ಸಿನಿಮಾ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಆಕ್ರೋಶ; ರಾತ್ರಿಯಿಂದ ಕಾದರೂ 150 ಟಿಕೆಟ್ ಮಾರಿದ ಆರೋಪ…

ಬೆಂಗಳೂರು: ದೇಶದಾದ್ಯಂತ ಐಪಿಎಲ್​ ಬಿಸಿ ಜೋರಾಗಿಯೇ ಇದ್ದು ಬೆಂಗಳೂರಿನಲ್ಲಿ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಕೆಟ್​ಗಳಿಗಾಗಿ ಅಭಿಮಾನಿಗಳು ಇಡಿ ರಾತ್ರಿ ಕಾದರೂ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದು ಟಿಕೆಟ್ ಸಿಗ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಟಿಕೆಟ್ 9 ಸಾವಿರ ಅಂತ ಹೇಳುತ್ತಿದ್ದು ನಿನ್ನೆ ರಾತ್ರಿಯಿಂದ ಬಂದ್ರು ಟಿಕೆಟ್ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ RCB ಅಭಿಮಾನಿಗಳು ಟಿಕೆಟ್ ಸಿಗದಿದ್ದಕ್ಕೆ ನಿರಾಸೆಯಾಗಿದ್ದಾರೆ. ಅನೇಕ ಅಭಿಮಾನಿಗಳು ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ,ಹುಬ್ಬಳ್ಳಿಯಿಂದ ಕ್ರಿಕೆಟ್​ ನೋಡಲು ಬಂದಿದ್ದು ಟಿಕೆಟ್​ಗಾಗಿ ಕಾದು ಕುಳಿತಿದ್ದಾರೆ.

ನಿನ್ನೆ ರಾತ್ರಿಯಿಂದ ಟಿಕೆಟ್ ಗಾಗಿ ಕ್ಯೂ ನಿಂತ್ರು ಬರೀ 150 ಟಿಕೆಟ್ ಅಷ್ಟೇ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಟಿಕೆಟ್ ವಿಚಾರದಲ್ಲಿ ತುಂಬಾ ಮೋಸ ಆಗ್ತಿದೆ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದಾರೆ.

Latest Posts

ಲೈಫ್‌ಸ್ಟೈಲ್