More

    ಮೊಬೈಲ್ ಬಳಕೆಯಿಂದ ಗುಬ್ಬಿಗಳ ಸಂತತಿ ಕುಸಿತ

    ಕಂಪ್ಲಿ: ದೂರ ಸಂಪರ್ಕ ಮಾಧ್ಯಮಗಳಿಂದ ಹೋರಾಡುವ ತರಂಗಗಳು ಪಕ್ಷಿ ಸಂಕುಲಕ್ಕೆ ಹಾನಿಕಾರಕ ಎಂದು ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

    ಇದನ್ನೂ ಓದಿ: ಕಡಲಲ್ಲಿ ಮೀನು ಆಕರ್ಷಕ ದಿಬ್ಬ; ದಡದಲ್ಲಿ ಹಸಿರು ಕವಚ- ಸಮುದ್ರ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ, ಮತ್ಸ್ಯಸಂತತಿ ವೃದ್ಧಿ ಉದ್ದೇಶ

    ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ. ಎ.ಪಿ.ಜೆಅಬ್ದುಲ್ ಕಲಾಂ ಟ್ರಸ್ಟ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಕ್ಷಿ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು.

    ಮೊಬೈಲ್ ಬಳಕೆ ಹೆಚ್ಚಿದಂತೆ ಗುಬ್ಬಿಗಳ ಸಂತತಿ ಕಡಿಮೆಯಾಗುತ್ತಿದೆ. ಕಾಡು ನಾಶ ಮಾಡಿ ಕಾಂಕ್ರೀಟ್ ನಾಡು ನಿರ್ಮಾಣ ಮಾಡುತ್ತಿರುವ ಮನುಷ್ಯ ಪ್ರಾಣಿ ಪಕ್ಷಿಗಳ ನಾಶಕ್ಕೆ ಕಾರಣನಾಗುತ್ತಿದ್ದನೆ. ಅಭಿವೃದ್ಧಿ ಪಥದತ್ತ ನಡೆದರು ಪರಿಸರಕ್ಕೆ ಹಾನಿ ಮಾಡದೆ ಬದಕು ಕಟ್ಟಿಕೊಳ್ಳಬೇಕು ಎಂದರು.

    ತರಂಗಗಳು ಪಕ್ಷಿ ಸಂಕುಲಕ್ಕೆ ಹಾನಿಕಾರಕ

    ಟ್ರಸ್ಟ್ ಅಧ್ಯಕ್ಷ ಅಕ್ಕಿಜಿಲಾನ್ ಮಾತನಾಡಿ, ಪಕ್ಷಿಗಳಿಗೆ ಆಹಾರ, ನೀರು ಮತ್ತು ಸುರಕ್ಷತೆ ದೊರೆತಲ್ಲಿ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮಾನವನ ಚುಟುವಟಿಕೆಗಳಿಂದಾಗಿ ಪ್ರಾಣಿ, ಪಕ್ಷಿಗಳು ಮನುಷ್ಯರಿಂದ ದೂರವಾಗುತ್ತಿದ್ದು, ಪ್ರಾಣಿ ಸಂಗ್ರಹಾಲಯ, ಸಿನಿಮಾ ಮತ್ತು ಅಂತರ್ಜಾಲದಲ್ಲಿ ನೋಡುವಂತಾಗಿದೆ ಎಂದರು.

    ಪ್ರಾಣಿ ಹಾಗೂ ಪಕ್ಷಿಪ್ರಿಯರಾದ ಪಿ.ಜಯಪ್ರಕಾಶಚೌದ್ರಿ, ಮಾಧವರೆಡ್ಡಿ ಅವರನ್ನು ಗೌರವಿಸಲಾಯಿತು. ಉಪ ಪ್ರಾಚಾರ್ಯೆ ಸುಜಾತಾ, ಇಸಿಒ ಟಿ.ಎಂ.ಬಸವರಾಜ, ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‌ಸಾಬ್, ಪದಾಧಿಕಾರಿಗಳಾದ ಮಾಳ್ಗಿ ಸಂತೋಷ, ಯಲ್ಲಪ್ಪ, ಸುಬಾನ್, ಅಕ್ಬರ್, ಪವನ್, ಉಮರ್, ಫಾರೂಕ್, ತಬ್ರೇಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts