ವಾಲುತ್ತಿದೆ ಜಗತ್ತಿನ ಅತಿ ಎತ್ತರದ ಶಿವನ ದೇವಾಲಯ; ASIನಿಂದ ಎಚ್ಚರಿಕೆ

Shiva temple
Published on

ಡೆಹ್ರಾಡೂನ್​: 8ನೇ ಶತಮಾನದಲ್ಲಿ ಕಟ್ಯೂರಿ ಅರಸರು ನಿರ್ಮಿಸಿದ್ದ ತುಂಗನಅಥ ದೇವಾಲಯವನ್ನು ವಿಶ್ವ ಅತಿ ಎತ್ತರದ ಶಿವನ ದೇವಾಲಯ ಎಂದು ಕರೆಯಲಾಗುತ್ತದೆ.

ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗರ್ವಾಲ್​ ಎಂಬ ಪ್ರದೇಶದಲ್ಲಿರುವ ದೇವಾಲಯ ದೇಶ-ವಿದೇಶಗಳಲ್ಲಿ ನೆಲೆಸಿರುವ ಭಕ್ತರಿಗೆ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ.

ವಾಲುತ್ತಿದೆ ದೇವಾಲಯ

ಇತ್ತೀಚಿಗೆ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ  ಜಗತ್ತಿನ ಅತಿ ಎತ್ತರದ ಶಿವ ದೇವಾಲಯ ಕೂಡಾ ವಾಲುತ್ತಿರುವ ಸುದ್ದಿ ಆಘಾತ ತಂದಿದೆ. 

worlds-highest-shiva-temple-tungnath-tilting-by-five-six-degrees-says-asi (1)

ಹಿಮಾಲಯದ ರುದ್ರಪ್ರಯಾಗ ಜಿಲ್ಲೆಯಲ್ಲಿ 12,073 ಅಡಿ ಎತ್ತರದಲ್ಲಿರುವ ತುಂಗನಾಥ ದೇವಾಲಯವು ಐದರಿಂದ ಆರು ಡಿಗ್ರಿಗಳಷ್ಟು ವಾಲುತ್ತಿದೆ. ಇದಲ್ಲದೆ, ದೇವಾಲಯದ ಸಂಕೀರ್ಣದಲ್ಲಿನ ಸಣ್ಣ ರಚನೆಗಳು 10 ಡಿಗ್ರಿಗಳಷ್ಟು ವಾಲುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸ್ಮಾರಕವಾಗಿಸಲು ಸಕಲ ಸಿದ್ದತೆ

ಈ ಕುರಿತು ಪ್ರತಿಕ್ರಿಯಿಸಿರುವ ಪುರಾತತ್ವ ಇಲಾಖೆಯ ಅಧಿಕಾರಿ ಮನೋಜ್​ ಕುಮಾರ್​ ಮೊದಲು ದೇವಾಲಯದ ಸುತ್ತ ಆಗಿರುವ ಹಾನಿಯ ಕುರಿತು ಕಾರಣಗಳನ್ನು ಕಂಡುಕೊಳ್ಳಬೇಕಿದೆ. ಕೂಲಂಕುಷವಾಗಿ ಪರಿಶೀಲನೆ ನಡೆಸಿದ ನಂತರ ಆಗಬೇಕಿರುವ ಕಾರ್ಯದ ಕುರಿತು ಪಟ್ಟಿಯನ್ನು ಸಿದ್ದಪಡಿಸಲಾಗುವುದು.

ಸರ್ಕಾರ ದೇವಾಲಯವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರಿ ಅರ್ಜಿಯನ್ನು ಸಹ ಆಹ್ವಾನಿಸುತ್ತಿದೆ ಎಂದು ಮನೋಜ್​ ಕುಮಾರ್​ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net