More

    ದಲಿತರ ಕೇರಿಗೆ ಮೈಸೂರು ಮಹಾರಾಜರು ಭೇಟಿ

    ಬಳ್ಳಾರಿ :ಇಲ್ಲಿನ ಬಿ. ಗೋನಾಳು ಗ್ರಾಮದ ದಲಿತರ ಕಾಲೊನಿಯ ದುರ್ಗಮ್ಮ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅದ್ದೂರಿಯಗಿ ಪಟಾಕಿ ಸಿಡಿಸಿ ಸ್ವಾಗತಿಸಿದರು. ದುರ್ಗಮ್ಮ ಕುಟುಂಬಸ್ಥರಿಂದ ಯದುವೀರ್ ಅವರಿಗೆ ಸನ್ಮಾನ ಮಾಡಿದರು. ದುರ್ಗಮ್ಮ ನಿವಾಸದಲ್ಲಿ ಎಳನೀರು ಕುಡಿದು ದಲಿತರ ಕಾಲೊನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
    ಬಳಿಕ ಮಾತನಾಡಿದ ಅವರು, ಹಂಪಿ, ಅಂಜನಾದ್ರಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಇದೇ ಮೊದಲ ಬಾರಿ ಪ್ರಚಾರಕ್ಕೆ ಬಂದಿರುವೆ. ಮೈಸೂರು ಸಂಸ್ಥಾನ ಹಾಗೂ ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾಪ್ರತಿನಿಧಿಯ ಬಗ್ಗೆ ಉಲ್ಲೇಖಿಸಿದರು. ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತಾ ಬಂದಿದ್ದೇವೆ. ಸಾಮಾನ್ಯ ಜನರ ಜತೆಗೆ ಮೈಸೂರಿನ ಮಹಾರಾಜರು ಸದಾಕಾಲ ಇದ್ದಾರೆ. ಎಲ್ಲರೂ ಒಗ್ಗಾಟ್ಟಾಗಿ ಭಾರತೀಯರಾಗಿ ಇರೋಣ ಎಂದರು. ರಾಜ್ಯದ 28 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ನಾನು ಕೂಡ ಮೈಸೂರಿನಲ್ಲಿ ಗೆಲ್ಲವುದಾಗಿ ವಿಶ್ವಾಸ ವಕ್ತಪಡಿಸಿದರು.
    ಇದಕ್ಕೂ ಮುನ್ನ ನಗರದ ಜೈನ ಮಾರುಕಟ್ಟೆಯಲ್ಲಿ ಜೈನ ಸಮುದಾಯದವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಮೂರನೇ ಶತಮಾನದಲ್ಲಿ ಜೈನ ಲಿಪಿ ಕನ್ನಡದಲ್ಲಿತ್ತು, ಆಗಿನಿಂದಲೇ ಕನ್ನಡಕ್ಕೆ ಜೈನರು ಹೆಚ್ಚಿನ ಮಹತ್ವ ನೀಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಜೈನ ಸಂಸ್ಕ್ರತಿ ಜತೆಗೆ ಭಾರತೀಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ದೇವಸ್ಥಾನಗಳು ಉಳಿಯಲು ಹಾಗೂ ಹಿಂದೂ ಸಮಾಜ ಬೆಳೆಯಲು ವಿಜಯನಗರ ಸಾಮ್ರಾಜ್ಯವೇ ಕಾರಣ. ಧರ್ಮ, ಸಂಸ್ಕ್ರತಿ, ಪರಂಪರೆ ಉಳಿಸಿ ಬೆಳೆಸುವ ಕಲೆಯನ್ನು ನಿಮ್ಮದಾಗಲಿ ಎಂದರು. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರಿದಂದ ಗಣನೀಯವಾಗಿ ಅಭಿವೃದ್ಧಿ ಹೊಂದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts