More

    VIDEO| ಬೋಗಸ್​ ವೋಟಿಂಗ್​ ಆರೋಪ; ರಾಜಸ್ಥಾನದ ಸಿಕಾರ್​ನಲ್ಲಿ ಕಲ್ಲುತೂರಾಟ

    ಜೈಪುರ: 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ಇಂದು (ನವೆಂಬರ್ 25) ಮತದಾನ ನಡೆಯುತ್ತಿದ್ದು, ಆಡಳಿತರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಗಿಲು ಮುಟ್ಟಿದೆ. ಇದೀಗ ಎರಡು ಅಭ್ಯರ್ಥಿಗಳ ನಡುವಿನ ವಾಕ್ಸಮರದಿಂದಾಗಿ ಕಲ್ಲೆಸೆತ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

    ರಾಜಸ್ಥಾನದ ಸಿಕಾರ್​ನಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಹಕಂ ಅಲಿ ಖಾನ್ ಮತ್ತು ಸ್ವತಂತ್ರ ಅಭ್ಯರ್ಥಿ ಮಧುಸೂದನ್ ಭಿಂಡಾ ನಡುವಿನ ವಾಕ್ಸಮರ ಕಲ್ಲೆಸೆತಕ್ಕೆ ಕಾರಣವಾಗಿದ್ದು, ಘಟನೆಯಲ್ಲಿ ಓರ್ವ ಪೊಲೀಸ್​ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​ಗೆ ಮೋದಿ ಭೇಟಿ; ಪ್ರಧಾನಿ ನಡೆಯನ್ನು ಹಾಡಿಹೊಗಳಿದ ಮಾಜಿ ಕೋಚ್

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮ್​ಪ್ರಸಾದ್, ವಾರ್ಡ್​ ನಂ 40ರ ಬೋಚಿವಾಲ ಭವನ ಮತಗಟ್ಟೆಯಲ್ಲಿ ಘಟನೆ ಸಂಭವಿಸಿದ್ದು, ಅಡ್ಡಮತದಾನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ವಾಕ್ಸಮರದಿಂದಾಗಿ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ.

    ಘಟನೆಯಲ್ಲಿ ಪೊಲೀಸ್​ ಅಧಿಕಾರಿ ರಾಕೇಶ್​ ಗಂಭೀರವಾಗಿ ಗಾಯಗೊಂಢಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಗುಂಪುಗಳನ್ನು ಚದುರಿಸಲಾಗಿದ್ದು, ಈ ರೀತಿಯ ಘಟನೆಗಳು ಮರುಕಳಿದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಎಲ್ಲರಿಗೂ ಭದ್ರತೆ ಒದಗಿಸಲಾಗಿದ್ದು, ಜನರು ತಪ್ಪದೇ ಮತದಾನ ಮಾಡಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಮ್​ಪ್ರಸಾದ್​ ಜನತೆಯಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts