ಬೀದಿ ನಾಯಿಗಳ ದಾಳಿ; ಉದ್ಯಾನವನದಲ್ಲಿ ಆಟವಾಡುತ್ತಿದ್ದ 7ವರ್ಷದ ಬಾಲಕ ಮೃತ್ಯು

Stray Dogs 2 Jul 20
Published on

ಹೈದರಾಬಾದ್​: ಉದ್ಯಾನವನದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಗುಂಪೊಂದು ಕಚ್ಚಿ ಕೊಲೆ ಮಾಡಿರುವ ಘಟನೆ ಹೈದರಾಬಾದಿನ ವಾರಂಗಲ್​-ಕಾಜಿಪೇಟ್​ ಪ್ರದೇಶದಲ್ಲಿರುವ ರೈಲ್ವೇ ಕಾಲೋನಿಯಲ್ಲಿ ನಡೆದಿದೆ.

ಉತ್ತರಪ್ರದೇಶದಿಂದ ವಲಸೆ ಬಂದಿದ್ದ ಬೀದಿ ಬದಿ ವ್ಯಾಪರಸ್ಥರ ಕುಟುಂಬಕ್ಕೆ ಸೇರಿದ್ದ ಚೋಟು(7) ಮೃತ ದುರ್ದೈವಿ ಎಂದು ತಳಿದು ಬಂದಿದೆ.

ನಾಯಿಗಳ ಅಟ್ಯಾಕ್​

ಚೋಟು ಉದ್ಯಾನವನದಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಶ್ವಾನವೊಂದು ಚೋಟು ಕತ್ತಿನ ಭಾಗವನ್ನು ಕಚ್ಚಿದ್ದು ದೇಹಾದಾದ್ಯಂತ ಪರಚಿದ ಗಾಯಗಳಾಗಿವೆ.

Spot Verification
ಘಟನೆ ನಡೆದ ಸ್ಥಳ

ಕೂಡಲ್ಲೇ ಅಲ್ಲಿದ್ದ ಸ್ಥಳೀಯರು ಬಾಲಕನನ್ನು ಹತ್ತಿರದ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಚೋಟು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಹೆಚ್ಚಿದ ಹಾವಳಿ

ಆಸ್ಪತ್ರೆಗೆ ವಾರಂಗಲ್​ ಪಶ್ಚಿಮ ಕ್ಷೇತ್ರದ ಶಾಸಕ ದಾಸ್ಯಂ ವಿನಯ್​ ಭಾಸ್ಕರ್​, ಹೈದರಾಬಾದ್​ ನಗರ ಪಾಲಿಕೆ ಮೇಯರ್​ ಗುಂಡಾ ಪ್ರಕಾಶ್​ ರಾವ್​ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರದ ಚೆಕ್​ಅನ್ನು ಹಸ್ತಾಂತರಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಬೀದಿ ನಾಯಿ ದಾಳಿ ಮಾಡಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಮಾರ್ಚ್​ ಹಾಗು ಏಪ್ರಿಲ್​ ತಿಂಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net