಗಮನಕ್ಕೆ ತಂದು ಮನವಿ ಮಾಡುತ್ತೇವೆ ಎಂದು ಕೆಇಎ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts