More

    ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭದಂದು ಸಿಇಟಿ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಕಿರಿಕಿರಿ!

    ಬೆಂಗಳೂರು:ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ 2023ರ ಸಿಇಟಿ ಮೇ 20ರಿಂದ 22ರವರೆಗೆ ನಡೆಯಲಿದ್ದು, ಸಿಇಟಿ ಮೊದಲ ದಿನವೇ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಕೂಡ ಇರುವುದರಿಂದ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಕಿರಿ-ಕಿರಿ ಎದುರಾಗುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟ ಸೇರಲಿರುವ ಸಚಿವರ ಪಟ್ಟಿ ಇಲ್ಲಿದೆ ನೋಡಿ…

    ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ

    ಮೇ 20 ಶನಿವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದೇ ದಿನ ಸಿಇಟಿ 10.30ಕ್ಕೆ ಆರಂಭವಾಗಲಿದ್ದು, ಮೊದಲ ದಿನ ಗಣಿತ ಮತ್ತು ಜೀವಶಾಸದ ಪರೀಕ್ಷೆ ಇದೆ. ಈ ಬಾರಿ ಪರೀಕ್ಷೆಗೆ 2.61 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 1.40 ಲಕ್ಷ ಬಾಲಕಿಯರು ಮತ್ತು 1.21 ಲಕ್ಷ ಬಾಲಕರು ಹಾಗೂ 8 ತೃತೀಯ ಲಿಂಗಿಗಳಿದ್ದಾರೆ.

    ರಾಜ್ಯದಲ್ಲಿ 562 ಸಿಇಟಿ ಪರೀಕ್ಷಾ ಕೇಂದ್ರ

    ರಾಜ್ಯದಲ್ಲಿ 562 ಪರೀಕ್ಷಾ ಕೇಂದ್ರಗಳಿದ್ದು, 121 ಕೇಂದ್ರ ಬೆಂಗಳೂರಿನಲ್ಲಿವೆ. ಕಂಠೀರವ ಸ್ಟೇಡಿಯಂ ಅಕ್ಕ-ಪಕ್ಕ ಹಾಗೂ ಬೆಂಗಳೂರು ಹೃದಯ ಭಾಗಗಳಲ್ಲಿರುವ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸಲು ಶನಿವಾರ ಕಷ್ಟಪಡಬೇಕಾಗುವ ಸಂಭವ ಇದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾವಿರಾರೂ ಜನರು ಸೇರುವ ನಿರೀಕ್ಷೆ ಇದ್ದು, ಈ ವೇಳೆ ಬೆಳಗ್ಗೆ 8 ಗಂಟೆಯಿಂದಲೇ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಪುತ್ತೂರಿನಲ್ಲಿ ಪೊಲೀಸ್​​ ದೌರ್ಜನ್ಯ ಪ್ರಕರಣ | ಇದು ನೂರಕ್ಕೆ ನೂರು ಕಾಂಗ್ರೆಸ್​ನ ಕಿತಾಪತಿ; ಕಲ್ಲಡ್ಕ ಪ್ರಭಾಕರ ಭಟ್

    ಸಿಇಟಿ ಹಿನ್ನೆಲೆಯಲ್ಲಿ ಕೆಇಎ ಸಂಚಾರ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಸಂಚಾರ ದಟ್ಟಣೆ ಕುರಿತು ಸಲಹೆ ಕೇಳಿದೆ. ಶುಕ್ರವಾರ ಈ ಮಾಹಿತಿಯನ್ನು ವಿದ್ಯಾರ್ಥಿಗಳ ಗಮನಕ್ಕಾಗಿ ಪ್ರಕಟಿಸುವ ನಿರೀಕ್ಷೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts