More

    ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣ; ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ

    ನವದೆಹಲಿ: ಲೋಕಸಬೆ ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಒಬ್ಬರಿಂದ ಲಂಚ ಪಡೆದಿರುವ ಆರೋಪವನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಲೋಕಪಾಲ್​ ನಿರ್ದೇಶನದ ಮೇರೆಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಲೋಕಸಭೆ ಅಧಿವೇಶನದಲ್ಲಿ ಮಹುವಾ ಮೊಯಿತ್ರಾ ಪ್ರಶ್ನೆ ಕೇಳಲು ಉದ್ಯಮಿ ಒಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಲೋಕಪಾಲ್​ಗೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣದ ವಿಚಾರಣೆ ನಡೆಸಿದ ಲೋಕಪಾಲ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆದೇಶಿಸಿತ್ತು.

    ಇದನ್ನೂ ಓದಿ: VIDEO| ಬೋಗಸ್​ ವೋಟಿಂಗ್​ ಆರೋಪ; ರಾಜಸ್ಥಾನದ ಸಿಕಾರ್​ನಲ್ಲಿ ಕಲ್ಲುತೂರಾಟ

    ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ ಟಾಮ್ ಡ್ಯುವೋ ಅವರ ಸರ್ಕಾರವು ನನ್ನ ಪ್ರಯಾಣದ ವಿವರಗಳನ್ನು ಪಡೆಯಲು ಟ್ರಾವೆಲ್​ ಏಜೆಂಟರಿಗೆ ಕರೆ ಮಾಡಿ ಬೆದರಿಸುತ್ತಿದೆ. ಸಾಹಿಬ್​ ಮತ್ತು ಮೋಟಾ ಬಾಯಿ ಗುಜರಾತ್​ನಲ್ಲಿ ಮಹಿಳೆಯರನ್ನು ಹಿಂಬಾಲಿಸಲು ಶುರು ಮಾಡಿದ ಈಗಲೂ ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದೆಯ ವಿಚಾರಣೆ ನಡೆಸಿರುವ ಲೋಕಪಾಲ್​ ಮಹುವಾರನ್ನು ಸಂಸತ್​ ಸದಸ್ಯತ್ವದಿಂದ ಉಚ್ಛಾಟಿಸುವಂತೆ ಶಿಫಾರಸ್ಸು ಮಾಡಿದೆ. ಆದರೆ, ಲೋಕಪಾಲ್​ ಶಿಫಾರಸ್ಸನ್ನು ತಳ್ಳಿಹಾಕಿರುವ ವಿಪಕ್ಷ ಸಂಸದರು ಇದು ಪೂರ್ವನಿಯೋಜಿತ ಎಂದು ಆರೋಪಿಸಿ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts