More

    ದೇಶದಲ್ಲಿ ಕಾವಿ ಕಲ್ಯಾಣ ನಡೆಯುತ್ತಿದೆ

    ಬಳ್ಳಾರಿ : ಜನರು ಕಾಯಕ ಕಲ್ಯಾಣದ ಬಗ್ಗೆ ಪ್ರಶ್ನಿಸಿದರೆ, ಪ್ರಧಾನಿ ಮೋದಿ ರವರು ಕಾವಿ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಟ ಪ್ರಕಾಶ ರಾಜ್ ಲೇವಡಿ ಮಾಡಿದರು.
    ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾಪ್ರಭುಗಳು ದೇಶದಲ್ಲಿನ ಜಲ್ವಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಮಾವೇಶ, ಸಭೆಗಳಲ್ಲಿ ರಾಮಮಂದಿರ ಬಗ್ಗೆ ಹೇಳುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ವಿರೋಧ ಪಕ್ಷದವರಿಗೆ ಆಹ್ವಾನ ನೀಡಿದರೂ ಬರಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದ ನಾಲ್ಕು ಮಠದ ಸ್ವಾಮೀಜಿಗಳು ಹೋಗಲಿಲ್ಲ . ಹಾಗದರೆ, ಅವರೆಲ್ಲ ದೇಶ ದ್ರೋಹಿಗಳ ಎಂದು ಪ್ರಶ್ನಿಸಿದರು. ದೇಶದ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಿಲ್ಲ ಏಕೆ?. ಮೋದಿ ರವರ ಹೆಸರಿನಲ್ಲಿ ಮ ಇರುವುದರಿಂದ ಮುಸ್ಲಿಂ, ಮಟಾನ್, ಮಂದಿರ ಬಗ್ಗೆ ಸಮಾರಂಭಗಳಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಿಂದ 27 ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದ್ದೇವೆ ಆದರೆ, ಅವರೆಲ್ಲರೂ ಬರಪರಿಹಾರ ಬಗ್ಗೆ ಮಾತನಾಡಿಲ್ಲ. ಪ್ರಧಾನಿ ರಾಜ್ಯಕ್ಕೆ ಬಂದಾಗ ಮಾತ್ರ ನಮ್ಮ ತೆರಿಗೆ ಹಣದಲ್ಲಿ ರಸ್ತೆ ನಿರ್ಮಿಸುವುದು, ಸಮಾವೇಶ ಆಯೋಜಿಸುವುದೇ ಕೆಲಸವಾಗಿದೆ. ಭಾರತದ ಇತಿಹಾಸದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲ್ಲು ಹತ್ತಿದ್ದ ಮೊದಲ ರಾಜ್ಯ ಕರ್ನಾಟಕ. ನ್ಯಾಯಾಲಯ ಛೀಮಾರಿ ಹಾಕಿದ ನಂತರ ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಭಾರತದಲ್ಲಿ ನೂರು ಸ್ಮಾರ್ಟ್ ಸಿಟಿ ನಿರ್ಮಿಸಲಾಗುವುದು ಆಶ್ವಾಸನೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಹತ್ತು ಸ್ಮಾರ್ಟ್ ಸಿಟಿಗಳು ನಿರ್ಮಾಣ ಮಾಡಿಲ್ಲ. ಬಿಜೆಪಿಯಲ್ಲಿ ಭ್ರಷ್ಟಚಾರಿಗಳು, ಕಳ್ಳರು , ಕಾಮುಕರು ಸೇರಿದ್ದಾರೆ. ಇವೆರೆಲ್ಲ ಬಿಜೆಪಿ ಸೇರುವುದರಿಂದ ಕಳಂಕ ರಹಿತರಾಗುತ್ತಾರೆಯೇ ಬಿಜೆಪಿಯೇನು ವಾಷಿಂಗ್ ಮಿಷನ್ ಎಂದರು. ಉತ್ತರ ಪ್ರದೇಶದ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಶ್ನೆಗೆ ಉತ್ತರ ತಿಳಿಯದೆ ಜೈ ಶ್ರೀರಾಮ್ ಎಂದು ಬರೆದರೆ ಅಂಕ ನೀಡಿದ್ದಾರೆ, ಮುಂದಿನ ಭವಿಷ್ಯಕ್ಕೆ ಇವರಿಂದ ಏನು ಕೊಡುಗೆ ನಿರೀಕ್ಷಿಸಬಹುದು. ಕಳ್ಳ ಸರ್ಟಿಫಿಕೆಟ್ ಹಿಡಿದುಕೊಂಡು ಓಡಾಡುವನಿಗೆ ವಿದ್ಯೆ ಮಹತ್ವ ಏನು ಗೊತ್ತು ಎಂದು ಏಕವಚನದಲ್ಲಿಯೇ ಹೇಳಿದರು. ಅಪ್ಪ ಮಗ, ತಾತ ಮೊಮ್ಮಗನ ಪಕ್ಷ ಎಂದು ಲೇವಡಿ ಮಾಡಿದವರ ಜತೆಯಲ್ಲಿಯೇ ಮೈತ್ರಿ ಮಾಡಿಕೊಂಡಿದ್ದಾರೆ. ಉಚಿತ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದವರು, ಈಗ ನಿಮ್ಮ ಮಗ ದಾರಿ ತಪ್ಪಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು ನೀಡಿದರು. ಲಡಾಕ್‌ನಲ್ಲಿ ಹತ್ತು ಸಾವಿರ ಎಕರೆ ಭೂಮಿಯನ್ನು ಚೀನಾ ಅಕ್ರಮಣ ಮಾಡಿಕೊಳ್ಳಲಾಗಿದೆ. ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಹೆಲಿಕ್ಯಾಪ್ಟರ್ ಕಳುಹಿಸದ ಮಹಾಪ್ರಭುಗಳು ಸ್ವಾಮೀಜಿಗಳಿಗೆ ಕಳುಹಿಸುತ್ತಾರೆ. ಈ ಲೋಕಸಭಾ ಚುನಾವಣೆ ಧರ್ಮದ ಆಧಾರದ ಮೇಲೆ ನಡೆಯುವುದಕ್ಕೆ ಬಿಡುವುದಿಲ್ಲ. ನೇಹಾ ಕೊಲೆ ಪ್ರಕರಣವನ್ನು ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಿದರು. ರಾಜ್ಯದಲ್ಲಿ ಕಮಿಷನ್ ದಂಧೆಯಲ್ಲಿ ಮುಳುಗಿದ್ದ ಪಕ್ಷವನ್ನು ಜನರು ಕಿತ್ತು ಹಾಕಿದ್ದಾರೆ ಎಂದರು. ಸಂವಾದದ ಭಾಷಣದಲ್ಲಿ ಪ್ರಕಾಶರಾಜ್ ಮಾತನಾಡುವ ವೇಳೆ ಮೋದಿ ಹೆಸರು ಪ್ರಸ್ತಾಪಿಸದೆ ಮಹಾಪ್ರಭುಗಳು, ಅವನು, ಇವನು ಎಂದು ಏಕವಚನದಲ್ಲಿಯೇ ಕರೆದರು. ಆರಂಭದಿಂದ ಅಂತ್ಯದವರೆಗೆ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ವಾಗ್ದಳಿ ನಡೆಸಿ, ಪರ್ಯಾಯ ನಾಯಕರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ವಿ.ಎಸ್. ಶಿವಶಂಕರ, ಮಾನಯ್ಯ, ಚಾಗನೂರು ಮಲ್ಲಿಕಾರ್ಜುನ ಗೌಡ ಹಾಗೂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts