More

    ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ಯಾವುದು ಗೊತ್ತಾ? ಲಕ್ಷಾಂತರ ರೂ. ಬೆಲೆ ಬಾಳುತ್ತೆ ಈ ಐಸ್​ ಕ್ರೀಮ್​​

    ನವದೆಹಲಿ: ಬೇಸಿಗೆ ಕಾಲದಲ್ಲಿ, ಐಸ್ ಕ್ರೀಮ್ ಸವಿಯಲು ತುಂಬಾ ಚೆನ್ನಾಗಿರುತ್ತದೆ. ಹಲವಾರು ವಿಭಿನ್ನ ಪ್ಲೇವರ್​ಗಳಲ್ಲಿ ಐಸ್​​ಕ್ರೀಮ್​​ ಸಿಗುತ್ತದೆ. 1, 2 ರೂಪಾಯಿಂದ ಸಾವಿರಾರು ರೂ. ಬೆಲೆ ಬಾಳುವ ಐಸ್​​ಕ್ರೀಮ್​ ಬಗ್ಗೆ ಕೇಳಿದ್ದೇವೆ. ಆದರೆ ಜಪಾನಿನಲ್ಲಿ ಸಿಗುವ ಈ ತಂಪು ತಂಪಾದ ಈ ಐಸ್​​ಕ್ರೀಮ್​​ ಬೆಲೆ ಕೇಳಿದ್ರೆ ಶಾಕ್​ ಆಗುವುದು ಹೌದು.

    ಜಪಾನಿನ ಕಂಪನಿಯೊಂದು ವಿಶ್ವದ ಅತ್ಯಂತ ದುಬಾರಿ ಐಸ್ ಕ್ರೀಮ್ ತಯಾರಿಸಿದೆ. ಈ ಐಸ್​​ಕ್ರೀಮ್​ನ ಹೆಸರು ಬೈಕುಯಾ. ಜಪಾನ್‌ನಲ್ಲಿ ತಯಾರಿಸಲಾದ ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಮ್‌ನ ಬೆಲೆ 873,400 ಜಪಾನೀಸ್ ಯೆನ್ (ಅಂದಾಜು 5.2 ಲಕ್ಷ ರೂ.) ಲಕ್ಷಕ್ಕಿಂತಲೂ ಹೆಚ್ಚಾಗಿದೆ. ದುಬಾರಿ ಬೆಲೆಯ ಈ ಐಸ್​ಕ್ರೀಮ್​ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ.

    ಈ ಐಸ್ ಕ್ರೀಂ ಅನ್ನು ಯಾರು ತಯಾರಿಸಿದ್ದಾರೆ ಮತ್ತು ಅದು ಏಕೆ ದುಬಾರಿಯಾಗಿದೆ?

    ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ , ವಿಶ್ವ ದಾಖಲೆಯನ್ನು ಪಡೆಯುವ ಪ್ರಯತ್ನದಲ್ಲಿ, ಜಪಾನಿನ ಐಸ್ ಕ್ರೀಮ್ ಕಂಪನಿ ಸೆಲ್ಲಾಟೊ ದುಬಾರಿ ಮತ್ತು ಅಪರೂಪದ ಪದಾರ್ಥಗಳನ್ನು ಬಳಸಿಕೊಂಡು ಅಸಾಧಾರಣವಾದ ಸಾಧನೆ ಮಾಡಿದೆ. ಇಟಲಿಯ ಆಲ್ಬಾದಲ್ಲಿ ಬೆಳೆದ ಬಿಳಿ ಟ್ರಫಲ್ ಪರ್ಮಿಜಿಯಾನೋ ರೆಗ್ಗಿಯಾನೊ ಮತ್ತು ಸೇಕ್ ಲೀಸ್‌ನಂತಹ ಪದಾರ್ಥಗಳನ್ನು ಬಳಸಿದ್ದಾರೆ. ಟ್ರಫಲ್ ಪರ್ಮಿಜಿಯಾನೋ ಒಂದು ಪದಾರ್ಥಕ್ಕೆ 11 ಲಕ್ಷ ರೂ. ಆಗಿದೆ. ಈ ಎಲ್ಲಾ ಪದಾರ್ಥವನ್ನು ಬಳಸಿಕೊಂಡು ಈ ದುಬಾರಿ ಬೆಲೆಯ ಐಸ್​ಕ್ರೀಮ್​​ ತಯಾರಿಸಲಾಗಿದೆ.

    ಅತ್ಯಂತ ದುಬಾರಿ ಐಸ್ ಕ್ರೀಂ ತಯಾರಿಸುವುದೊಂದೇ ಸೆಲಾಟೊ ಅವರ ಗುರಿಯಾಗಿರಲಿಲ್ಲ. ಅವರು ಐಸ್ ಕ್ರೀಮ್ ರೂಪದಲ್ಲಿ ಯುರೋಪಿಯನ್ ಮತ್ತು ಜಪಾನೀಸ್ ಪದಾರ್ಥಗಳನ್ನು ಒಟ್ಟಿಗೆ ಬೆಸೆಯಲು ಬಯಸಿದ್ದರು. ಇದನ್ನು ಮಾಡಲು, ಸೆಲಾಟೊ ತನ್ನ ಕಾಲ್ಪನಿಕ ಸಮ್ಮಿಳನ ಪಾಕಪದ್ಧತಿಗೆ ಹೆಸರುವಾಸಿಯಾದ ಒಸಾಕಾದ ರೆಸ್ಟೋರೆಂಟ್ ರಿವಿಯ ಮುಖ್ಯ ಬಾಣಸಿಗ ತದಯೋಶಿ ಯಮಡಾ ಅವರನ್ನು ಕರೆತಂದು ಈ ಐಸ್​​ಕ್ರೀಮ್​ ತಯಾರಿಸಲಾಗಿದೆ.

    ಸೆಲ್ಲಾಟೊ ಪ್ರತಿನಿಧಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಬಗ್ಗೆ ಮಾತನಾಡಿ, ” ಈ ಐಸ್​ಕ್ರೀಮ್​ ತಯಾರಿಸಲು ನಮಗೆ 1.5 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು, ರುಚಿಯನ್ನು ಸರಿಯಾಗಿ ಪಡೆಯಲು ಸಾಕಷ್ಟು ಪ್ರಯೋಗಗಳು ಮತ್ತು ದೋಷಗಳು ಆಗಿವೆ. ಗಿನ್ನೆಸ್ ವಿಶ್ವ ದಾಖಲೆಯ ಶೀರ್ಷಿಕೆಯನ್ನು ಸಾಧಿಸುವ ಪ್ರಯತ್ನವು ಸಾರ್ಥಕವಾಗಿದೆ” ಎಂದಿದ್ದಾರೆ.

    ಸಚಿವ ಸ್ಥಾನಕ್ಕೆ ಲಾಬಿ; ದೆಹಲಿಗೆ ಹೊರಟ ಕೈ ಶಾಸಕರು ಯಾರ್‍ಯಾರು ಗೊತ್ತಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts