'ಹೀರಾಮಂಡಿ': ಹೊಸ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್

heramandi
Published on

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹೀರಾಮಂಡಿ ದಿ ಡೈಮಂಡ್ ಬಜಾರ್' ಬುಧವಾರ(ಮೇ 1) ನೆಟ್‌ಫ್ಲಿಕ್ಸ್ ನಲ್ಲಿ ತೆರೆ ಕಂಡಿದೆ.

ಬನ್ಸಾಲಿ ಅವರ 14 ವರ್ಷದ ಸತತ ಪ್ರಯತ್ನದ ಫಲವಾಗಿ ಹೀರಾಮಂಡಿ ನಿರ್ಮಾಣವಾಗಿದ್ದು, ನೆಟ್ಪ್ಲಿಕ್ಸ್ ನಲ್ಲಿ ತೆರೆ ಕಂಡಿದೆ. ಚಿತ್ರವು ಒಟ್ಟು ಎಂಟು ಎಪಿಸೋಡ್‌ಗಳಲ್ಲಿದ್ದು, ಪ್ರತಿಯೊಂದು ಸಹ ಒಂದು ಗಂಟೆಯಿಂದ 50 ನಿಮಿಷದ ಎಪಿಸೋಡ್ ಗಳಾಗಿವೆ.

ಹೀರಾಮಂಡಿ ಸಿನಿಮಾ ಬಹು ದೊಡ್ಡ ಕಥಾ ಹಂದರವನ್ನು ಹೊಂದಿದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಬೆಳೆಯುತ್ತಿದ್ದ ಅಶಾಂತಿಯ ನಡುವೆ ಪ್ರತಿಸ್ಪರ್ಧಿಗಳನ್ನು ಎದುರಿಸಿ ಅಧಿಪತ್ಯ ಸಾಧಿಸಲು ವೇಶ್ಯೆಯರ ಮನೆಯ ನಾಯಕಿ ಮಲ್ಲಿಕಾ ಜಾನ್ ಬಗ್ಗೆ ಕತೆಯನ್ನೊಳಗೊಂಡಿದೆ.

ಒಂದು ಕಾಲದಲ್ಲಿ ದೇಶದ ಅತ್ಯಂತ ಪುರಾತನ ವೇಶ್ಯಾಗೃಹವಾಗಿದ್ದ ಹೀರಾಮಂಡಿಯಲ್ಲಿರುವ ವೇಶ್ಯೆಯರ ಜೀವನದ ಬಗ್ಗೆ ಬೆಳಕು ಚೆಲ್ಲುವ ಕಥಾಹಂದರವನ್ನು ಈ ವೆಬ್ ಸಿರಿಸ್ ಹೊಂದಿದೆ. ಅಂದಹಾಗೆ ಈ ಹೀರಾಮಂಡಿ ಇರುವುದು ಪಾಕಿಸ್ತಾನದ ಈಗಿನ ರಾಜಧಾನಿ ಲಾಹೋರ್‌ನಲ್ಲಿ. ಇದು ವಿಭಜನೆಗೂ ಮೊದಲು ಭಾರತದ ಅತ್ಯಂತ ಪುರಾತನ ವೇಶ್ಯಾಗೃಹ ಎಂಬ ಕುಖ್ಯಾತಿ ಹೊಂದಿತ್ತು.  ಆದರೆ ಈ ಕುಖ್ಯಾತ ಪ್ರದೇಶಕ್ಕೆ ಇದ್ದ ಮೊಘಲರ ನಂಟು ಕುರಿತಾಗಿಯೂ ಕಥೆ ಬೆಳಕು ಚೆಲ್ಲುತ್ತದೆ.

ಹಿಂದಿ ವೆಬ್ ಸರಣಿಯು ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ ಮತ್ತು ರಿಚಾ ಚಡ್ಡಾ ಅವರಂತಹ ಬಾಲಿವುಡ್ ತಾರೆಯರನ್ನು ಒಳಗೊಂಡಿದೆ.

ಮಿತಾಕ್ಷರ ಕುಮಾರ್ ವೆಬ್ ಸರಣಿಯ ಸಹ ನಿರ್ದೇಶಕರು. ನೆಟ್‌ಫ್ಲಿಕ್ಸ್ ಒರಿಜಿನಲ್ ಅನ್ನು ಮೇ 1ರಂದು ಬಿಡುಗಡೆ ಮಾಡಲಾಯಿತು. ಇದು ವಿಮರ್ಶಕರಿಂದ ಹೆಚ್ಚು ಧನಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net