More

  ಶಾಪಿಂಗ್ ಮಾಲ್​ನಲ್ಲಿ ಅಗ್ನಿ ಅವಘಡ; 11 ಮಂದಿ ಮೃತ್ಯು

  ಕರಾಚಿ: ಪಾಕಿಸ್ತಾನದ ಶಾಪಿಂಗ್​ ಮಾಲಗ್​ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 11 ಮಂದಿ ಸಜೀವದಹನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

  ಶಾಪಿಂಗ್​ ಮಾಲ್​ನ ಎರಡನೇ ಮಹಡಿಯಲ್ಲಿ ದುರ್ಘಟನೆ ಸಂಭವಿಸಿದ್ದು, 6ನೇ ಮಹಡಿವರೆಗೂ ಬೆಂಕಿ ಆವರಿಸಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

  ಇದನ್ನೂ ಓದಿ: ಡಿಕೆಶಿ ವಿರುದ್ಧದ ಸಿಬಿಐ ಕೇಸ್​ ವಾಪಸ್; ಸತ್ಯಹರಿಶ್ಚಂದ್ರರಾಗಿದ್ದರೆ ತನಿಖೆಯ ಭಯವೇಕೆ ಎಂದ ಆರ್​. ಅಶೋಕ್​

  ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಚಾರ ತಿಳಿದು ಸ್ಥಳಕ್ಕೆ 12ಕ್ಕೂ ಹೆಚ್ಚು ಅಗ್ನಿಶಾಂಮಕ ವಾಹನಗಳು ದೌಡಾಯಿಸಿದ್ದು, ಈವರೆಗೂ 42ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮಾಲ್​ನಲ್ಲಿ ಇನ್ನಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

  ಇದು ವಾಣಿಜ್ಯ ಕಟ್ಟಡವಾಗಿದ್ದು, ಮಳಿಗೆಗಳು ಹಾಗೂ ಕಾಲ್​ಸೆಂಟರ್​ಗಳನ್ನು ಹೊಂದಿದೆ. ಕಳೆದ ವರ್ಷವೂ ಸಹ ಶಾರ್ಟ್​ ಸರ್ಕ್ಯೂಟ್​ನಿಂದ ಇದೇ ಮಾಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts