More

    ಕೋವಿಡ್​ನಂತೆಯೇ ಚೀನಾದಲ್ಲಿ ಭಯ ಹುಟ್ಟಿಸುತ್ತಿರುವ ನ್ಯುಮೋನಿಯಾ

    ನವದೆಹಲಿ: ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಕೋವಿಡ್-19 ಸೋಂಕು ಮೊಟ್ಟಮೊದಲು ಚೀನಾದಿಂದ ಹೊರಹೊಮ್ಮಿತ್ತು. ಇದಾದ ನಾಲ್ಕು ವರ್ಷಗಳ ನಂತರ ಮತ್ತೆ ಹೊಸ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ.ಹೌದು ಉತ್ತರ ಚೀನಾದ ಮಕ್ಕಳಲ್ಲಿ ಉಸಿರಾಟದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೊಸ ಸೋಂಕು ಹುಟ್ಟಿಕೊಂಡಿದೆ ಎಂಬ ಬೆದರಿಕೆಯ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಪ್ರಸ್ತುತ ಹೆಚ್ಚುತ್ತಿರುವ ಸೋಂಕು ಸದ್ಯ ಈಗಾಗಲೇ ತಿಳಿದಿರುವ ವೈರಸ್‌ಗಳ ಮಿಶ್ರಣವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಕೋವಿಡ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರ ದೇಶದಲ್ಲಿ ಆರಂಭಗೊಂಡಿರುವ ಮೊದಲ ಶೀತ ಋತುವಿಗೆ ವೈರಸ್ ಹರಡುತ್ತಿದೆ. ಋತುಮಾನವನ್ನು ಹೊರತುಪಡಿಸಿ ಯಾವುದೇ ಅಸಾಮಾನ್ಯ ಅಥವಾ ಹೊಸ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

    pneumonia outbreak

    ಇದನ್ನೂ ಓದಿ: ಕರ್ನಾಟಕ SSLC ಪರೀಕ್ಷೆ 2024ರಲ್ಲಿ ಗರಿಷ್ಠ ಅಂಕಗಳನ್ನು ಗಳಿಸಲು ವಿಷಯವಾರು ಸಲಹೆಗಳು

    ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ನ.13 ರಂದು ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಉಲ್ಬಣವನ್ನು ಕುರಿತು ವರದಿ ಮಾಡಿತ್ತು.ಇತ್ತೀಚೆಗೆ ಏಕಾಏಕಿ ಹೆಚ್ಚುತ್ತಿರುವ ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸ ಜ್ವರ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಐಸಿಎಂಆರ್ ಮತ್ತು ಆರೋಗ್ಯ ಸೇವೆಗಳ ಮಹಾನಿರ್ದೇಶಕರು ಪ್ರಕರಣಗಳನ್ನು ಗಮನಿಸುತ್ತಿದ್ದು , ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಅಗತ್ಯ ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

    ಗುರುವಾರ ಬೀಜಿಂಗ್‌ನ ಮಕ್ಕಳ ಆಸ್ಪತ್ರೆಯಲ್ಲಿ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ನ್ಯುಮೋನಿಯಾ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.ವರದಿಯ ನಂತರ “ಚೀನಾದಿಂದ ಬರುತ್ತಿರುವ ಹೊಸ ವೈರಸ್ ಹಾಗೂ ಹೊಸ ಕೋವಿಡ್” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಹಿಂದಿನ ಸಾಂಕ್ರಾಮಿಕ ದಿನಗಳನ್ನು ನೆನಪಿಸಿದೆ ಎಂದು ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts