More

    IPL 2024: ಧರ್ಮಶಾಲಾದಲ್ಲಿ ಇಂದು ಪಂಜಾಬ್​-ಸಿಎಸ್​ಕೆ ಫೈಟ್​; ಒತ್ತಡದಲ್ಲಿ ಹಾಲಿ ಚಾಂಪಿಯನ್ಸ್​

    ಧರ್ಮಶಾಲಾ: ಹಾಲಿ ಚಾಂಪಿಯನ್​ ಚೆನ್ನೆ$ ಸೂಪರ್​ಕಿಂಗ್ಸ್​ ಅಸ್ಥಿರ ನಿರ್ವಹಣೆಯಿಂದ ಐಪಿಎಲ್​-17ರ ಅಂಕಪಟ್ಟಿಯಲ್ಲಿ ಏರಿಳಿತ ಕಂಡಿದ್ದು, ಪ್ಲೇಆಫ್​​ ಆಸೆ ಜೀವಂತವಿರಿಸಲು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಭಾನುವಾರ ಹಿಮಾಚಲ ಪ್ರದೇಶದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಆತಿಥೇಯ ಪಂಜಾಬ್​ ಕಿಂಗ್ಸ್​ ಸವಾಲು ಎದುರಿಸಲಿದ್ದು, ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ಹಿಂದಿನ 5 ಮುಖಾಮುಖಿಗಳಲ್ಲಿ ಸಿಎಸ್​ಕೆ ಎದುರು ಗೆಲವು ದಾಖಲಿಸಿರುವ ಪಂಜಾಬ್​ ಇನ್ನೊಂದು ಜಯದೊಂದಿಗೆ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಳ್ಳುವ ವಿಶ್ವಾಸಲ್ಲಿದೆ. ಎರಡೂ ತಂಡಗಳಿಗೆ ಈ ಪಂದ್ಯ “ಮಾಡು ಇಲ್ಲವೇ ಮಡಿ’ ಹೋರಾಟ ಎನಿಸಿದೆ.

    ಮೂರು ದಿನಗಳ ಹಿಂದಷ್ಟೇ (ಮೇ 1) ಚೆಪಾಕ್​ನಲ್ಲಿ ಸಿಎಸ್​ಕೆ ತಂಡವನ್ನು ಮಣಿಸಿರುವ ಪಂಜಾಬ್​ ಕಿಂಗ್ಸ್​ ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 6ರಲ್ಲಿ ಸೋತು 8 ಅಂಕ ಕಲೆಹಾಕಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಲು ಬಾಕಿ ಇರುವ ತನ್ನ ಲೀಗ್​ ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಒತ್ತಡದಲ್ಲಿದೆ. ಇನ್ನು ಸಿಎಸ್​ಕೆ 10 ಪಂದ್ಯಗಳಲ್ಲಿ 5 ಗೆಲುವು-ಸೋಲಿನೊಂದಿಗೆ 10 ಅಂಕ ಕಲೆ ಹಾಕಿದೆ. ಉಳಿದಿರುವ 4 ಪಂದ್ಯಗಳಲ್ಲಿ ಕನಿಷ್ಠ 3ರಲ್ಲಿ ಜಯಿಸಬೇಕಿದೆ. ಆದರೆ 2010ರಲ್ಲಿ ನಾಕೌಟ್​ಗೇರಲು ಗೆಲ್ಲಲೇಬೇಕಾದ ಪಂದ್ಯವನ್ನಾಡಿದ ಸಿಎಸ್​ಕೆ ಕೊನೇ ಓವರ್​ನಲ್ಲಿ ರೋಚಕ ಗೆಲುವು ಕಂಡಿತ್ತು. ಬಳಿಕ ಆ ಆವೃತ್ತಿಯಲ್ಲಿ ಮೊದಲ ಬಾರಿಗೆ ಚಾಂಪಿಯನ್​ ಆಗಿತ್ತು.

    ಋತುರಾಜ್​ ಮೇಲೆ ಅವಲಂಬನೆ
    ಟೂರ್ನಿಯ ಮೊದಲ 6 ಪಂದ್ಯಗಳ ಪೈಕಿ 4ರಲ್ಲಿ ಗೆದ್ದ ಉತ್ತಮ ಆರಂಭ ಕಂಡಿದ್ದ ಸಿಎಸ್​ಕೆ ನಂತರ 4 ಪಂದ್ಯಗಳ ಪೈಕಿ ತವರಿನಲ್ಲಿ 2 ಪಂದ್ಯ ಸೋತಿರುವುದು ಮಾನಸಿಕವಾಗಿ ಕುಗ್ಗಿಸಿದೆ. 2023ರಲ್ಲಿ ಮಧ್ಯಮ ಓವರ್​ಗಳಲ್ಲಿ ಯಶಸ್ಸು ದಾಖಲಿಸಿದ ಶಿವಂ ದುಬೆ ಅವರನ್ನೇ ಈ ಬಾರಿಯೂ ನೆಚ್ಚಿಕೊಂಡಿದೆ. ಜತೆಗೆ ನಾಯಕ ಋತುರಾಜ್​ ಗಾಯಕ್ವಾಡ್​ ಮೇಲೆ ಅತಿಯಾದ ಅವಲಂಬನೆ ಕಂಡಿದೆ. ಅಜಿಂಕ್ಯ ರಹಾನೆ ಫಾಮ್​ರ್ ಕಳವಳಕಾರಿ ಎನಿಸಿದೆ. ರವೀಂದ್ರ ಜಡೇಜಾ, ಸಮೀರ್​ ರಿಜ್ವಿ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಬೇಕಿದೆ.

    ಮುಸ್ತಾಫಿಜುರ್​, ಚಹರ್​ ಅಲಭ್ಯ
    ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್​ ರೆಹಮಾನ್​ ರಾಷ್ಟ್ರೀಯ ತಂಡದ ಕರ್ತವ್ಯಕ್ಕಾಗಿ ಸಿಎಸ್​ಕೆ ತಂಡದ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಜತೆಗೆ ಹಿಂದಿನ ಪಂದ್ಯದಲ್ಲಿ 2 ಎಸೆತಗಳನ್ನಷ್ಟೇ ಎಸೆದ ದೀಪಕ್​ ಚಹರ್​ ಸಹ ಟೂರ್ನಿಯಲ್ಲಿ ಮರಳಿ ಕಣಕ್ಕಿಳಿಯುವುದು ಅನುಮನ ಎನ್ನಲಾಗಿದೆ. ಪಂಜಾಬ್​ ವಿರುದ್ಧ ಪಂದ್ಯಕ್ಕೆ ತುಷಾರ್​ ದೇಶಪಾಂಡೆ ಫಿಟ್​ ಆಗದಿದ್ದರೆ ಚಹರ್​ ಬದಲಿಗೆ ಮುಕೇಶ್​ ಚೌಧರಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಮಥೀಶ ಪಥಿರಣ ಕಣಕ್ಕಿಳಿಯುವ ಸಾಧ್ಯತೆ ಇದೆ.

    ಆತ್ಮವಿಶ್ವಾಸದಲ್ಲಿ ಕರನ್​ ಪಡೆ
    ಸತತ 2 ಪಂದ್ಯಗಳಲ್ಲಿ ಗೆದ್ದು ಕಂಬ್ಯಾಕ್​ ಮಾಡಿರುವ ಪಂಜಾಬ್​ ಕಿಂಗ್ಸ್​ಗೆ ಕಾಯಂ ನಾಯಕ ಶಿಖರ್​ ಧವನ್​ ಸಿಎಸ್​ಕೆ ವಿರುದ್ಧವೂ ಅಲಭ್ಯರಾಗಲಿದ್ದು, ಸ್ಯಾಮ್​ ಕರನ ತಂಡ ಮುನ್ನಡೆಸಲಿದ್ದಾರೆ. ಈಡನ್​ ಗಾರ್ಡನ್ಸ್​ನಲ್ಲಿ ದಾಖಲೆಯ ಚೇಸಿಂಗ್​, ಚೆಪಾಕ್​ ಗೆಲುವಿನೊಂದಿಗೆ ಜಾನಿ ಬೇರ್​ಸ್ಟೋ, ರಿಲೀ ರೋಸೌ ಾಮ್​ರ್ಗೆ ಮರಳಿರುವುದು ಬಲ ತಂದಿದೆ. ಶಶಾಂಕ್​ ಸಿಂಗ್​ ಮತ್ತು ಆಶುತೋಷ್​ ಶರ್ಮ ಜೋಡಿಯನ್ನು ನಿಯಂತ್ರಿಸುವುದು ಪಥಿರಣ ಎದುರಿನ ಮುಂದಿನ ಸವಾಲಾಗಿದೆ. ಹರ್​ಪ್ರೀತ್​ ಬ್ರಾರ್​, ರಾಹುಲ್​ ಚಹರ್​ ಮತ್ತೆ ಸಿಎಸ್​ಕೆ ಎದುರು ಮ್ಯಾಜಿಕ್​ ನಡೆಸುವ ನಿರೀಕ್ಷೆಯಲ್ಲಿದ್ದಾರೆ.

    ಮುಖಾಮುಖಿ: 29
    ಸಿಎಸ್​ಕೆ: 15
    ಪಂಜಾಬ್​: 14
    ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ

    IPL 2024: ಆರ್​ಸಿಬಿಗೆ ಹ್ಯಾಟ್ರಿಕ್​ ಜಯ; ಗುಜರಾತ್​ ವಿರುದ್ಧ ಭರ್ಜರಿ ಬೌಲಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts