More

    ಮಕ್ಕಳ ಮೊಬೈಲ್ ಗೀಳು ಬಿಡಿಸಿ

    ಬಾಗಲಕೋಟೆ: ಮೊಬೈಲ್ ಗೀಳಿನಿಂದ ಸ್ಥೂಲ ಕಾಯ ಉಂಟಾಗುತ್ತಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದ್ದು ಮಕ್ಕಳು ಮೊಬೈಲ್ ಹೆಚ್ಚು ಬಳಸದಂತೆ ಪಾಲಕರು ಕಾಳಜಿ ವಹಿಸಬೇಕು ಎಂದು ಮಕ್ಕಳ ತಜ್ಞ ಡಾ. ರಾಘವೇಂದ್ರ ವನಕಿ ಹೇಳಿದರು.

    ನಗರದ ವಿದ್ಯಾಗಿರಿ 11ನೇ ಕ್ರಾಸ್‌ನ ಜಾಹ್ನವಿ ಶಿಕ್ಷಣ ಸಂಸ್ಥೆಯ ಕಿಡ್ಜಿ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿ, ಪಾಲಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರಿಗೆ ಪೌಷ್ಠಿಕ ಹಾಗೂ ಸಮತೋಲನ ಆಹಾರದ ರೂಢಿಯನ್ನು ಬಾಲ್ಯದಲ್ಲೇ ಬೆಳೆಸಬೇಕು ಎಂದರು.

    ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬಾಗಲಕೋಟೆ ಜಿಲ್ಲಾಧ್ಯಕ್ಷ ಆನಂದ ಜಿಗಜಿನ್ನಿ ಮಾತನಾಡಿ, ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಂಗೀತ, ಚಿತ್ರಕಲೆ, ಆಟ ಹೀಗೆ ಆಸಕ್ತಿ ಇರುವ ವಿಷಯಗಳಲ್ಲೂ ಮಕ್ಕಳು ಸಾಕಷ್ಟು ಸಮಯ ಕಳೆಯುವಂತೆ ಪಾಲಕರು ಹಾಗೂ ಶಿಕ್ಷಕರು ನೋಡಿಕೊಳ್ಳಬೇಕು. ಪ್ರೀತಿಯ ಜತೆಗೆ ಮಕ್ಕಳಿಗೆ ಶಿಸ್ತನ್ನೂ ಕಲಿಸಬೇಕು ಎಂದರು.

    ಜಾಹ್ನವಿ ಶಿಕ್ಷಣ ಸಂಸ್ಥೆಯ ಸದಸ್ಯೆ ಅನುಪಮಾ ಕೊಪ್ಪರ ಮಾತನಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗುರು-ಶಿಷ್ಯರು ಚಿತ್ರದ ದೊಡ್ಡವರೆಲ್ಲ ಜಾಣರಲ್ಲ ಹಾಡಿಗೆ ಚಿಣ್ಣರು ನರ್ತಿಸಿ ಗಮನ ಸೆಳೆದರು. ಪ್ರವೀಣ ಮೆಳ್ಳಿಗೇರಿ, ವೀಣಾ ಮೆಳ್ಳಿಗೇರಿ, ಪವನ ಸೀಮಿಕೇರಿ, ಅನಿತಾ ಸೀಮಿಕೇರಿ, ಪ್ರಾಚಾರ್ಯೆ ರಾಜೇಶ್ವರಿ ದೇಶಪಾಂಡೆ, ಉಮಾ ಸಮಗಂಡಿ, ಮಧು ಹೊನ್ಯಾಳ, ಸೌಭಾಗ್ಯ ಸಾರಂಗಿ, ರೂಪಾ ನಾವಲಗಿ, ಮಂಜುನಾಥ ಅಂಬಿಗೇರ, ಮಹೇಶ ಬಸನಾಳ, ಸಾವಿತ್ರಿ ಪೂಜಾರಿ, ಮಳಿಯಮ್ಮ ಹುಲ್ಲಿಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts