More

    ಉಚಿತ ಮೊಬೈಲ್ ಕೊಟ್ಟು 12.97 ಲಕ್ಷ ಧೋಖಾ..!

    ಬೆಂಗಳೂರು: ನಾಗರಬಾವಿಯ ಇಂಜಿನಿಯರ್‌ವೊಬ್ಬರಿಗೆ ಕೊರಿಯರ್‌ನಲ್ಲಿ ಮೊಬೈಲ್ ಕಳುಹಿಸಿ 12.97 ಲಕ್ಷ ರೂ. ದೋಚಿರುವುದು ಬೆಳಕಿಗೆ ಬಂದಿದೆ.

    ಇದೇ ತಿಂಗಳು 12ರ ಬೆಳಗ್ಗೆ 11.24ಕ್ಕೆ ಅಪರಿಚಿತ ವ್ಯಕ್ತಿ, ದೂರುದಾರ ಇಂಜಿನಿಯರ್‌ಗೆ ಕರೆ ಮಾಡಿ ಸಿಟಿ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದ. ನಿಮ್ಮ ವಿಳಾಸಕ್ಕೆ ಕೊರಿಯರ್‌ನಲ್ಲಿ ಮೊಬೈಲ್ ಕಳುಹಿಸಿದ್ದು, ಅದು ಕೈಸೇರಿದ ಮೇಲೆ ನಮ್ಮ ನಂಬರ್‌ಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿ ಎಂದು ಸೂಚಿಸಿದ್ದ.

    ಅಷ್ಟೊತ್ತಿಗೆ ಕೊರಿಯರ್‌ನಲ್ಲಿ ಮೊಬೈಲ್ ಪಡೆದಿದ್ದ ಇಂಜಿನಿಯರ್, ವಾಟ್ಸ್‌ಆ್ಯಪ್ ಕಾಲ್ ಮಾಡಿದ್ದ. ಸೈಬರ್ ಕಳ್ಳ ಕೊಟ್ಟ ಸಲಹೆಯಂತೆ, ಹೊಸ ಮೊಬೈಲ್‌ನಲ್ಲಿ ಮೊಬೈಲ್ ಪಾಸ್ ಪ್ಲಸ್ ಮತ್ತು ಡಿಒಟಿ ಸೆಕ್ಯೂರ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದ.

    ಸಂಜೆ 6.30ಕ್ಕೆ ಇಂಜಿನಿಯರ್‌ಗೆ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಹೊಸ ಮೊಬೈಲ್‌ಗೆ ನಿಮ್ಮ ಸಿಮ್ ಕಾರ್ಡ್ ಹಾಕಿಕೊಳ್ಳುವಂತೆ ಸಲಹೆ ಕೊಟ್ಟಿದ್ದ. ಅದರಂತೆ ಸಿಮ್ ಕಾರ್ಡ್ ಹಾಕಿಕೊಂಡಾಗ ಕ್ರೆಡಿಟ್ ಕಾರ್ಡ್‌ನಿಂದ 8.32 ಲಕ್ಷ ರೂ. ಮತ್ತು ಸಾಲವಾಗಿ 4.43 ಲಕ್ಷ ರೂ. ಸೇರಿ 12.97 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಸೈಬರ್ ಕಳ್ಳರು ಸೆಳೆದುಕೊಂಡಿದ್ದರು. ನೊಂದ ಇಂಜಿನಿಯರ್ ಪಶ್ಚಿಮ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts