ಸಿನಿಮಾ

50 ಮೊಬೈಲ್ ಫೋನ್‌ಗಳು ಪತ್ತೆ

ಸಾರ್ವಜನಿಕರು ಕಳೆದುಕೊಂಡಿದ್ದ, ಕಳುವಾಗಿದ್ದ 50 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನವಾಗಿರುವ, ಕಳೆದುಹೋಗಿದ್ದ ಮೊಬೈಲ್‌ಗಳ ಪತ್ತೆಗೆ ಎಸ್‌ಪಿ ಸೀಮಾ ಲಾಟ್ಕರ್ ವಿಶೇಷ ತಂಡ ರಚಿಸಿದ್ದರು. ಅಲ್ಲದೇ, ಸಾರ್ವಜನಿಕರಿಗೆ ಮೊಬೈಲ್ ಪತ್ತೆಗೆಂದೇ ಆರಂಭಿಸಿರುವ ಸಿಐಆರ್ ಪೋರ್ಟಲ್‌ನಲ್ಲಿ ಕಳೆದುಹೋಗಿರುವ ಮಾಹಿತಿ ನೋಂದಾಯಿಸುವಂತೆ ತಿಳಿಸಿದ್ದರು.

ಈ ಮಾಹಿತಿ ಆಧರಿಸಿ ಕಳೆದ 2 ತಿಂಗಳಲ್ಲಿ ಕಳೆದುಹೋಗಿದ್ದ 9 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 50 ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇಲ್ಲಿಯವರೆಗೆ ಸುಮಾರು 130 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎಸ್‌ಪಿ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

Latest Posts

ಲೈಫ್‌ಸ್ಟೈಲ್